Advertisement
ಈ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ಜಯಂತ ಕೋಟ್ಯಾನ್, ಹಿರಿಯ ಮುಖಂಡರಾದ ಕುಶಾಲಪ್ಪ ಗೌಡ, ಶಾರದಾ ರೈ, ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಬಾಲಕೃಷ್ಣ ಶೆಟ್ಟಿ ಸವಣಾಲು, ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ್ ಕಲ್ಮ.ಜ, ಜಯಂತ ಗೌಡ, ಸುಬ್ತಹ್ಮ ಗೌಡ ಕೈಕುರೆ, ಸೀತಾರಾಮ್ ಬೆಳಾಲು, ರಾಜೇಶ್ ನವಶಕ್ತಿ ಮತ್ತಿರರು ಇದ್ದರು. ಬಳಿಕ ನೆರೆ ಸಂದರ್ಭ ಹಾನಿಗೊಳಗಾದ ಧರ್ಮಸ್ಥಳ ಸ್ನಾನ ಘಟ್ಟ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಮಳೆಗಾಲಕ್ಕೂ ಮುನ್ನ ಹಾನಿಗೊಳಗಾದ ಧರ್ಮಸ್ಥಳ ಸ್ನಾಘಟ್ಟ ಸಮೀಪದ ಕಿಂಡಿ ಅಣೆಕಟ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು. ಈ ಪ್ರದೇಶವು ಮಳೆ ಕಾಡಾಗಿರುವುದರಿಂದ ಪ್ರವಾಸೋದ್ಯಮ ದೃಷ್ಟಿಯಿಂದ ಹಾಗೂ ಯುವ ಸಮೂಹಕ್ಕೆ ಕೌಶಲ್ಯ ಅಭಿವೃದ್ಧಿಗಾಗಿ ಶಾಸಕ ಹರೀಶ್ ಪೂಂಜ ಅವರ ಸಲಹೆಯಂತೆ ಕೈಗಾರಿಕೆ ಮತ್ತು ಉದ್ಯೋಗ ಲಭ್ಯತೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಚಾರ್ಮಾಡಿ ರಸ್ತೆ ಹಾಗೂ ಬೇಸಗೆಯಲ್ಲಿ ಧರ್ಮಸ್ಥಳ ಕ್ಷೇತ್ರ ಸೇರಿದಂತೆ ಈ ಭಾಗದ ಜನತೆಗೆ ನೀರು ಪೂರೈಕೆಗೆ ನೆರಿಯಾ ಹೊಳೆಗೆ ಕಿಂಡಿ ಅಣೆಕಟ್ಟು ಕಟ್ಟುವ ಪ್ರಸ್ತಾವ ಕುರಿತು ಮಾದ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಹಿಂದೆ 14 ಕೋಟಿ ರೂ. ಘೋಷಣೆಯಾಗಿತ್ತು. ಆದರೆ ಸದ್ಯ ಕ್ಯಾಬಿನೆಟ್ ನಲ್ಲಿ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಯಾವುದೇ ಸಮಸ್ಯೆ ಬಾರದಂತೆ ಹೊಸ ಯೋಜನೆ ವಿಚಾರ ಕ್ಯಾಬಿನೆಟ್ ಮುಂದಿಟ್ಟು ಅಗತ್ಯ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗುತ್ತದೆ ಎಂದರು.
Related Articles
Advertisement