Advertisement

ಎರಡು ಕಡೆಯಿದ್ದ 91 ಸಾವಿರ ಮತದಾರರ ಹೆಸರು ಡಿಲೀಟ್: ಡಿಸಿ ಗುರುಕರ್

06:50 PM Nov 09, 2022 | Team Udayavani |

ಕಲಬುರಗಿ: ವಿಧಾನಸಭಾ ಕ್ಷೇತ್ರದೊಳಗೆ ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಪತ್ತೆ ಮಾಡಿ ಒಟ್ಟು 91 ಸಾವಿರ ಮತದಾರರನ್ನು ಮತದಾರ ಪಟ್ಟಿಯಿಂದ ಅಳಿಸಿ ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್ ತಿಳಿಸಿದರು.

Advertisement

‌ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ -2023 ಕರಡು ಪಟ್ಟಿ ಪ್ರಕಟ ಕುರಿತು ವಿವರಣೆ ನೀಡಲು ಕರೆಯಲಾದ ಸುದ್ದಿಗೋಷ್ಠಿ ಈ ವಿಷಯ ತಿಳಿಸಿದರು.

ಒಂದೇ ಕ್ಷೇತ್ರದಲ್ಲಿ ಎರಡು ಕಡೆ ಅಥವಾ ಅದಕ್ಕಿಂತ ಹೆಚ್ಚು ಕಡೆ  ಮತದಾರ ಪಟ್ಟಿಯಲ್ಲಿ ಹೆಸರು ಇರುವುದನ್ನು ಚುನಾವಣಾ ಸಿಬ್ಬಂದಿ ಭಾವಚಿತ್ರ ಹಾಗೂ ಆಯಾ ಮತಗಟ್ಟೆಗೆ ಹೋಗಿ ಪರಿಶೀಲಿಸಿ ಅಳಿಸಿ ಹಾಕಿದ್ದು, ಕಲಬುರಗಿ ಉತ್ತರ ಕ್ಷೇತ್ರದಲ್ಲಿ 17 ಸಾವಿರ, ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ  12 ಸಾವಿರ, ಸೇಡಂ ಕ್ಷೇತ್ರದಲ್ಲಿ 10 ಸಾವಿರ ಮತದಾರರ ನ್ನು ಎರಡು ಕಡೆ ಇರುವುದನ್ನು ಪತ್ತೆ ಮಾಡಿ ಅಳಿಸಲಾಗಿದೆ ಎಂದು ವಿವರಣೆ ನೀಡಿದರು.

ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟಾರೆ 1.84 ಲಕ್ಷ ಮತದಾರರು ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ಕುರಿತಾಗಿ ಪತ್ತೆ ಮಾಡಲಾಗಿ, ಅದರಲ್ಲಿ 91 ಸಾವಿರ ಅಳಿಸಿ ಹಾಕಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯಲ್ಲಿ ಎರಡು ಕಡೆ ಮತದಾನ ಹೊಂದಿರುವ ಕುರಿತಂತೆ ಪತ್ತೆ ಮಾಡುವ ಹಾಗೂ ಅಳಿಸಿ ಹಾಕುವ ಕಾರ್ಯ ಭಾರತ ಚುನಾವಣಾ ಆಯೋಗ ನಿರ್ದೇಶನ ಮೇರೆಗೆ ನಡೆಯುವ ಸಾಧ್ಯತೆ ಗಳಿವೆ. 91 ಸಾವಿರ ಮತದಾರರ ನ್ನು ಪಟ್ಟಿಯಿಂದ ಅಳಿಸಿ ಹಾಕಿದ ನಂತರ ಜಿಲ್ಲೆಯಲ್ಲಿ 21.64 ಲಕ್ಷ ಮತದಾರರು ಉಳಿದಿದ್ದಾರೆ ಎಂದರು.

Advertisement

ತಿಂಗಯ ಪರ್ಯಂತ ಮತದಾರರ ಪಟ್ಟಿ ಪರಿಷ್ಕರಣೆ: ಇಂದಿನಿಂದ ತಿಂಗಳ ಪರ್ಯಂತ ಚುನಾವಣಾ ಸಿಬ್ಬಂದಿಗಳು ಮನೆ- ಮನೆಗೆ ಹೋಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಿದ್ದಾರೆ. ಪ್ರಮುಖವಾಗಿ ಮುಂದಿನ ತಿಂಗಳು 8ರವರೆಗೆ ಪರಿಷ್ಕರಣೆ ಕಾರ್ಯ ನಡೆಯಲಿದ್ದು, ಈ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ. ‌ಹೀಗಾಗಿ ಯುವ ಮತದಾರರು ಸಿಬ್ಬಂದಿ ಮನೆಗ ಬಂದ ಸಂದರ್ಭದಲ್ಲಿ ಸೂಕ್ತ ಮಾಹಿತಿ ಹಾಗೂ ದಾಖಲಾತಿ ಸಲ್ಲಿಸಿ ಹೆಸರು ಸೇರ್ಪಡೆ ಮಾಡಬೇಕೆಂದರು.

ಮತದಾರರ ಪಟ್ಟಿಯಲ್ಲಿ ಯುವಕರ ಹೆಸರು ಕಡಿಮೆ ಅನುಪಾತ ಹೊಂದಿರುವುದನ್ನು ಕಂಡು ಬಂದಿರುವುದರಿಂದ ಯುವಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಹೆಚ್ಚಿನ ಆಸಕ್ತಿ ತಳೆಯಬೇಕೆಂದರು.

ಜನವರಿ 5ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಲು ಸೂಕ್ತ ಅವಕಾಶ ಇರೋದ್ರಿಂದ ಎಲ್ಲ ರೂ ಮತದಾರರ ಪಟ್ಟಿ ಪರಿಷ್ಕರಣೆ ಈ ಅವಕಾಶ‌ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಅಂಗವಿಕಲರು, ತೃತೀಯ ಲಿಂಗಗಳು ತಾವು ಹೇಳುವ ಲಿಂಗವನ್ನೇ ಪಟ್ಟಿ ಯಲ್ಲಿ ನಮೂದಿಸಲಾಗುವುದು.ಅಂಗ ವಿಕಲರನ್ನು ಸಹ ಅಳವಡಿಸಲು ಆಸಕ್ತಿ ವಹಿಸಲಾಗಿದೆ. ಒಟ್ಟಾರೆ ಈ ಸಂಬಂದ ಒತ್ತಡ ಇಲ್ಲ ಎಂದು ಡಿಸಿ ಗುರುಕರ್ ತಿಳಿಸಿದರು. ‌ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next