ಬೀದರ: ಬಾಲ್ಯ ವಿವಾಹವೆಂಬಅನಿಷ್ಟ ಪದ್ಧತಿ ನಿರ್ಮೂಲನೆಮಾಡಲು ಸಹಕಾರಿಯಾಗಿಮಕ್ಕಳಿಗೆ ಸಂಪೂರ್ಣ ಬಾಲ್ಯ ಅನುಭವಿಸಲುಅವಕಾಶ ನೀಡಿ, ಬೀದರಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತಜಿಲ್ಲೆಯನ್ನಾಗಿಸಲು ಸಾರ್ವಜನಿಕರುಸಹಕರಿಸಬೇಕು ಎಂದು ಡಿಸಿರಾಮಚಂದ್ರನ್ ಆರ್. ಮನವಿ ಮಾಡಿದ್ದಾರೆ.
ಬಾಲ್ಯ ವಿವಾಹವು ಒಂದುಅಭಿವೃದ್ಧಿಗೆ ಮಾರಕವಾಗಿರುವಸಮಸ್ಯೆಯಾಗಿದೆ. ಬಾಲ್ಯ ವಿವಾಹ ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯ.ಬಾಲ್ಯ ವಿವಾಹವು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಬಾಲ್ಯ ವಿವಾಹ ನಿಷೇಧ ಕಕಾಯ್ದೆ -2006ರ ಪ್ರಕಾರ 18 ವರ್ಷದೊಳಗಿನ ಯಾವುದೇ ಹೆಣ್ಣುಮಗುವಿಗೆ ಹಾಗೂ 21 ವರ್ಷದೊಳಗಿನಯಾವುದೇ ಗಂಡು ಮಗುವಿಗೆ ಮದುವೆಯಾದಲ್ಲಿ ಅದನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕಾಯ್ದೆ ಪ್ರಕಾರ ಬಾಲ್ಯ ವಿವಾಹನಡೆದಲ್ಲಿ ಕೇವಲ ಮದುವೆಯಾಗುವವಯಸ್ಕನಿಗೆ ಹಾಗೂ ಹುಡುಗಿಯ ತಂದೆತಾಯಿಗಳಿಗಲ್ಲದೇ, ಪೂಜಾರಿಗಳು, ಸಂಬಂಧಿಕರು, ಪ್ರೇರೇಪಿಸಿದವರು,ಉತ್ತೇಜನ ನೀಡಿದವರು, ಬಾಲ್ಯವಿವಾಹ ತಡೆಯಲು ವಿಫಲರಾದವರು ಮತ್ತು ಭಾಗವಹಿಸಿದವರು ಎಲ್ಲರೂ ಅಪರಾಧಿಗಳೇ ಆಗುತ್ತಾರೆ. ಅವರ ಮೇಲೆ ಪ್ರಕರಣದಾಖಲಿಸಲು ಅವಕಾಶವಿದೆ.ಕಾಯ್ದೆ ಪ್ರಕಾರ ತಪ್ಪಿತಸ್ಥರಿಗೆಕನಿಷ್ಟ 1 ವರ್ಷದಿಂದ ಗರಿಷ್ಠ2 ವರ್ಷಗಳವರೆಗೆ ಕಾರಾಗೃಹ ಮತ್ತು 1 ಲಕ್ಷ ರೂ.ವರೆಗೆ ದಂಡ ಅಥವಾ ಎರಡನ್ನು ವಿಧಿ ಸಬಹುದಾಗಿದೆ ಎಂದಿದ್ದಾರೆ.
ಕೋವಿಡ್-19 ತುರ್ತು ಸಂದರ್ಭದಲ್ಲಿ ಮಾರ್ಚ್‌ನಿಂದ ಡಿಸೆಂಬರ್ ಒಟ್ಟು 54 ಬಾಲ್ಯ ವಿವಾಹತಡೆಹಿಡಿಯಲಾಗಿದ್ದು, 1 ಬಾಲ್ಯ ವಿವಾಹ ನಡೆದಿರುವುದರಿಂದ ಬಾಲ್ಯವಿವಾಹ ಮಾಡಿದವರ ವಿರುದ್ಧಮನ್ನಾಏಖೇಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿರುವ ಅವರು, ಎಲ್ಲ ಶಾಲೆಗಳಲ್ಲಿ ಬಾಲ್ಯ ವಿವಾಹದ ದುಷ್ಪರಿಣಾಮ ಮತ್ತು ಶಿಕ್ಷೆಯ ಬಗ್ಗೆ ಮಾಹಿತಿ ನೀಡುವ ಜೊತೆಗೆ ಮಕ್ಕಳಿಗೆ ಬಾಲ್ಯ ವಿವಾಹ ಮಾಡುವುದಿಲ್ಲವೆಂದುಪ್ರಮಾಣ ವಚನ ಬೋಧನೆಕಡ್ಡಾಯವಾಗಿ ಮಾಡಿಸತಕ್ಕದ್ದು. ಎಲ್ಲ ಗ್ರಾಪಂಗಳಲ್ಲಿ ಪಿಡಿಒಗಳುಡಂಗುರ ಸಾರಬೇಕು. ಜಿಲ್ಲೆಯಲ್ಲಿಬಾಲ್ಯವಿವಾಹ ನಡೆಯುತ್ತಿರುವುದು ಗಮನಕ್ಕೆ ಬಂದರೆ ತುರ್ತಾಗಿಮಕ್ಕಳ ಸಹಾಯವಾಣಿ-1098,ಪೊಲೀಸ್ ಸಹಾಯವಾಣಿ 100,ಜಿಲ್ಲಾ ಮಕ್ಕಳ ರಕ್ಷಣಾ ಘಟಕದದೂ. 08482-234003ಕೆR ಕರೆಮಾಡಿ, ಅವರ ಗಮನಕ್ಕೆತರಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.