Advertisement

ರೈತರಿಗೆ ಮುಂಗಡ ಹಣ ನೀಡಲು ಡೀಸಿ ಸೂಚನೆ

02:25 PM Aug 18, 2021 | Team Udayavani |

ಮೈಸೂರು: ಕಬ್ಬು ಬೆಳೆಗೆ ಎಫ್ಆರ್‌ಪಿ ದರ ನಿಗದಿಮಾಡುವಂತೆ ಶೀಘ್ರವೇ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಅಲ್ಲಿಯವರೆಗೆ ಕಾರ್ಖಾನೆಯವರು ತಾವುಕಬ್ಬು ಖರೀದಿಸಿರುವ ರೈತರಿಗೆ ಮುಂಗಡ ಹಣ ನೀಡಬೇಕು ಎಂದು ಜಿÇÉಾಧಿಕಾರಿ ಡಾ.ಬಗಾದಿ ಗೌತಮ್‌ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಮಂಗಳವಾರ ಮೈಸೂರು-ಚಾ.ನಗರ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.ಶುಗರ್‌ಕ್ಯಾನ್‌ ಕಂಟ್ರೋಲ್‌ ಆಕr…, 1966 ಪ್ರಕಾರಕಬ್ಬು ಕಟಾವು ಆದ 14 ದಿನದೊಳಗೆ ಹಣ ಪಾವತಿಸಬೇಕು. ಆದರೆ, ಒಂದು ತಿಂಗಳ ಆದರೂ ಪಾವತಿಸಿಲ್ಲಎಂದು ರೈತರು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆ ಪ್ರಧಾನವ್ಯವಸ್ಥಾಪಕ ವೇಲುಸ್ವಾಮಿ, ಸರ್ಕಾರ ಎಫ್ಆರ್‌ಪಿದರ ನಿಗದಿ ಮಾಡಿಲ್ಲ. ದರ ನಿಗದಿಯಾಗುತ್ತಿದ್ದಂತೆಪಾವತಿಸುವುದಾಗಿ ತಿಳಿಸಿದರು.ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ. ಬಗಾದಿಗೌತಮ…, ಎಫ್ಆರ್‌ಪಿ ದರ ನಿಗದಿಗೆ ಸರ್ಕಾರಕ್ಕೆ ಪತ್ರಬರೆಯಲಾಗುವುದು. ಅಲ್ಲಿಯವರಗೆ ರೈತರಿಗೆ ಹಣಪಾವತಿಸುವಂತೆ ಸೂಚಿಸಿದರು.
ಕಳೆದಬಾರಿಟನ್‌ಕಬ್ಬಿಗೆ2,787 ರೂ. ಎಫ್ಆರ್‌ಪಿದರ ನಿಗದಿಯಾಗಿತ್ತು. ಈ ಬಾರಿ 2887 ರೂ.ನಂತೆಮುಂಗಡ ಹಣವಾಗಿ ನೀಡಲು ಕಬ್ಬು ಬೆಳೆಗಾರರುಒತ್ತಾಯಿಸಿದರು. ಕಾರ್ಖಾನೆಯ ಮ್ಯಾನೇಜೆ¾ಂಟ್‌ನೊಂದಿಗೆಚರ್ಚಿಸಿ ಶೀಘ್ರವೇ ಮುಂಗಡಹಣಪಾವತಿಸುವಂತೆ ಹಾಗೂ ಸೆಪ್ಟೆಂಬರ್‌ 1ರಿಂದ ದ್ವಿಪಕ್ಷೀಯಒಪ್ಪಂದನ್ನುಕಟ್ಟುನಿಟ್ಟಾಗಿಅನುಷ್ಠಾನಮಾಡಬೇಕೆಂದುಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆ ಪ್ರಧಾನವ್ಯವಸ್ಥಾಪಕ ವೇಲುಸ್ವಾಮಿಗೆ ಸೂಚಿಸಿದರು.

ಸಮಿತಿ ರಚನೆ: ಹಿಂದಿನ ವರ್ಷದ ಎಫ್ಆರ್‌ಪಿ ದರದಂತೆ ಮುಂಗಡ ಪಾವತಿಸಬೇಕು. ಇದರ ಮೇಲುಸ್ತುವಾರಿಗಾಗಿ ಆಹಾರ ಮತ್ತು ನಾಗರಿಕ ಸರಬರಾಜುಇಲಾಖೆ ಉಪನಿರ್ದೇಶಕಿ ಕುಮುದಾ, ಕೃಷಿ ಜಂಟಿನಿರ್ದೇಶಕರು ಮಹಾಂತೇಶಪ್ಪ ಹಾಗೂ ತೂಕ ಮತ್ತುಅಳತೆ ಇಲಾಖೆಯ ಉಪನಿರ್ದೇಶಕರ ಸಮಿತಿ ರಚನೆಮಾಡಿ ವರದಿ ನೀಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಸಂಘದರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್‌,ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌, ಜಿÇÉಾಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್‌, ಬರಡನಪುರ ನಾಗರಾಜ್‌, ಹಾಡ್ಯ ರವಿ, ಕುರುಬೂರುಸಿದ್ದೇಶ್‌, ಕೆ.ಮಹೇಶ್‌, ಪ್ರಸಾದ್‌ ನಾಯಕ, ಅಂಬಳೆಮಹಾದೇವಸ್ವಾಮಿ, ಶಿವಣ್ಣ, ಮಂಜುನಾಥ್‌,ಕೆರೆಹುಂಡಿ ರಾಜಣ್ಣ ಮತ್ತಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next