Advertisement

Lok Sabha Elections: ಅಂತಾರಾಜ್ಯ ಚೆಕ್‌ಪೋಸ್ಟ್‌ಗಳಲ್ಲಿ ಕಠಿನ ತಪಾಸಣೆಗೆ ಡಿಸಿ ಸೂಚನೆ

12:19 PM Mar 27, 2024 | Team Udayavani |

ಮಂಗಳೂರು: ಅಂತಾರಾಜ್ಯ ಚೆಕ್‌ಪೋಸ್ಟ್‌ಗಳಲ್ಲಿ ಆರ್‌ಟಿಒ, ಅರಣ್ಯ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು ಕಠಿನ ತಪಾಸಣೆ ನಡೆಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಸೂಚಿಸಿದ್ದಾರೆ.

Advertisement

ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗುರುವಾರ ಸಭೆಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಅಕ್ರಮಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

ಇದರೊಂದಿಗೆ ಜಿಲ್ಲೆಯ ಪಾಲನಾ (ಜಾರಿ) ಸಮನ್ವಯದ ನೋಡಲ್‌ ಅಧಿಕಾರಿಗಳಿಗೆ (ಎನ್‌ ಫೋರ್ಸ್‌ಮೆಂಟ್‌ ನೋಡಲ್‌ ಅ ಧಿಕಾರಿಗಳು) ಈಗಾಗಲೇ ತಮ್ಮ ಇಲಾಖೆಯಿಂದ ನೀಡಲಾದ ಎಸ್‌ಒಪಿಯಂತೆ ಕಾರ್ಯ ನಿರ್ವಹಿಸಬೇಕು. ನೋಡಲ್‌ ಅ ಧಿಕಾರಿಗಳು ಎಲೆಕ್ಷನ್‌ ಸಿಜರ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ ತಂತ್ರಾಂಶದ ಬಗ್ಗೆ ತಿಳಿದುಕೊಳ್ಳಬೇಕು. ಎಫ್‌ಎಸ್‌ಟಿ, ಎಸ್‌ಎಸ್‌ಟಿ ತಂಡಗಳು ನೀಡುವ ವಶಪಡಿಸಿಕೊಂಡ ವಸ್ತುಗಳ ವಿವರವನ್ನು ಈ ತಂತ್ರಾಂಶದಲ್ಲಿ ದಾಖಲಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯ ಸಹಾಯಕ ಚುನಾವಣ ಅ ಧಿಕಾರಿಗಳಿಗೆ ವಾಹನದ ಅಗತ್ಯ, ಮಸ್ಟರಿಂಗ್‌, ಡಿ- ಮಾಸ್ಟರಿಂಗ್‌ ಕೇಂದ್ರಗಳು ಹಾಗೂ ಮತದಾನದ ದಿನ ಅಗತ್ಯವಿರುವ ಊಟೋಪಚಾರದ ಅಂದಾಜು ವೆಚ್ಚದ ವಿವರ, ಎಫ್‌ಎಸ್‌ಟಿ, ವಿಎಸ್‌ಟಿ ತಂಡಗಳಿಗೆ ವೀಡಿಯೋ ಮಾಡಲು ಅಗತ್ಯ ಇರುವ ಕೆಮರಾಗಳ ಬಗ್ಗೆ, ಏಕ ಗವಾಕ್ಷಿ ಪದ್ದತಿ ಬಗ್ಗೆ, ಕಂಟ್ರೋಲ್‌ ರೂಂನಲ್ಲಿನ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ಅಪರ ಜಿಲ್ಲಾಧಿಕಾರಿ ಡಾ| ಸಂತೋಷ್‌ ಕುಮಾರ್‌, ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿ ಕಾರಿ ಆಂಟೋನಿ ಮರಿಯಪ್ಪ, ವಾಣಿಜ್ಯ ತೆರಿಗೆ ಇಲಾಖೆಯ ಜೆಸಿಸಿಟಿ ಕುಮಾರ್‌ ನಾಯಕ್‌, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಕವಿತಾ ಶೆಟ್ಟಿ, ಮಂಗಳೂರು ಆದಾಯ ತೆರಿಗೆ ಇಲಾಖೆಯ ಡಿಡಿಐಟಿ ಮಂಜುನಾಥ್‌, ಅಬಕಾರಿ ಇಲಾಖೆಯ ಉಪ ಆಯುಕ್ತ ಟಿ.ಎಂ. ಶ್ರೀನಿವಾಸ್‌ ಸಭೆಯಲ್ಲಿದ್ದರು. ಜಿಲ್ಲೆಯ ಎಲ್ಲ ಸಹಾಯಕ ಚುನಾವಣ ಅಧಿಕಾರಿಗಳು ವೀಡಿಯೋ ಕಾನ ರೆನ್ಸ್‌ ಮೂಲಕ ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next