Advertisement

ಆರೋಗ್ಯ ಕೇಂದ್ರಗಳಿಗೆ ಡೀಸಿ ಭೇಟಿ ನೀಡಿ; ಪರಿಶೀಲನೆ

06:02 PM Mar 24, 2021 | Team Udayavani |

ಚಾಮರಾಜನಗರ: ಮೂಲೆಹೊಳೆ ಚೆಕ್‌ಪೋಸ್ಟ್‌ ಭೇಟಿ ನೀಡಿ, ಕೋವಿಡ್ ನಿಯಂತ್ರಣ ಸಂಬಂಧಕೈಗೊಂಡಿರುವ ಕ್ರಮ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ, ಗುಂಡ್ಲುಪೇಟೆ ತಾಲೂಕಿನ ವಿವಿಧ ಆರೋಗ್ಯ ಕೇಂದ್ರಗಳಿಗೆ ಮಂಗಳವಾರ ಭೇಟಿ ನೀಡಿಆರೋಗ್ಯ ಸೌಲಭ್ಯಗಳು, ಕೋವಿಡ್‌ ಲಸಿಕೆ ಅಭಿಯಾನ ಕಾರ್ಯವನ್ನು ವೀಕ್ಷಿಸಿದರು.

Advertisement

ಐ.ಟಿ.ಐ ಉನ್ನತೀಕರಣ ಕಾಮಗಾರಿ, ಶತಮಾನ ಕಂಡ ಶಾಲೆಗಳ ಅಭಿವೃದ್ಧಿ ಸಂಬಂಧ ಪರಿಶೀಲನೆ ನಡೆಸಿದರು.ಗುಂಡ್ಲುಪೇಟೆ ತಾಲೂಕಿನ ಕಗ್ಗಳ ಹುಂಡಿ ಪ್ರಾಥಮಿಕಆರೋಗ್ಯ ಕೇಂದ್ರ, ಬೇಗೂರಿನ ಸಮುದಾಯ ಆರೋಗ್ಯಕೇಂದ್ರಕ್ಕೆ ಭೇಟಿ ನೀಡಿ, ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಆರೋಗ್ಯ ಪೂರಕ ಸೇವಾ ವ್ಯವಸ್ಥೆಗಳನ್ನುಪರಿಶೀಲಿಸಿದರು. ಸಮುದಾಯ ಆರೋಗ್ಯ ಕೇಂದ್ರದಲ್ಲಿಎಷ್ಟು ಜನರಿಗೆ ಪ್ರಯೋಜನವಾಗುತ್ತಿದೆ. ಯಾವ ಬಗೆಯ ಆರೋಗ್ಯ ತಪಾಸಣೆ ಪರೀಕ್ಷೆಗಳು ನಡೆಸ ಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದರು.

ಇತರರಿಗೂ ಮನವರಿಕೆ ಮಾಡಿ: ಕೋವಿಡ್‌ ಲಸಿಕೆ ನೀಡುವ ಕಾರ್ಯ ನಿರ್ವಹಣೆಯನ್ನು ಪರಿಶೀಲಿಸಿದಅವರು, ಕೋವಿಡ್‌ ಲಸಿಕೆ ಪಡೆಯಲು ಆಗಮಿಸಿದ್ದ ಹಿರಿಯ ನಾಗರಿಕರೊಂದಿಗೆ ಸಮಾಲೋಚಿಸಿದರು.ಲಸಿಕೆ ಪಡೆಯಲು ಯಾವುದೇ ಭಯ ಪಡಬೇಡಿ.ರೋಗ ತಡೆಗೆ ಲಸಿಕೆ ಪಡೆಯುವುದರಿಂದ ಅನುಕೂಲವಾಗಲಿದೆ. ಈ ಬಗ್ಗೆ ಇತರರಿಗೂ ಮನವರಿಕೆ ಮಾಡಿಕೊಡಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಕೆರೆ ಶುಚಿಗೊಳಿಸಿ: ಇದೇ ವೇಳೆ ಆರೋಗ್ಯ ಕೇಂದ್ರ ಮುಂಭಾಗದಲ್ಲಿರುವ ಕೆರೆ ಕಲುಷಿತ ಆಗಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ, ಅಲ್ಲಿನ ಪಿಡಿಒ ಅನ್ನುಕರೆಯಿಸಿ, ನರೇಗಾ ಅಡಿ ಕೆರೆ ಶುಚಿಗೊಳಿಸಬೇಕು. ಕೆರೆಅಭಿವೃದ್ಧಿ ಕೆಲಸ ಕೈಗೊಂಡ ಬಗ್ಗೆ ತಹಶೀಲ್ದಾರ್‌ಗೆ ವರದಿ ಮಾಡಬೇಕು ಎಂದು ಸೂಚಿಸಿದರು.

ಐಟಿಐ, ಶತಮಾನ ಶಾಲೆಗೆ ಭೇಟಿ: ಬೇಗೂರಿನಲ್ಲಿರುವ ಕೈಗಾರಿಕಾ ತರಬೇತಿ ಸಂಸ್ಥೆಗೆ ಭೇಟಿ ನೀಡಿ ಅಲ್ಲಿ ಟಾಟಾಟೆಕ್ನಾಲಜಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡಿರುವಉನ್ನತೀಕರಣ ಕಾಮಗಾರಿ ಪರಿಶೀಲಿಸಿದರು.ಕಾಲಮಿತಿಯೊಳಗೆ ಗುಣಮಟ್ಟದ ಕೆಲಸನಿರ್ವಹಿಸುವಂತೆ ನಿರ್ದೇಶನ ನೀಡಿದರು. ಶತಮಾನಕಂಡ ಶಾಲೆ ಯೋಜನೆಯಡಿ ಅಭಿವೃದ್ಧಿಗಾಗಿಆಯ್ಕೆಯಾಗಿರುವ ಹಸಗೂಲಿಯಲ್ಲಿರುವ ಹಿರಿಯಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಆಗಬೇಕಿರುವನಿರ್ಮಾಣ ಕಾಮಗಾರಿ ಸಂಬಂಧ ಪರಿಶೀಲನೆ ನಡೆಸಿದರು.

Advertisement

ಈಗಿರುವ ಕಟ್ಟಡದ ಪಾರಂಪರೆಯನ್ನೇ ಉಳಿಸಿಕೊಂಡು ಬಲವರ್ಧನೆ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು. ವಾಕಿಂಗ್‌ ಪಾಥ್‌, ಕೈತೋಟ, ಉದ್ಯಾನಅಭಿವೃದ್ಧಿಗೊಳಿಸಬೇಕು ಎಂದು ಡಾ.ಎಂ.ಆರ್‌.ರವಿ ಸೂಚನೆ ನೀಡಿದರು.

ಕೋವಿಡ್ ಲಸಿಕೆ ಬಗ್ಗೆ ಮನೆಯವರಿಗೆ ತಿಳಿಸಿ: ಇದೇ ವೇಳೆ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿಯವರು ಹೇಗೆ ವ್ಯಾಸಂಗ ಮಾಡುತ್ತಿದ್ದೀರಿ?ಕೋವಿಡ್‌ ಮುನ್ನೆಚ್ಚರಿಕೆಗೆ ಯಾವ ಕ್ರಮತೆಗೆದುಕೊಂಡಿದ್ದೀರಿ? ಎಂದು ಪ್ರಶ್ನಿಸಿದರು. ಕೋವಿಡ್‌ನಿರೋಧಕ ಶಕ್ತಿ ಒದಗಿಸುವ ಲಸಿಕೆ ಪ್ರಯೋಜನವನ್ನುನಿಮ್ಮ ಮನೆಯ ಹಿರಿಯರಿಗೆ ತಿಳಿಸಬೇಕು. ನಿಮ್ಮಸ್ನೇಹಿತರಿಗೂ ಮಾಹಿತಿ ನೀಡಿ ಅವರ ಮನೆಯ ಹಿರಿಯಸದಸ್ಯರು ಲಸಿಕೆ ಪಡೆದುಕೊಳ್ಳುವುದರಿಂದ ಆಗುವಅನುಕೂಲ ಮನವರಿಕೆ ಮಾಡಿಕೊಡಬೇಕೆಂದು ಸಲಹೆ ಮಾಡಿದರು.

ತಹಶೀಲ್ದಾರ್‌ ರವಿಶಂಕರ್‌, ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ, ಪಿಡಬ್ಲ್ಯೂಡಿ ಉಪನಿರ್ದೇಶಕ ಸುರೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಟಿ.ಜವರೇಗೌಡ, ಬಿಇಒ ಶಿವಮೂರ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next