Advertisement

ಕೋವಿಡ್‌ ಬಾಧಿತ ಸ್ಥಳಗಳಿಗೆ ಡೀಸಿ ಭೇಟಿ

12:48 PM Jan 22, 2022 | Team Udayavani |

ಯಳಂದೂರು: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಕೋವಿ ಡ್‌ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಚಾರುಲತಾಸೋಮಲ್‌ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

Advertisement

ಪಟ್ಟಣದ ಪೌರ ಕಾರ್ಮಿಕರ ಕಾಲೋನಿತಾಲೂಕಿನ ಮದ್ದೂರು, ಮಾಂಬಳ್ಳಿ ಹಾಗೂಅಗರ ಗ್ರಾಮದ ಕೋವಿಡ್‌ ಪೀಡಿತ ಮನೆಗಳಿಗೆ ಭೇಟಿ ನೀಡಿದರು. ಈ ವೇಳೆ ಸೋಂಕಿತರಸಂಬಂಧಿಗಳು ಕಡ್ಡಾಯವಾಗಿ ಕೋವಿಡ್‌ಪರೀಕ್ಷೆ ಮಾಡಿಸಿಕೊಳ್ಳಬೇಕು. ಅಲ್ಲದೆನೆರೆಹೊರೆಯವರು ಹಾಗೂ ಇವರ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳೆಲ್ಲರೂ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ಬಗ್ಗೆ ಆಶಾ,ಅಂಗನವಾಡಿ ಹಾಗೂ ಆರೋಗ್ಯ ಸಿಬ್ಬಂದಿ ಸೂಕ್ತಮಾಹಿತಿ ಕಲೆ ಹಾಕಿ ಕಡ್ಡಾಯವಾಗಿ ಕೋವಿಡ್‌ಪರೀಕ್ಷೆ ಮಾಡಿಸುವಂತೆ ಮನವೊಲಿಸಬೇಕು ಎಂದು ಸೂಚನೆ ನೀಡಿದರು.

ರೋಗ ಬಾಧಿತ ಮನೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ಬಗ್ಗೆ ಸಂಬಂಧಪಟ್ಟಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿಮಾಹಿತಿ ಕಲೆ ಹಾಕಿ ಸ್ಯಾನಿಟೈಸ್‌ ಮಾಡಬೇಕು.ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು.ಸಾರ್ವಜನಿಕರೂ ಇಂತಹ ಸಂದರ್ಭದಲ್ಲಿಇಲಾಖೆ ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ತಹಶೀಲ್ದಾರ್‌ ವೈ.ಎಂ. ನಂಜಯ್ಯ,ತಾಲೂಕು ಆರೋಗ್ಯಾಧಿಕಾರಿ ಡಾ.ಮಂಜುನಾಥ್‌, ಇಒ ಉಮೇಶ್‌, ಪಪಂ ಮುಖ್ಯಾಧಿಕಾರಿ ಇತರರಿದ್ದರು.

ಜಿಲ್ಲಾಧಿಕಾರಿಗಳು ಬಂದು ಹೋದ ನಂತರ ಪಟ್ಟಣದ ಪೌರ ಕಾರ್ಮಿಕರ ಕಾಲೋನಿಯಲ್ಲಿಕೋವಿಡ್‌ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿಅಲ್ಲಿರುವ ಅಕ್ಕಪಕ್ಕದ ಮನೆಯವರಿಗೆ ಆರೋಗ್ಯ ಇಲಾಖೆಯಿಂದ ಕೋವಿಡ್‌ ಪರೀಕ್ಷೆ ನಡೆಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next