Advertisement

ಘಾಟಿ ರಸ್ತೆ ಸುಧಾರಣೆಗೆ ತುರ್ತು ಸಭೆ: “ಉದಯವಾಣಿ’ಜತೆಗೆ ಡಿಸಿ ವಿಶೇಷ ಮಾತುಕತೆ

12:07 AM Nov 04, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಬಹುಮುಖ್ಯವಾಗಿರುವ ಶಿರಾಡಿ, ಚಾರ್ಮಾಡಿ ಹಾಗೂ ಸಂಪಾಜೆ ಘಾಟಿ ರಸ್ತೆಗಳ ಸುಧಾರಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ತುರ್ತಾಗಿ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಸರ್ವ ಕ್ರಮಗಳನ್ನು ಕೈಗೊಳ್ಳಲಾಗು ವುದು ಎಂದು ದ.ಕ. ನೂತನ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ತಿಳಿಸಿದ್ದಾರೆ.

Advertisement

“ಉದಯವಾಣಿ’ ಜತೆಗೆ ವಿಶೇಷ ಮಾತುಕತೆ ನಡೆಸಿದ ನೂತನ ಜಿಲ್ಲಾಧಿಕಾರಿಗಳು, ಶಿರಾಡಿ, ಸಂಪಾಜೆ, ಚಾರ್ಮಾಡಿ ರಸ್ತೆಗಳ ಕೆಲವು ಪ್ರದೇಶ ನಾದುರಸ್ತಿಯಲ್ಲಿದೆ. ಹೀಗಾಗಿ ರಾ.ಹೆ. ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆಯ ಜತೆಗೆ ತುರ್ತಾಗಿ ಸಭೆ ನಡೆಸಿ ರಸ್ತೆ ದುರಸ್ತಿಗೆ ಆದ್ಯತೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯ ಒಟ್ಟು ಅಭಿವೃದ್ಧಿಗೆ ಎಲ್ಲ ಅಧಿಕಾರಿಗಳ ವಿಶೇಷ ಸಭೆಯನ್ನು ಶೀಘ್ರ ನಡೆಸಲಾಗುವುದು. ಎಲ್ಲ ಜನಪ್ರತಿನಿಧಿಗಳ ಜತೆಯೂ ಚರ್ಚೆ ನಡೆಸಲಿದ್ದೇನೆ. ಇಲ್ಲಿರುವ ಸಮಸ್ಯೆ ಹಾಗೂ ಅದಕ್ಕೆ ಪರಿಹಾರ ಕಂಡುಕೊಂಡು ಜನರ ಆಶೋತ್ತರ ಗಳನ್ನು ಈಡೇರಿಸುವೆವು ಎಂದರು.

ಬೀಚ್‌ ಪ್ರವಾಸೋದ್ಯಮಕ್ಕೆ ಆದ್ಯತೆ:

ಮಂಗಳೂರು ನಗರವು ಸಮುದ್ರ ತೀರದಲ್ಲಿರುವ ಕಾರಣದಿಂದ ಪ್ರವಾ ಸೋದ್ಯಮಕ್ಕೆ ಹೆಚ್ಚು ಅವಕಾಶವಿದೆ. ವಾಟರ್‌ ನ್ಪೋರ್ಟ್ಸ್ ಸಹಿತ ವಿವಿಧ ನೆಲೆಯಲ್ಲಿ ಪ್ರವಾಸಿಗರನ್ನು ಆಕರ್ಷಿ ಸಲು ಅವಕಾಶವಿದೆ. ಹೀಗಾಗಿ ಈ ಹಿಂದಿನ ಜಿಲ್ಲಾಧಿಕಾರಿ, ಬಂದರು ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಜತೆಗೆ ಚರ್ಚಿಸಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.

Advertisement

ಅಕ್ರಮ ಮರಳುಗಾರಿಕೆ; ಎಚ್ಚರಿಕೆ: 

ಕಾನೂನು ಬದ್ಧವಾಗಿ ಹಾಗೂ ನಿಯಮಬದ್ಧವಾಗಿ ಮರಳುಗಾ ರಿಕೆಗೆ ಅವಕಾಶವಿದೆ. ಆದರೆ ಪೂರ್ವಾನುಮತಿ ಇಲ್ಲದೆ, ಕಾನೂನು ಬಾಹಿರವಾಗಿ ಮರಳುಗಾರಿಕೆ  ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಬದ್ಧವಾಗಿದೆ ಎಂದರು.

ಸಾರ್ವಜನಿಕರ ಮಧ್ಯೆ ನಿಲ್ಲಬೇಕು! :

ಅಧಿಕಾರಿಗಳು ಸಾರ್ವಜನಿಕರ ಮಧ್ಯೆ ನಿಂತುಕೊಂಡಾಗ ಯಾವುದೇ ಅವ್ಯವಸ್ಥೆ, ಗೊಂದಲಗಳಿಗೆ ಅವಕಾಶವಾಗುವುದಿಲ್ಲ. ಹೀಗಾಗಿ ಅಧಿಕಾರಿಗಳು ಕಚೇರಿ ಬಿಟ್ಟು ಸಾರ್ವಜನಿಕರ ಮಧ್ಯೆ ನಿಲ್ಲಬೇಕು. ಅದನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆಗ ಸಮುದಾಯ, ಪಕ್ಷ ಅಥವಾ ವ್ಯಕ್ತಿಯ ವಿಷಯವೇ ಬರುವು ದಿಲ್ಲ. ಹೀಗಾಗಿ ಸಾರ್ವಜನಿಕರ ಮಧ್ಯೆ ನಾವು ನಿಂತಾಗ ಯಾವುದೇ ಸಮಸ್ಯೆ ಉದ್ಬವವಾಗಲು ಸಾಧ್ಯವೇ ಇಲ್ಲ ಎಂದು ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next