Advertisement

ಡಿಸಿ ಮೇಲೆ ಹಲ್ಲೆ ಪ್ರಕರಣ: ಅಮಾಯಕರ ಬಂಧನ

04:04 PM Apr 10, 2017 | Team Udayavani |

ಕುಂದಾಪುರ:  ಕಂಡ್ಲೂರು ಅಕ್ರಮ ಮರಳುಗಾರಿಕೆಯನ್ನು ತಡೆಯಲು ಹೋದ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಅವರ ಹಲ್ಲೆ ಹಾಗೂ ಕೊಲೆ ಯತ್ನ ಪ್ರಕರಣಕ್ಕೆ  ಸಂಬಂಧಪಟ್ಟಂತೆ  ಪೊಲೀಸರು ಅಮಾಯಕರನ್ನು  ಬಂಧಿಸಿದ್ದಾರೆ. ನಿಜವಾದ ಆರೋಪಿಗಳು ಹೊರಗಡೆ ಇದ್ದಾರೆ ಬಂಧಿಸಲಾದ ಅಮಾಯಕ ರನ್ನು ಕೂಡಲೇ ಬಿಡುಗಡೆ ಗೊಳಿಸಬೇಕು ಎಂದು ಆಗ್ರಹಿಸಿ  ಕಂಡ್ಲೂರು ವ್ಯಾಪ್ತಿಯ  ಮಹಿಳೆಯರು  ಹಾಗೂ ಸ್ಥಳೀಯರು ರವಿವಾರ ಬೆಳಗ್ಗೆ  ಕಂಡ್ಲೂರು ಠಾಣೆಯಲ್ಲಿ   ಜಮಾಯಿಸಿ ಪೊಲೀಸರಿಗೆ ದೂರು ನೀಡಿದರು.

Advertisement

ಪೊಲೀಸರು ನಿಜವಾದ ಆರೋಪಿಗಳನ್ನು ಬಿಟ್ಟು , ಅಮಾಯಕರನ್ನು ಬಂಧಿಸುತ್ತಿದ್ದಾರೆ. ನಿಜವಾದ ಆರೋಪಿಗಳನ್ನು ಬಂಧಿಸಿ ನಮಗೆ ಸೂಕ್ತ ನ್ಯಾಯ ಒದಗಿಸಬೇಕು. ಶನಿವಾರ ಸಂಜೆ  ನಾಲ್ವರರನ್ನು  ಪೊಲೀಸರು ಬಂಧಿಸಿದ್ದು,  ಮದುವೆ ಕಾರ್ಯಕ್ರಮಕ್ಕಾಗಿ ರಜೆ ಹಾಕಿ ವಿದೇಶ‌ದಿಂದ ಬಂದವರನ್ನು  ಹಾಗೂ ಈ ಪ್ರಕರಣಕ್ಕೆ ಯಾವುದೇ ಸಂಬಂಧವಿರ ದವರನ್ನು  ಬಂಧಿಸಿರುವುದು ಸರಿಯಲ್ಲ  ಎಂದು ಅವರು ದೂರಿನಲ್ಲಿ ತಿಳಿಸಿದ್ದು,  ನಮಗೆ ನ್ಯಾಯ ದೊರಕದೇ ಇದ್ದಲ್ಲಿ   ಪ್ರತಿಭಟನೆಯ ಹಾದಿ ಹಿಡಯ ಬೇಕಾಗುತ್ತದೆ. ಆದ್ದರಿಂದ ಕೂಡಲೇ ಬಂಧಿತ ಅಮಾಯಕರನ್ನು ಬಿಡುಗಡೆ ಗೊಳಿಸುವಂತೆ ಆಗ್ರಹಿಸಿದರು.

ಜಿಲ್ಲಾಧಿಕಾರಿ ಅವರ ಹೇಳಿಕೆಯಂತೆ ಒಟ್ಟು 50 ಮಂದಿಯ ಮೇಲೆ  ದೂರು ದಾಖಲಿಸಿದ್ದು,  ಈ 50 ಮಂದಿಯನ್ನು ಭರ್ತಿ ಮಾಡುವ ಉದ್ದೇಶದಲ್ಲಿ  ಈ ಪ್ರಕರಣಕ್ಕೆ ಯಾವುದೇ ಸಂಬಂಧವಿರದೇ ಇರುವುದನ್ನು  ಬಂಧಿಸಿರುವುದು  ಸರಿಯಲ್ಲ . ಎಂದು ಮನವಿಯಲ್ಲಿ ತಿಳಿಸಿರುತ್ತಾರೆ.ಈ ನಡುವೆ ಕಂಡ್ಲೂರು ಠಾಣಾಧಿಕಾರಿ ಹಾಗು  ನೆರೆದ ಜನರ ನಡುವೆ ಮಾತಿನ ಚಕಮಕಿ ನಡೆಯಿತು.ಕಂಡ್ಲೂರು ಪೊಲೀಸರು ಮನವಿ ಯನ್ನು ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next