Advertisement

ಯುಕೆ ನಿರ್ಬಂಧ ಪಟ್ಟಿಯಲ್ಲಿ ದಾವೂದ್‌ನ 21 ಅಡ್ಡ ಹೆಸ್ರು

08:45 AM Aug 23, 2017 | Team Udayavani |

ಲಂಡನ್‌: ಭೂಗತ ಪಾತಕಿ, ಪಾಕಿಸ್ತಾನದಲ್ಲಿರುವ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರ, ದಾವೂದ್‌ ಇಬ್ರಾಹಿಂ ವಿರುದ್ಧ ಯುನೈಟೆಡ್‌ ಕಿಂಗ್‌ಡಮ್‌ ಆರ್ಥಿಕ ನಿರ್ಬಂಧವನ್ನು ಮುಂದುವರಿಸಿದ್ದು, ಇದರಲ್ಲಿ ಆತನ 21 ಅಡ್ಡ ಹೆಸರುಗಳನ್ನು ನಮೂದಿಸಿದೆ! ಯು.ಕೆ.ಯ ಕಂದಾಯ ಇಲಾಖೆ ಹೊರಡಿಸಿರುವ ಈ ಆರ್ಥಿಕ ನಿರ್ಬಂಧ ಪಟ್ಟಿಯಲ್ಲಿ ದಾವೂದ್‌ ವಾಸವಾಗಿದ್ದಾನೆ ಎನ್ನಲಾದ ಪಾಕ್‌ನ ಮೂರು ವಿಳಾಸಗಳನ್ನು ನೀಡಲಾಗಿದೆ. 21 ಅಡ್ಡ ಹೆಸರುಗಳಲ್ಲಿ ಇಬ್ರಾಹಿಂ, ಅಬ್ದುಲ್‌ ಶೇಖ್‌, ಇಸ್ಮಾಯಿಲ್‌, ಅಬ್ದುಲ್‌ ಅಜೀಜ್‌, ಭಾಯಿ, ಬಡಾ ಭಾಯಿ ಇತ್ಯಾದಿ ಹೆಸರುಗಳನ್ನು ಹೆಸರಿಸಲಾಗಿದೆ. ಇದರೊಂದಿಗೆ ಎಲ್‌ಟಿಟಿಟಿ, ಖಲಿಸ್ತಾನ್‌ ಜಿಂದಾಬಾದ್‌ ಫೋರ್ಸ್‌, ಹಿಜ್ಬುಲ್‌ ಮುಜಾಹಿದೀನ್‌ ವಿರುದ್ಧವೂ ಯು.ಕೆ. ನಿರ್ಬಂಧ ಹೇರಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next