Advertisement
ಜಿಲ್ಲೆಯ ಎಂಡೋಸಂತ್ರಸ್ತರ ಪುನರ್ವ ಸತಿ ಕಾರ್ಯಕ್ರಮದಡಿ ಸಂತ್ರಸ್ತರ ಕುಂದು ಕೊರತೆಯ ಪ್ರಗತಿ ಪರಿಶೀಲನ ಸಭೆಯು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಪುತ್ತೂರು ನಡೆಯಿತು.
ತಹಶೀಲ್ದಾರ್‌ಗಳು ಕೈಗೊಂಡ ಕ್ರಮದ ಬಗ್ಗೆ ಡಿಸಿ ಪ್ರಶ್ನಿಸಿದರು. ಬಂಟ್ವಾಳ ತಹಶಿ àಲ್ದಾರ್ ರಶ್ಮಿ ಎಸ್.ಆರ್. ಹೊರತುಪಡಿಸಿ ಉಳಿದ ತಹಶೀಲ್ದಾರ್‌ಗಳು ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ನೋ ಟಿಸ್ ನೀಡಲು ಸೂಚಿಸಿದರು. ವಿಟ್ಲ, ಕಾಣಿಯೂರು, ಬೆಳ್ಳಾರೆ, ಪಾಣಾಜೆ ಗಳಲ್ಲಿ ಎಂಡೋಪಾಲನ ಕೇಂದ್ರ ತೆರೆ ಯಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಸರಕಾರದ ಮಂಜೂರಾತಿ ಸಿಕ್ಕ ಬಳàಕ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ನಿದ್ರೆ ಮಾತ್ರೆ: ಪಾಲನ ಕೇಂದ್ರದಲ್ಲಿ ಸಂತ್ರಸ್ತರಿಗೆ ನಿದ್ರೆ ಮಾತ್ರೆ ನೀಡುತ್ತಿರುವ ಆರೋಪದ ಬಗ್ಗೆ ಚರ್ಚೆ ನಡೆಯಿತು. ಕೆಲವೊಂದು ಔಷಧಗಳಲ್ಲಿ ನಿದ್ದೆಯ ಅಮಲು ಇರುತ್ತದೆ. ಈ ಬಗ್ಗೆ ಪೋಷಕರಿಗೆ ಮಾಹಿತಿ ಇಲ್ಲದಿರುವುದು ತಪ್ಪು ಅಭಿಪ್ರಾಯ ಮೂಡಲು ಕಾರಣ. ಪೋಷಕರ ಜತೆ ತಾಲೂಕು ಆರೋಗ್ಯಾಧಿಕಾರಿಗಳು ಕೌನ್ಸೆÕಲಿಂಗ್ ಮಾಡಿ ಮಾಹಿತಿ ನೀಡುವಂತೆ ಡಿಸಿ ಸೂಚಿಸಿದರು.
Related Articles
Advertisement
ಸಮಸ್ಯೆ ಬಿಚ್ಚಿಟ್ಟ ಹೋರಾಟಗಾರಎಂಡೋ ಪೀಡಿತರ ಪರ ಹೋರಾಟಗಾರ ಕೊಕ್ಕಡ ಶ್ರೀಧರ ಮಾತನಾಡಿ, ಅಧಿಕಾರಿಗಳು ಸುಳ್ಳು ಮಾಹಿತಿ ಮೂಲಕ ದಾರಿ ತಪ್ಪಿಸುತ್ತಿದ್ದಾರೆ. ಈ ಬಗ್ಗೆ ಸಾಕ್ಷಿ ಸಹಿತ ದಾಖಲೆ ನೀಡುತ್ತೇನೆ ಎಂದರು. ಪದೇಪದೆ ಸಮಸ್ಯೆಗಳನ್ನು ಪ್ರಸ್ತಾವಿಸಿದಾಗ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಋಣಾತ್ಮಕ ಸಂಗತಿ ಮಾತ್ರ ಹೇಳಬೇಡಿ, ಧನಾತ್ಮಕ ಬದಲಾವಣೆಯ ಬಗ್ಗೆಯೂ ಹೇಳಿ ಎಂದು ಸೂಚಿಸಿದರು. ಸಮಸ್ಯೆಯನ್ನು ಆಳವಾಗಿ ಅರಿತಿರುವ ಕಾರಣ ಪ್ರಸ್ತಾವಿಸಿದೆ ಎಂದು ಅವರು ಗದ್ಗದಿತರಾದ ಘಟನೆಯೂ ನಡೆಯಿತು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಿಮ್ಮ ಹೋರಾಟ, ಕಾಳಜಿಯ ಬಗ್ಗೆ ನಮಗೆ ಅರಿವಿದೆ. ಇದನ್ನು ಎಲ್ಲ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.