ಹೊಸದಿಲ್ಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಹಿಡಿಯುವುದು ಕಷ್ಟದ ಕೆಲಸವೇನಲ್ಲ. ಇದು ಕ್ಷಣ ಮಾತ್ರದ ಕೆಲಸವಷ್ಟೇ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪ್ರತಿ ಪಾದಿಸಿದ್ದಾರೆ. ಇದಷ್ಟೇ ಅಲ್ಲ, ಪಾಕಿಸ್ಥಾನ ತನ್ನ ಉಗ್ರ ಕೃತ್ಯಗಳನ್ನು ಬಿಡದೆ ಹೋದರೆ ಮತ್ತಷ್ಟು ಸರ್ಜಿಕಲ್ ದಾಳಿಗಳನ್ನು ಎದು ರಿಸುವ ಸಂದರ್ಭ ಬರಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ಸಂದ ರ್ಶನ ನೀಡಿರುವ ಅವರು, ಇತ್ತೀಚಿನ ಬೆಳ ವಣಿಗೆಗಳ ಬಗ್ಗೆ ಮಾತನಾಡಿದರು. ಕಳೆದ
ಸೆಪ್ಟಂಬರ್‌ನಲ್ಲಷ್ಟೇ ಭಾರತ ಸರ್ಜಿಕಲ್ ದಾಳಿ ನಡೆಸಿದೆ. ಇದು ಮತ್ತೆ ಮತ್ತೆ ಮರುಕಳಿಸಬಹುದು. ಆದರೆ ಪಾಕ್ ನಮ್ಮ ನೆರೆಯ ದೇಶವಾಗಿರುವುದ ರಿಂದ ಅದರ ಮೇಲೆ ವಿಶ್ವಾಸ ಇರಿಸಿದ್ದೇವೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವು ದನ್ನು ಬಿಟ್ಟರೆ ಸರಿ, ಇಲ್ಲದಿದ್ದರೆ ದಾಳಿ ಗಳನ್ನು ನಡೆಸುತ್ತೇವೆ ಎಂದು ನೇರವಾಗಿ ಇಸ್ಲಾಮಾಬಾದ್‌ಗೆ ಎಚ್ಚರಿಕೆ ನೀಡಿದ್ದಾರೆ.
ಲಷ್ಕರ್-ಎ-ತಯ್ಯಬಾದ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಗೃಹ ಬಂಧನ ದಲ್ಲಿ ಇರಿಸಿರುವ ಪಾಕಿಸ್ಥಾನದ ಕ್ರಮ ಕೇವಲ ಕಣ್ಣೊರೆಸುವ ತಂತ್ರ ಎಂದು ರಾಜನಾಥ್ ಸಿಂಗ್ ಟೀಕಿಸಿದ್ದಾರೆ. ಒಂದು ವೇಳೆ ಗಂಭೀರವಾಗಿಯೇ ಹಫೀಜ್ ವಿರುದ್ಧ ಕ್ರಮ ತೆಗೆದುಕೊಳ್ಳುವುದೇ ಆದರೆ ಆತನ ಮೇಲೆ ಕೇಸು ದಾಖಲಿಸಿ, ಜೈಲಿಗೆ ಕಳುಹಿಸಲಿ ಎಂದು ಸವಾಲು ಹಾಕಿದ್ದಾರೆ.
ಕ್ಷಣ ಮಾತ್ರದ ಕೆಲಸ: ಬಹಳಷ್ಟು ವರ್ಷಗಳಿಂದ ಭಾರತದ ಪಾಲಿಗೆ ನಿಗೂಢವಾಗಿದ್ದು, ಪಾಕಿಸ್ಥಾನದಲ್ಲೇ ಅಡಗಿರುವ ಭೂಗತ ದೊರೆ ದಾವೂದ್ ಇಬ್ರಾಹಿಂ ಹಿಡಿಯುವುದು ಕಷ್ಟದ ಕೆಲಸವೇನಲ್ಲ ಎಂಬುದು ರಾಜನಾಥ್ ಸಿಂಗ್ ಮಾತು. ಆತನನ್ನು ಸೆರೆಹಿಡಿಯುವುದು ಕ್ಷಣ ಮಾತ್ರದ ಕೆಲಸವಷ್ಟೇ ಆತನನ್ನು ಹಿಡಿದೇ ಹಿಡಿಯುತ್ತೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಜೈಷ್ ಇ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ವಿಚಾರದಲ್ಲಿ ಚೀನಾ ತಳೆದಿರುವ ನಿಲುವಿನ ಬಗ್ಗೆ ರಾಜನಾಥ್ ಕಠಿನ ಮಾತುಗಳನ್ನಾಡಿಲ್ಲ. ಇದು ಚೀನಾದ ಆಂತರಿಕ ವಿಚಾರಗಳಿಗೆ ಸಂಬಂಧಿಸಿದ ಕ್ರಮವಾಗಿರಬಹುದು. ಆದರೆ ಮುಂದೆ ಅವರಿಗೆ ಸತ್ಯದ ಮನವರಿಕೆಯಾಗಿ ಆತನನ್ನು ಕಪ್ಪುಪಟ್ಟಿಗೆ ಸೇರಿಸಬಹುದು ಎಂದು ತಿಳಿಸಿದ್ದಾರೆ.
ಟ್ರಂಪ್ ಬಗ್ಗೆ ಟೀಕೆ ಇಲ್ಲ: ಅಮೆರಿಕದಿಂದ ಏಳು ಮುಸ್ಲಿಂ ದೇಶಗಳ ನಾಗರಿಕರಿಗೆ ನಿಷೇಧ ಹೇರಿದ ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರವನ್ನು ಟೀಕಿಸಲು ರಾಜನಾಥ್ ಸಿಂಗ್ ನಿರಾಕರಿಸಿದ್ದಾರೆ. ಸ್ಥಳೀಯ ಉಗ್ರವಾದದ ಲೆಕ್ಕಾಚಾರದಲ್ಲಿ ಟ್ರಂಪ್ ಈ ನಿರ್ಧಾರ ತೆಗೆದು ಕೊಂಡಿರಬಹುದು ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿಗೇ ಗೆಲುವು: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಬಗ್ಗೆ ಮಾತನಾಡಿದ ಅವರು, ಇಲ್ಲಿ ಬಿಜೆಪಿ 250 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದರು. ಅಲ್ಲದೆ ಬಿಎಸ್‌ಪಿ ಮತ್ತು ಎಸ್‌ಪಿ – ಕಾಂಗ್ರೆಸ್ ನಡುವೆ ಯಾರು ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಬೇಕು ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿ ಎಂದು ಅವರು ವ್ಯಂಗ್ಯವಾಡಿದ್ದಾರೆ.