Advertisement

ಸದನಕ್ಕೆ ಕಡ್ಡಾಯವಾಗಿ ಹಾಜರಾಗಲು ಡಿಸಿಎಂ ಪತ್ರ

06:45 AM Jul 08, 2018 | |

ಬೆಂಗಳೂರು: ರಾಜ್ಯ ವಿಧಾನಮಂಡಲದ ಬಜೆಟ್‌ ಅಧಿವೇಶನದಲ್ಲಿ ಸಚಿವರು ಕಲಾಪಗಳಲ್ಲಿ ಪಾಲ್ಗೊಳ್ಳದೆ ಗೈರು ಹಾಜರಾಗುತ್ತಿರುವ ಬಗ್ಗೆ ವಿಧಾಸನಭಾಧ್ಯಕ್ಷ ರಮೇಶ್‌ ಕುಮಾರ್‌ ಸರ್ಕಾರದ ವಿರುದ್ಧ ಚಾಟಿ ಬೀಸಿರುವುದರಿಂದ ಎಚ್ಚೆತ್ತುಕೊಂಡಿರುವ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ಕಾಂಗ್ರೆಸ್‌ನ ಎಲ್ಲ ಸಚಿವರಿಗೂ ಪತ್ರ ಬರೆದಿದ್ದಾರೆ.

Advertisement

ಸಚಿವರು ನಿತ್ಯ ತಮ್ಮ ಹೊಣೆಗಾರಿಕೆ ನಿಭಾಯಿಸಬೇಕು. ಉಭಯ ಸದನದ ಕಲಾಪಗಳಲ್ಲಿ ಕಡ್ಡಾಯವಾಗಿ ಹಾಜರಾಗಬೇಕು. ಎಐಸಿಸಿ ಸಹ ಇದನ್ನು ಗಮನಿಸಲಿದೆ ಎಂದು ಹೇಳಿದ್ದಾರೆ.

ಮೈತ್ರಿಕೂಟ ಸರ್ಕಾರದ ಆಯವ್ಯಯ ಅಧಿವೇಶನ ಆರಂಭವಾಗಿದ್ದು, ಇಲಾಖಾವಾರು ಬೇಡಿಕೆಗೆ
ಅನುಗುಣವಾಗಿ ಮಹತ್ವದ ಚರ್ಚೆಗಳು ನಡೆಯುತ್ತಿವೆ. ಉಭಯ ಸದನಗಳಲ್ಲಿ ಸಚಿವರು ಗೈರು ಹಾಜರಾಗಿರುವ ಬಗ್ಗೆ ಸಭಾಧ್ಯಕ್ಷರು ಮತ್ತು ಸಭಾಪತಿಗಳು ಈಗಾಗಲೇ ಹಲವು ಬಾರಿ ಪ್ರಸ್ತಾಪಿಸಿರುತ್ತಾರೆ. ಅಲ್ಲದೇ ಸದನದಲ್ಲಿ ಸಚಿವರ ಸಮರ್ಪಕ ಕಾರ್ಯ ಚಟುವಟಿಕೆ ಮತ್ತು
ಕ್ರಿಯಾಶೀಲತೆಯನ್ನು ಎಐಸಿಸಿ ವರಿಷ್ಠರು ಗಮನಿಸುತ್ತಿದ್ದು, ವರದಿ ನೀಡಬೇಕಿದೆ. ಹೀಗಾಗಿ, ಕಡ್ಡಾಯವಾಗಿ ಹಾಜರಿರುವಂತೆ ಪತ್ರದಲ್ಲಿ ಪರಮೇಶ್ವರ್‌ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next