Advertisement

ನಾಳೆ ಕೃಷಿ ಸಚಿವರಿಂದ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ

04:08 PM Feb 27, 2021 | Team Udayavani |

ಹುಬ್ಬಳ್ಳಿ: ರೈತರ ಮನೆ ಬಾಗಿಲಿಗೆ ಸರಕಾರ ಹೋಗುವ “ರೈತರೊಂದಿಗೆ ಒಂದು ದಿನ’ ಉತ್ತಮ ಕಾರ್ಯಕ್ರಮವಾಗಿದ್ದು, ಫೆ. 28ರಂದು ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಜಿಲ್ಲೆಯಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‌-19 ಸಂದರ್ಭದಲ್ಲಿ ರೈತರಿಗೆ ಧೈರ್ಯ ತುಂಬುವ, ರೈತರೊಂದಿಗೆ ಸರಕಾರವಿದೆ ಎನ್ನುವ ಮನೋಸ್ಥೆ çರ್ಯ ನೀಡುವಕಾರ್ಯಕ್ರಮ ಮಾದರಿಯಾಗಿದೆ. ಸರಕಾರದಲ್ಲಿಹೊಸ ಯೋಜನೆ, ಹೊಸ ಪರಿಕಲ್ಪನೆಗೆ ಇದು ಉದಾಹರಣೆಯಾಗಿದೆ. ಈ ಕಾರ್ಯಕ್ರಮದಮೂಲಕ ಸರಕಾರವೇ ರೈತನ ಮನೆ ಬಾಗಿಲಿಗೆ ಹೋಗುವ ಕೆಲಸ ಆಗುತ್ತಿದೆ ಎಂದರು.

ಈಗಾಗಲೇ ಆರು ಜಿಲ್ಲೆಗಳಲ್ಲಿ ರೈತರೊಂದಿಗೆಒಂದು ದಿನ ಕಾರ್ಯಕ್ರಮ ಯಶಸ್ವಿಯಾಗಿನಡೆದಿದೆ. 7ನೇ ಜಿಲ್ಲೆಯಾಗಿ ಧಾರವಾಡ ಆಯ್ಕೆಮಾಡಿಕೊಂಡಿದ್ದಾರೆ. ಫೆ. 28ರಂದು ಬೆಳಗ್ಗೆ 8 ಗಂಟೆಯಿಂದ ಸಚಿವರು ಮೊರಬ, ಶಿರಕೋಳ, ಜಾವೂರು, ಅಳಗವಾಡಿ, ಗೊಬ್ಬರಗುಂಪಿ, ಬೆಳವಟಗಿ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡುವರು. ಗ್ರಾಮದರೈತರೊಂದಿಗೆ ಮಾತುಕತೆನಡೆಸುವರು. ವಿವಿಧಕಾರ್ಯಕ್ರಮಗಳಿಗೆ ಚಾಲನೆ ನೀಡುವರು.ರೈತರ ಜಮೀನುಗಳಲ್ಲಿ ನಡೆಯುವ ಕೃಷಿಚಟುವಟಿಕೆಗಳಲ್ಲಿ ಪಾಲ್ಗೊಳ್ಳುವರು. ಕೃಷಿ ಇಲಾಖೆಯಿಂದ ಆಯೋಜಿಸಿರುವ ಪ್ರಾತ್ಯಕ್ಷಿಕೆಗಳಲ್ಲಿ ಪಾಲ್ಗೊಂಡು ರೈತರಿಗೆ ಕೃಷಿ ಇಲಾಖೆ ಕುರಿತುಮಾಹಿತಿ ನೀಡುವರು. ಬೆಳವಟಿಗೆ ಗ್ರಾಮದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಇದರೊಂದಿಗೆ ಕೃಷಿ ಪರಿಕರಗಳ ವಸ್ತು ಪ್ರದರ್ಶನಇರುತ್ತದೆ. ಕೃಷಿ ವಿವಿ, ಕೆವಿಕೆಯಿಂದ ಕೃಷಿ ವಿಜ್ಞಾನಿಗಳು ಪಾಲ್ಗೊಳ್ಳುವರು. ರೈತರ ಹಲವುಪ್ರಶ್ನೆಗಳಿಗೆ ವಿಜ್ಞಾನಿಗಳು ಮಾಹಿತಿ ನೀಡುವ ಕೆಲಸ ಮಾಡಲಿದ್ದಾರೆ. ಸಂಜೆ 4 ಗಂಟೆಗೆ ನವಲಗುಂದದಲ್ಲಿ ಇಲಾಖೆ ಅನುದಾನ, ಕಾರ್ಯಕ್ರಮಗಳು, ಯೋಜನೆಗಳ ಕುರಿತು ರೈತ ಮುಖಂಡರೊಂದಿಗೆ ಚರ್ಚೆ ನಡೆಸುವರು ಎಂದು ತಿಳಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ ಮಾತನಾಡಿ, “ರೈತರೊಂದಿಗೆಒಂದು ದಿನ’ ಕೃಷಿ ಇಲಾಖೆ ಮಹತ್ವದಕಾರ್ಯಕ್ರಮವಾಗಿದೆ. ಸಚಿವರು ರೈತರ ಜಮೀನುಗಳಿಗೆ ತೆರಳಿ ಅವರ ಕಷ್ಟ-ಸುಖಗಳಬಗ್ಗೆ ಖುದ್ದಾಗಿ ತಿಳಿದು ಕೊಳ್ಳಲಿದ್ದಾರೆ. ಈಭಾಗದ ಕೃಷಿ ಚಟುವಟಿಕೆ, ಬೆಳೆ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ರೈತರ ಮೂಲಕವೇ ಪಡೆದುಕೊಳ್ಳಲಿದ್ದಾರೆ. ಈಗಾಗಲೇ ಅವರಕಾರ್ಯಕ್ರಮಕ್ಕೆ ಸೂಕ್ತ ತಯಾರಿ ಮಾಡಲಾಗಿದೆ ಎಂದರು.

Advertisement

ಕೃಷಿ ಇಲಾಖೆ ಉಪ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಹುಬ್ಬಳ್ಳಿ ಸಹಾಯಕ ನಿರ್ದೇಶಕ ರಾಜಶೇಖರ ಅನಗೌಡರ,ನವಲಗುಂದ ಸಹಾಯಕ ನಿರ್ದೇಶಕ ಶ್ರೀನಾಥಚಿಮ್ಮಲಗಿ, ಮುಖಂಡರಾದ ಡಾ| ಎಂ.ಬಿ.ಮುನೇನಕೊಪ್ಪ, ದಾನಪ್ಪಗೌಡ, ಪರಮೇಶ್ವರಯಡ್ರಾಮಿ, ಸಂತೋಷ ಜೀವನಗೌಡ್ರ, ಅಡಿವೆಪ್ಪ ಸೇರಿದಂತೆ ಇನ್ನಿತರರಿದ್ದರು.

ಹೀಗಿದೆ ದಿನಚರಿ : ಫೆ. 28ರಂದು ಬೆಳಗ್ಗೆ 8 ಗಂಟೆಗೆ ಮೊರಬ ಗ್ರಾಮಕ್ಕೆ ಆಗಮಿಸುವ ಕೃಷಿ ಸಚಿವರು ರೈತ ಸಂಪರ್ಕ ಕೇಂದ್ರದ ದಾಸ್ತಾನು ಮಳಿಗೆ ಉದ್ಘಾಟನೆ, 8:25 ಗಂಟೆಗೆ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಖರೀದಿ ಕೇಂದ್ರದ ಉದ್ಘಾಟನೆ, 8:35 ಗಂಟೆಗೆ ಕೃಷಿ ಯಂತ್ರಧಾರೆ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ

ಭಾಗವಹಿಸುವರು.ಬೆಳಗ್ಗೆ 8:50ಕ್ಕೆ ಶಿರಕೋಳಕ್ಕೆ ಆಗಮಿಸಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. 10:35ಕ್ಕೆ ಜಾವೂರು ಗ್ರಾಮಕ್ಕೆ ಆಗಮಿಸಿ ಪಶು ಆಸ್ಪತ್ರೆ ಉದ್ಘಾಟನೆ ಮತ್ತು ಸಿ.ಸಿ. ರಸ್ತೆ ಕಾಮಗಾರಿಗೆ ಭೂಮಿಪೂಜೆ ಮಾಡುವರು. ಬೆಳಗ್ಗೆ 11:20ಕ್ಕೆ ಅಳಗವಾಡಿಗೆ ಆಗಮಿಸಿ ಪಶು ಆಸ್ಪತ್ರೆ ಉದ್ಘಾಟನೆಹಾಗೂ ಸಿ.ಸಿ. ರಸ್ತೆ ಭೂಮಿಪೂಜೆ ಮಾಡುವರು. 11:50 ಗಂಟೆಗೆ ಗೊಬ್ಬರಗುಂಪಿಗೆ ಆಗಮಿಸಿ ರೈತ ಮಹಿಳೆ ಶಂಕ್ರವ್ವ ದ್ಯಾಮನಗೌಡ ಸಿರಸಂಗಿ ಅವರ ಜಮೀನಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಕೃಷಿ ಹೊಂಡ ಮತ್ತು ಬದು ನಿರ್ಮಾಣದ ಚಟುವಟಿಕೆಯಲ್ಲಿ ಭಾಗವಹಿಸುವರು. ಮಧ್ಯಾಹ್ನ 12:25ಕ್ಕೆ ಬೆಳವಟಗಿಗೆ ಆಗಮಿಸಿ ಆನೆಗೊಂದಿ ರೈತನ ಜಮೀನಿನಲ್ಲಿ ಬೆಳೆದ ಪೇರಲಹಣ್ಣಿನ ಬೆಳೆಯ ಕಸಿ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸುವರು. ನಂತರ ಸಚಿವರನ್ನು ಆನೆಗೊಂದಿ ಅವರ ಜಮೀನಿನಿಂದ ಬೆಳವಟಗಿ ಗ್ರಾಮ ವ್ಯಾಪ್ತಿಯಲ್ಲಿರುವ ಕೃಷಿ ವಿವಿಯ ಕೃಷಿ ಸಂಶೋಧನಾ ಘಟಕ (ಎಆರ್‌ಎಸ್‌ ಫಾರಂ) ದವರೆಗೆ ಮೆರವಣಿಗೆಯ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ. ಮಧ್ಯಾಹ್ನ 12:30 ಗಂಟೆಗೆ ಜರುಗುವ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಉದ್ಘಾಟಿಸುವರು. ಕೃಷಿ ವಸ್ತು ಪ್ರದರ್ಶನವನ್ನು ಕೃಷಿ ಸಚಿವ ಬಿ.ಸಿ. ಪಾಟೀಲ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಪಾಲ್ಗೊಳ್ಳಲಿದ್ದು, ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅಧ್ಯಕ್ಷತೆ ವಹಿಸುವರು.

Advertisement

Udayavani is now on Telegram. Click here to join our channel and stay updated with the latest news.

Next