Advertisement

ಬಡಾಎರ್ಮಾಳು ಕಡಲ್ಕೊರೆತ ಪ್ರದೇಶಕ್ಕೆ ಡಿಸಿ ಭೇಟಿ

01:37 AM Aug 01, 2019 | sudhir |

ಪಡುಬಿದ್ರಿ: ಉಚ್ಚಿಲ ಬಡಾ ಗ್ರಾಮದ ಎರ್ಮಾಳು ಬಡಾದಲ್ಲಿ ಸಮುದ್ರ ಕೊರೆತ ತೀವ್ರಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್‌, ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಅಧಿಕಾರಿಗಳ ತಂಡವು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

Advertisement

ಈ ಭಾಗದಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು ಸುರಕ್ಷತೆಗಾಗಿ ಅಳವಡಿಸಲಾಗಿದ್ದ ದೊಡ್ಡ ಗಾತ್ರದ ಕಲ್ಲುಗಳು ಕ‌ಡಲ ಪಾಲಾಗಿವೆ.

ಸಮುದ್ರದ ಅಲೆಗಳ ಮತ್ತಷ್ಟು ಹೊಡೆತ, ಕೊರೆತದಿಂದಾಗಿ 7 ತೆಂಗಿನ ಮರಗಳು ಬುಡ ಸಮೇತವಾಗಿ ಸಮುದ್ರ ಸೆಳೆತಕ್ಕೊಳಗಾಗಿವೆ.
ಜಿ.ಪಂ. ಸದಸ್ಯೆ ಶಿಲ್ಪಾ ಜಿ.ಸುವರ್ಣ ಬುಧವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿದ್ದು, ಜಿಲ್ಲಾಧಿಕಾರಿ, ತಹಶೀಲ್ದಾರರಲ್ಲಿ ಈ ಭಾಗದಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ರಾತ್ರಿ 8 ಗಂಟೆಯ ಸುಮಾರಿಗೆ ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಕೆಪಿಐಡಿಎಲ್‌ ಅಧಿಕಾರಿ ಕೃಷ್ಣ ಹೆಬ್ಟಾರ್‌, ಪ್ರಭಾರ ಪ್ರವಾಸೋದ್ಯಮ ಇಲಾಖಾಧಿಕಾರಿ ಚಂದ್ರಶೇಖರ್‌, ರೆವೆನ್ಯೂ ಇನ್‌ಸ್ಪೆಕ್ಟರ್‌ ರವಿಶಂಕರ್‌, ಗ್ರಾಮ ಲೆಕ್ಕಿಗರಾದ ಜಗದೀಶ್‌,
ಶ್ಯಾಮ ಸುಂದರ್‌, ಆರುಣ್‌, ಬಡಾ ಗ್ರಾ. ಪಂ.ಸದಸ್ಯ ಶಿವಕುಮಾರ್‌ ಮೆಂಡನ್‌, ಗ್ರಾ. ಪಂ.ಸಿಬಂದಿ ಶಶಿಕಾಂತ್‌ ಪೂಜಾರಿ, ಸ್ಥಳೀಯರಾದ ಉದಯ ಕುಮಾರ್‌, ಶಿವಾಜಿ ಅಮೀನ್‌, ರೋಹಿದಾಸ್‌ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

ನಡಿಪಟ್ಣಕ್ಕೂ ಭೇಟಿ
ಪಡುಬಿದ್ರಿ ನಡಿಪಟ್ಣ ಶ್ರೀ ವಿಷ್ಣು ಭಜನ ಮಂದಿರ ಪರಿಸರದಲ್ಲಿಯೂ ಕಡಲ್ಕೊರೆತದ ಭೀತಿ ಇದ್ದುದರಿಂದ ಜಿಲ್ಲಾಧಿಕಾರಿ ಪರಿಶೀಲಿಸಿದ್ದಾರೆ ಎಂದು ಜಿ.ಪಂ. ಸದಸ್ಯ ಶಶಿಕಾಂತ್‌ ಪಡುಬಿದ್ರಿ ಮಾಹಿತಿ ನೀಡಿದ್ದಾರೆ.

Advertisement

ಮುಕ್ಕದಲ್ಲೂ ಕಡಲ್ಕೊರೆತ
ಸುರತ್ಕಲ್‌: ಇಲ್ಲಿನ ಮುಕ್ಕ ಬಳಿಯ ಸಮುದ್ರ ಕಿನಾರೆಯಲ್ಲಿ ಕಡಲ್ಕೊರೆತ ಉಂಟಾಗಿದ್ದು ಬೃಹತ್‌ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next