Advertisement

ಕಾಂಗ್ರೆಸ್ ಆಡಳಿತದ ಪಾಪದ ಫಲದಿಂದ ಪುಂಡರು ಮೆರೆಯುತ್ತಿದ್ದಾರೆ : ಡಿಸಿಎಂ ಕಾರಜೋಳ

03:22 PM Aug 17, 2020 | keerthan |

ಕೊಪ್ಪಳ: ಕಾಂಗ್ರೆಸ್ ಆಡಳಿತದ ಪಾಪದ ಫಲದಿಂದ‌ ಇಂದು ಪುಂಡ ಪೋಕರಿಗಳು ಮೆರೆಯುತ್ತಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಅವರು ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತ ಟೀಕಿಸಿದರು.

Advertisement

ಕುಷ್ಟಗಿ ತಾಲೂಕಿನ ಹನುಮಸಾಗರದ ಬಳಿ ಸುದ್ದಿಗಾರರ ಜೊತೆ ಮಾತನಾಡಿ, ಇಂದು ಶಾಸಕರನ್ನೂ ಬಿಡದಂತೆ ಪುಂಡ ಪೋಕರಿಗಳನ್ನು ಕಾಂಗ್ರೆಸ್ ಬೆಳಸಿದೆ ಎಂದರು. ಶಾಸಕ ಅಖಂಡ ಶ್ರೀನಿವಾಸ್ ದಲಿತ ಅಥವಾ ಹಿಂದೂ ವಾಖ್ಯಾನದ ಕುರಿತು ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಹಿರಿಯ ರಾಜಕಾರಣಿಯಾಗಿ ಈ ರೀತಿ ಮಾತನಾಡೋದು ಸರಿ ಅಲ್ಲ‌. ಬಸವಣ್ಣ ನಮಗೆ ಹೇಳಿದ್ದು ಒಂದೇ ಕುಲ, ಗಂಡು, ಹೆಣ್ಣು ಎರಡೇ ಜಾತಿ ಎಂದರು.

ಕೆ.ಜಿ.ಹಳ್ಳಿ , ಡಿ.ಜೆ ಹಳ್ಳಿ ಗಲಾಟೆ ಕೇಸ್‌ ನಲ್ಲಿ ಕಾಂಗ್ರೆಸ್ ನವರಿಗೆ ಮತ ಬ್ಯಾಂಕ್ ಮುಖ್ಯ. ಕಾಂಗ್ರೆಸ್ ನವರಿಗೆ ದಲಿತ ಶಾಸಕನ ರಕ್ಷಣೆ ಮುಖ್ಯ ಅಲ್ಲ. 70 ವರ್ಷದಲ್ಲಿ 56 ವರ್ಷ ಕಾಂಗ್ರೆಸ್ ಆಡಳಿತ ಮಾಡಿದರೂ ಯಾರ ರಕ್ಷಣೆ ಮಾಡಿಲ್ಲ. ಯಾರನ್ನೂ ಕಾಂಗ್ರೆಸ್ ಉದ್ದಾರ ಮಾಡಿಲ್ಲ. ಸಂವಿಧಾನದ ಆಶಯದ ಪ್ರಕಾರದ ದೀನ ದಲಿತರ ಉದ್ದಾರ ಆಗಿಲ್ಲ ಎಂದರು.

ಇದನ್ನೂ ಓದಿ: ವಾಟ್ಸಾಪ್ ಮೂಲಕ ಗಲಭೆಗೆ ಜನ ಸೇರಿಸಿದ್ದ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ ಅಧ್ಯಕ್ಷನ ಬಂಧನ

ಇನ್ನೂ ಬೆಂಗಳೂರು ಗಲಭೆ ಪ್ರಕರಣವನ್ನ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ಖರ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣದಲ್ಲಿ ಮ್ಯಾಜೆಸ್ಟ್ರೀಟ್ ತನಿಖೆ ಆರಂಭವಾಗಿದೆ. ವರದಿ ಬಂದ ನಂತರ ಅದು ಯಾರಿಗಾದರೂ ಅಪೂರ್ಣ ಎನಿಸಿದರೆ, ತನಿಖೆಗೆ ಒತ್ತಾಯ ಮಾಡಲಿ ಎಂದರು.

Advertisement

ಇನ್ನೂ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ ಕೆಲವು ತಾಲೂಕಗಳಲ್ಲಿ ಪ್ರವಾಹ ಬಂದಿದೆ. ಆಲಮಟ್ಟಿ ಡ್ಯಾಂ ನಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ‌. ಹಿಡಕಲ್ ಜಲಾಶಯದಿಂದ 40 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಹೀಗಾಗಿ ಜಲಾಶಯದ ಅಕ್ಕ ಪಕ್ಕದ ಜಮೀನಿಗೆ ನೀರು ನುಗ್ಗಿದೆ. ಯಾವುದೇ ಗ್ರಾಮಗಳಿಗೆ ನೀರು ನುಗ್ಗಿಲ್ಲ.  ಜನ ಸುರಕ್ಷತವಾಗಿದ್ದಾರೆ. ನದಿ ದಂಡೆಯಲ್ಲಿ ಅಲ್ಪ ಪ್ರಮಾಣದ ಬೆಳೆ ಹಾನಿಯಾಗಬಹುದು.

ನೀರು ಹೆಚ್ಚಾದರೆ ಜನರ ಸ್ಥಳಾಂತರ ಮಾಡಲು ವ್ಯವಸ್ಥೆ ಮಾಡಲಾಗಿದೆ. ವಸತಿ ಹಾಗೂ ಊಟದ ವ್ಯವಸ್ಥೆ ಮಾಡುತ್ತೇವೆ. ಜನ‌ ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯ ಇಲ್ಲ. ನಾಲ್ಕೈದು ದಿನ ಮಳೆ ಹೆಚ್ಚಾಗುವ ಸಂಭವ ಇದೆ ಎಂದರು.

ಇನ್ನು ಕಳೆದ ಬಾರಿ ಪರಿಹಾರದ ವಿಚಾರದಲ್ಲಿ ಕೆಲವರು ರಾಜಕಾರಣ ಮಾಡುತ್ತಿದ್ದಾರೆ. ಕಳೆದ ವರ್ಷದ ಪರಿಹಾರ ಎಲ್ಲರಿಗೂ ನೀಡಲಾಗಿದೆ. ಈ ಬಾರಿ ಹಾನಿ ಕುರಿತು ಸಮಿಕ್ಷೆ ನಡೆಸಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next