Advertisement

ಡೇವಿಸ್‌: ತಟಸ್ಥ ತಾಣಕ್ಕೆ ಭಾರತ-ಪಾಕ್‌ ಪಂದ್ಯ

09:27 AM Nov 06, 2019 | Team Udayavani |

ಹೊಸದಿಲ್ಲಿ: ಪಾಕಿಸ್ಥಾನದ ಆತಿಥ್ಯದಲ್ಲಿ ನ. 29ರಿಂದ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಭಾರತ-ಪಾಕಿಸ್ಥಾನ ನಡುವಿನ ಡೇವಿಸ್‌ ಕಪ್‌ ಏಶ್ಯ ಒಶಿಯಾನಿಯ ಕೂಟದ ತಾಣವನ್ನು ಹಠಾತ್‌ ಬೆಳವಣಿಗೆಯಲ್ಲಿ ತಟಸ್ಥ ತಾಣಕ್ಕೆ ವರ್ಗಾಯಿಸಲಾಗಿದೆ.

Advertisement

ಸೋಮವಾರದ ತನಕ ಇಸ್ಲಾಮಾ ಬಾದ್‌ನಲ್ಲೇ ಕೂಟ ಆಯೋಜಿಸಲು ನಿರ್ಣಯಿಸಲಾಗಿತ್ತು. ಆದರೆ ಭದ್ರತೆ ಕಾರಣದಿಂದ ಮಹೇಶ್‌ ಭೂಪತಿ ಸೇರಿದಂತೆ ಭಾರತೀಯ ಆಟಗಾರರು ಅಲ್ಲಿಗೆ ತೆರಳಲು ನಿರಾಕರಿಸಿದ್ದರು, ತಟಸ್ಥ ತಾಣದಲ್ಲಿ ಕೂಟವನ್ನು ಆಯೋಜಿಸುವಂತೆ ಅಖೀಲ ಭಾರತೀಯ ಟೆನಿಸ್‌ ಸಂಸ್ಥೆ (ಎಐಟಿಎ)ಅನ್ನು ಒತ್ತಾಯಿಸಿತ್ತು. ಆಟಗಾರರ ಆತಂಕವನ್ನು ಎಐಟಿಎ ತನ್ನ ಮೇಲಿನ ಸಂಸ್ಥೆಯಾದ ಅಂತಾರಾಷ್ಟ್ರೀಯ ಟೆನಿಸ್‌ ಒಕ್ಕೂಟ (ಐಟಿಎಫ್)ಕ್ಕೆ ತಿಳಿಸಿತ್ತು. ಪರಿಸ್ಥಿತಿಯ ಚಿತ್ರಣವನ್ನು ಮನವರಿಕೆ ಮಾಡಿಕೊಟ್ಟಿತ್ತು.

ಐಟಿಎಫ್ ಹಾಗೂ ಡೇವಿಸ್‌ ಕಪ್‌ ಸಂಘಟಕರು ಈ ವಿಷಯವಾಗಿ ಚರ್ಚಿಸಿ ಕೊನೆಗೆ ಆಟಗಾರರ ಹಿತಾ ಸಕ್ತಿಗೆ ಮೊದಲ ಆದ್ಯತೆ ಎಂದು ಹೇಳುವ ಮೂಲಕ ತಟಸ್ಥ ತಾಣಕ್ಕೆ ಕೂಟವನ್ನು ವರ್ಗಾಯಿಸಲು ತೀರ್ಮಾನಿಸಿದರು. ಕೂಟ ನಡೆಯಲಿರುವ ತಟಸ್ಥ ತಾಣವನ್ನು ಪಾಕಿಸ್ಥಾನ ಟೆನಿಸ್‌ ಸಂಸ್ಥೆ (ಪಿಟಿಎಫ್) ಆಯ್ಕೆ ಮಾಡಲಿದೆ. ಅದು ತನ್ನ ತಟಸ್ಥ ತಾಣದ ಹೆಸರನ್ನು ಶೀಘ್ರವಾಗಿ ಪ್ರಕಟಿಸಲಿದೆ ಎಂದು ಐಟಿಎಫ್ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next