Advertisement

ಬೇಂದ್ರೆ ಭವನಕ್ಕೆ ಡಿಸಿ ಭೇಟಿ-ಪರಿಶೀಲನೆ

05:16 PM Dec 13, 2018 | Team Udayavani |

ಧಾರವಾಡ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಸಾಧನಕೇರಿಯ ಬೇಂದ್ರೆ ಭವನ, ಬೇಂದ್ರೆಯವರ ನಿವಾಸ ಹಾಗೂ ಆಲೂರು ವೆಂಕಟರಾವ್‌ ಮನೆಗೆ ಬುಧವಾರ ಜಿಲ್ಲಾಧಿಕಾರಿ ದೀಪಾ ಚೋಳನ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಡಿಸಿ ದೀಪಾ ಚೋಳನ್‌ ಮಾತನಾಡಿ, ಸಾಹಿತ್ಯ ಸಮ್ಮೇಳನದೊಳಗೆ ತಾತ್ಕಾಲಿಕವಾಗಿ ದುರಸ್ತಿ ಮಾಡಿಸುವ ಭರವಸೆ ನೀಡಿದರು. ಇದಲ್ಲದೇ ಎರಡು ದಿನಗಳಲ್ಲಿ ಸಾಧನಕೇರಿ ಹಾಗೂ ಕೆಲಗೇರಿ ಕೆರೆಗೆ ಭೇಟಿ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಇದೇ ಸಂದರ್ಭದಲ್ಲಿ ಪಕ್ಕದಲ್ಲಿನ ಬೇಂದ್ರೆ ಹಾಗೂ ಆಲೂರು ವೆಂಕಟರಾವ್‌ ಅವರ ಮನೆಗೆ ಭೇಟಿ ನೀಡಿದರು. ಜ.4ರಿಂದ ಧಾರವಾಡದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಲಕ್ಷಾಂತರ ಜನರು ಆಗಮಿಸುತ್ತಿದ್ದು, ಬಹುತೇಕ ಸಾಹಿತ್ಯಾಸಕ್ತರು ಬೇಂದ್ರೆ ಭವನ, ಅವರ ಮನೆ ಹಾಗೂ ಸಾಧನಕೇರಿಯ ಕೆರೆಗೆ ಆಗಮಿಸುವ ಸಾಧ್ಯತೆಗಳು ಹೆಚ್ಚು ಇವೆ. ಈ ಹಿನ್ನೆಲೆಯಲ್ಲಿ ಬೇಂದ್ರೆ ಭವನದ ಮುಂಭಾಗ ಬೀಳುವ ಸ್ಥಿತಿಯಲ್ಲಿರುವುದನ್ನು ಹಾಗೂ ಬಣ್ಣ ಹಚ್ಚುವ ಕೆಲಸ ಸೇರಿದಂತೆ ಇತರೆ ಕೆಲಸಗಳಾಗುವ ಕುರಿತು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಬೇಂದ್ರೆ ಟ್ರಸ್ಟ್‌ ಅಧ್ಯಕ್ಷ ಡಾ| ಡಿ.ಎಂ. ಹಿರೇಮಠ ಮಾತನಾಡಿ, ಭವನದ ದುರಸ್ತಿಗಾಗಿ ಸರ್ಕಾರಕ್ಕೆ 30 ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರ ಒಪ್ಪಿಗೆ ಸಿಗುವ ಭರವಸೆ ಇದೆ ಎಂದರು. ರಂಗಾಯಣ ಆಡಳಿತಾಧಿಕಾರಿ ಕೆ.ಎಚ್‌. ಚೆನ್ನೂರ, ದೀಪಕ ಆಲೂರ, ಪ್ರಕಾಶ ಬಾಳಿಕಾಯಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next