Advertisement

Dawood Ibrahimನ ಮುಂಬೈ ಮತ್ತು ರತ್ನಗಿರಿಯ ಕೋಟ್ಯಂತರ ರೂ. ಆಸ್ತಿ ಜ.5ರಂದು ಹರಾಜು

10:58 AM Dec 23, 2023 | Team Udayavani |

ನವದೆಹಲಿ: ಮುಂಬೈನಿಂದ ಪರಾರಿಯಾಗಿ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಜಾಗತಿಕ ಭಯೋತ್ಪಾದಕ ದಾವೂದ್‌ ಇಬ್ರಾಹಿಂಗೆ ಸೇರಿದ ಮುಂಬೈ ಮತ್ತು ರತ್ನಗಿರಿಯಲ್ಲಿರುವ ನಾಲ್ಕು ಆಸ್ತಿಗಳನ್ನು 2024ರ ಜನವರಿ 5ರಂದು ಹರಾಜು ಹಾಕಲು ಸಿದ್ಧತೆ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:e-KYC: ಗ್ಯಾಸ್ ಸಿಲಿಂಡರ್ ವಿತರಣಾ ಕೇಂದ್ರದಲ್ಲಿ ಇ-ಕೆವೈಸಿಗೆ ಮುಗಿಬಿದ್ದ ಗ್ರಾಹಕರು

ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ರತ್ನಗಿರಿಯ ಖೇಡ್‌ ತಾಲೂಕಿನಲ್ಲಿರುವ ಬಂಗಲೆಗಳು ಹಾಗೂ ಮಾವಿನ ತೋಟ ಸೇರಿದಂತೆ ನಾಲ್ಕು ಆಸ್ತಿಗಳನ್ನು ಕಳ್ಳಸಾಗಣೆ ಮತ್ತು ವಿದೇಶಿ ವಿನಿಮಯ ಕಾಯ್ದೆಯಡಿ(SAFEMA) ಸ್ವಾಧೀನಪಡಿಸಿಕೊಳ್ಳಲಾಗಿತ್ತು.

ಈಗಾಗಲೇ ಮಹಾರಾಷ್ಟ್ರ ಸರ್ಕಾರ ದಾವೂದ್‌ ಇಬ್ರಾಹಿಂ ಕುಟುಂಬಕ್ಕೆ ಸೇರಿದ್ದ ರೆಸ್ಟೋರೆಂಟ್‌ ಅನ್ನು 4.53 ಕೋಟಿ ರೂಪಾಯಿಗೆ ಹರಾಜು ಹಾಕಲಾಗಿತ್ತು. ಅದೇ ರೀತಿ ಆರು ಫ್ಲ್ಯಾಟ್‌ ಗಳನ್ನು 3.53 ಕೋಟಿ ರೂಪಾಯಿಗೆ, ಗೆಸ್ಟ್‌ ಹೌಸ್‌ ಅನ್ನು 3.52 ಕೋಟಿ ರೂಪಾಯಿಗೆ ಹರಾಜು ಹಾಕಲಾಗಿತ್ತು ಎಂದು ವರದಿ ವಿವರಿಸಿದೆ.

2020ರ ಡಿಸೆಂಬರ್‌ ನಲ್ಲಿ ರತ್ನಗಿರಿಯಲ್ಲಿರುವ ದಾವೂದ್‌ ಇಬ್ರಾಹಿಂನ ಎರಡು ನಿವೇಶನ ಮತ್ತು ನಿಷ್ಕ್ರಿಯಗೊಂಡಿದ್ದ ಪೆಟ್ರೋಲ್‌ ಬಂಕ್‌ ಅನ್ನು 1.10 ಕೋಟಿ ರೂಪಾಯಿಗೆ ಹರಾಜು ಹಾಕಲಾಗಿತ್ತು. ಖೇಡ್‌ ತಾಲೂಕಿನ ಲೋಟೆ ಗ್ರಾಮದಲ್ಲಿನ ಈ ಆಸ್ತಿಗಳನ್ನು ದಾವೂದ್‌ ಇಬ್ರಾಹಿಂ ಸಹೋದರಿ ಹಸೀನಾ ಪಾರ್ಕರ್‌ ಹೆಸರಿನಲ್ಲಿ ನೋಂದಾಯಿಸಲಾಗಿತ್ತು.

Advertisement

2019ರ ಏಪ್ರಿಲ್‌ ನಲ್ಲಿ ನಾಗ್‌ ಪಾಡಾದಲ್ಲಿನ 600 ಚದರ ಅಡಿಯ ಫ್ಲ್ಯಾಟ್‌ ಅನ್ನು 1.80 ಕೋಟಿ ರೂಪಾಯಿಗೆ ಹರಾಜು ಮಾಡಲಾಗಿತ್ತು. ಅಲ್ಲದೇ ಪಾಕ್‌ ಮೋಡಿಯ ಸ್ಟ್ರೀಟ್‌ ನಲ್ಲಿ ದಾವೂದ್‌ ಇಬ್ರಾಹಿಂಗೆ ಸೇರಿದ್ದ ಆಸ್ತಿಯನ್ನು 79.43 ಲಕ್ಷ ರೂಪಾಯಿಗೆ ಎಸ್‌ ಎ ಎಫ್‌ ಇಎಂಎ ಅಧಿಕಾರಿಗಳು ಹರಾಜು ಹಾಕಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next