Advertisement

ರಂಗನಾಯಕಿ ಹಿಂದೆ ದಯಾಳ್‌

09:17 AM Apr 01, 2019 | Lakshmi GovindaRaju |

ನಿರ್ದೇಶಕ ದಯಾಳ್‌ ಪದ್ಮನಾಭ್‌, ಈಗ “ತ್ರಯಂಬಕಂ’ ಚಿತ್ರ ಬಿಡುಗಡೆ ತಯಾರಿಯಲ್ಲಿದ್ದಾರೆ. ಏಪ್ರಿಲ್‌ 19 ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಈಗಾಗಲೇ ಹೇಳಿಕೊಂಡಿದ್ದಾರೆ. ಆ ಚಿತ್ರ ಬಿಡುಗಡೆ ಮುನ್ನವೇ ಮತ್ತೊಂದು ಚಿತ್ರ ನಿರ್ದೇಶನ ಮಾಡುವ ಬಗ್ಗೆ ಘೋಷಿಸಿದ್ದಾರೆ ದಯಾಳ್‌.

Advertisement

ಅಂದಹಾಗೆ, ಈ ಬಾರಿ ಅವರು “ರಂಗನಾಯಕಿ’ ಹೆಸರಿನ ಚಿತ್ರಕ್ಕೆ ಕೈ ಹಾಕಿದ್ದಾರೆ ಎಂಬುದೇ ವಿಶೇಷ. “ರಂಗನಾಯಕಿ’ ಅಂದಾಕ್ಷಣ, ಥಟ್ಟನೆ ನೆನಪಾಗೋದೇ ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ಎವರ್‌ಗ್ರೀನ್‌ ಚಿತ್ರ “ರಂಗನಾಯಕಿ’. ಹಾಗಂತ, ಆ ಚಿತ್ರಕ್ಕೂ ದಯಾಳ್‌ ನಿರ್ದೇಶಿಸುತ್ತಿರುವ “ರಂಗನಾಯಕಿ’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ.

“ರಂಗನಾಯಕಿ’ ಹೆಸರಲ್ಲೇ ಒಂದು ಫೋರ್ಸ್‌ ಇದೆ. ಆ ಫೋರ್ಸ್‌ ದಯಾಳ್‌ ಅವರ “ರಂಗನಾಯಕಿ’ ಚಿತ್ರದಲ್ಲೂ ಇರಲಿದೆ ಎಂಬುದು ಅವರ ಮಾತು. ಹಾಗಾದರೆ ಈ ಚಿತ್ರದ “ರಂಗನಾಯಕಿ’ ಯಾರು? ಎಂಬ ಪ್ರಶ್ನೆಗೆ ನಟಿ ಅದಿತಿ ಪ್ರಭುದೇವ ಉತ್ತರ. ಹೌದು, ಅದಿತಿ ಇಲ್ಲಿ ನಾಯಕಿಯಾಗಿ ಕಾಣಸಿಕೊಳ್ಳುತ್ತಿದ್ದಾರೆ.

ನಾಯಕರಾಗಿ “ಬೀರ್‌ಬಲ್‌’ ಶ್ರೀನಿ ನಟಿಸುತ್ತಿದ್ದಾರೆ. ಇವರೊಂದಿಗೆ “ಪದ್ಮಾವತಿ’ ಧಾರಾವಾಹಿ ನಾಯಕ ತ್ರಿವಿಕ್ರಮ್‌ ಕೂಡ ನಟಿಸುತ್ತಿದ್ದಾರೆ. ಸದ್ಯಕ್ಕೆ ಈ ಮೂವರು ಪಕ್ಕಾ ಆಗಿದ್ದು, ಇಷ್ಟರಲ್ಲೇ ಇನ್ನುಳಿದ ಕಲಾವಿದರು ಸೇರಿಕೊಳ್ಳಲಿದ್ದಾರೆ ಎಂಬುದು ನಿರ್ದೇಶಕರ ಹೇಳಿಕೆ.

ಏಪ್ರಿಲ್‌ 29 ಕ್ಕೆ “ರಂಗನಾಯಕಿ’ ಚಿತ್ರಕ್ಕೆ ಚಾಲನೆ ಸಿಗಲಿದೆ. “ರಂಗನಾಯಕಿ’ ಕುರಿತು ಹೇಳಿಕೊಳ್ಳುವ ನಿರ್ದೇಶಕ ದಯಾಳ್‌, ಇದೊಂದು ರೇರ್‌ ಸ್ಟೋರಿ ಹೊಂದಿರುವ ಕಥೆ. ಒಂದು ಜರ್ನಿಯಲ್ಲೇ ಎಲ್ಲವನ್ನೂ ಹೇಳುವಂತಹ ಚಿತ್ರ.

Advertisement

ನಾಯಕಿಯದ್ದೇ ಇಲ್ಲಿ ಪ್ರಮುಖ ಅಂಶ. ಒಂದು ಘಟನೆಯಲ್ಲಿ ಸಿಲುಕಿಕೊಳ್ಳುವ ಆಕೆ, ಸಮಾಜವನ್ನು ಹೇಗೆ ಎದುರಿಸುತ್ತಾಳೆ, ಹೋರಾಡುತ್ತಾಳೆ ಮತ್ತು ಬದುಕುತ್ತಾಳೆ ಅನ್ನೋದು ಕಥೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ನವೀನ್‌ಕೃಷ್ಣ ಅವರು ಸಂಭಾಷಣೆ ಬರೆದಿದ್ದಾರೆ.

ಸುಮಾರು 25 ದಿನಗಳ ಕಾಲ ಶೇ.99 ರಷ್ಟು ಬೆಂಗಳೂರಲ್ಲೇ ಚಿತ್ರೀಕರಣಗೊಳ್ಳಲಿದೆ. ಸಿನಿಮಾದಲ್ಲಿ ನಾಯಕಿಯ ಪಾತ್ರ ಬೋಲ್ಡ್‌ ಆಗಿರಲಿದೆ. ತುಂಬಾ ವಿಭಿನ್ನ ಪಾತ್ರವಾಗಿದ್ದು, ಎಲ್ಲರಿಗೂ ಇಷ್ಟವಾಗುವಂತಹ ಚಿತ್ರ ಕೊಡುವ ಪ್ರಯತ್ನ ಮಾಡುತ್ತಿದ್ದೇನೆ. ಮಣಿಕಾಂತ್‌ ಕದ್ರಿ ಸಂಗೀತವಿದೆ. ರಾಕೇಶ್‌ ಛಾಯಾಗ್ರಹಣವಿದೆ. ಸುನೀಲ್‌ ಸಂಕಲನವಿದೆ.

Advertisement

Udayavani is now on Telegram. Click here to join our channel and stay updated with the latest news.

Next