Advertisement

ಹಿಂದೂ ಮಹಾಸಾಗರ ಪ್ರವೇಶಿಸಿದ ಚೀನದ ಬೇಹುಗಾರಿಕಾ ನೌಕೆ

10:28 PM Nov 04, 2022 | Team Udayavani |

ನವದೆಹಲಿ: ಭಾರತದ ಯೋಜಿತ ಕ್ಷಿಪಣಿ ಪರೀಕ್ಷೆಯ ದಿನ ಸಮೀಪಿಸುತ್ತಿದ್ದಂತೆ, ಹಿಂದೂ ಮಹಾಸಾಗರಕ್ಕೆ ಚೀನ ಮತ್ತೊಂದು ಬೇಹುಗಾರಿಕಾ ಹಡಗನ್ನು ಕಳುಹಿಸಿಕೊಟ್ಟಿದೆ.

Advertisement

ಶ್ರೀಲಂಕಾದ ಹಂಬಂತೋಟ ಬಂದರಿನಲ್ಲಿ ಚೀನ ಗೂಢಚರ್ಯೆ ನೌಕೆಯೊಂದನ್ನು ನಿಯೋಜಿಸಿದ ಮೂರು ತಿಂಗಳಲ್ಲೇ ಈ ಬೆಳವಣಿಗೆ ನಡೆದಿದೆ.

ಚೀನದ ಈ ಹೊಸ ಬೇಹುಗಾರಿಕಾ ಹಡಗು ಯುವಾನ್‌ ವಾಂಗ್‌ 6ನ ಚಲನವಲನಗಳನ್ನು ಭಾರತೀಯ ನೌಕಾಪಡೆಯು ಸಕ್ರಿಯವಾಗಿ ಟ್ರ್ಯಾಕ್‌ ಮಾಡುತ್ತಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.

ಕ್ಷಿಪಣಿ ಪರೀಕ್ಷೆಗಳು ಮತ್ತು ಉಪಗ್ರಹಗಳ ಚಲನವಲನಗಳ ಮೇಲೆ ನಿಗಾ ಇಡುವಂತೆಯೇ ಎರಡೂ ಹಡಗುಗಳನ್ನು ವಿನ್ಯಾಸಗೊಳಿಸಲಾಗಿದೆ.

ಯುವಾನ್‌ ವಾಂಗ್‌ 6 ನೌಕೆ ಈಗಾಗಲೇ ಹಿಂದೂ ಮಹಾಸಾಗರವನ್ನು ಪ್ರವೇಶಿಸಿದ್ದು, ಇಂಡೋನೇಷ್ಯಾದ ಬಾಲಿ ಕರಾವಳಿಯಾಚೆ ತಲುಪಿದೆ.

Advertisement

ಒಡಿಶಾ ಕರಾವಳಿಯಾಚೆ ನ.10-11ರ ವೇಳೆಗೆ 2,200 ಕಿ.ಮೀ. ವ್ಯಾಪ್ತಿಯ ಕ್ಷಿಪಣಿಯೊಂದನ್ನು ಪರೀಕ್ಷಿಸಲು ಭಾರತ ಸಿದ್ಧವಾಗುತ್ತಿರುವಂತೆಯೇ ಚೀನ ಗುಟ್ಟಾಗಿ ಈ ನೌಕೆಯನ್ನು ಕಳುಹಿಸಿದೆ ಎಂದು ಹೇಳಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next