Advertisement

ನಿವೃತ್ತಿ ಬಗ್ಗೆ ಡೇವಿಡ್‌ ವಾರ್ನರ್‌ ಚಿಂತನೆ?

06:15 AM Mar 30, 2018 | Team Udayavani |

ಸಿಡ್ನಿ: ಆಸ್ಟ್ರೇಲಿಯ ತಂಡದ ಮಾಜಿ ಉಪನಾಯಕ, ಸ್ಫೋಟಕ ಆರಂಭಕಾರ ಡೇವಿಡ್‌ ವಾರ್ನರ್‌ ಕ್ರಿಕೆಟ್‌ ನಿವೃತ್ತಿ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆಯೇ? ಅವರ ಕೆಲವು ಮಾತು ಇದಕ್ಕೆ ಪುಷ್ಟಿ ಕೊಡುತ್ತದೆ.

Advertisement

“ಚೆಂಡು ವಿರೂಪ’ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ ವಾರ್ನರ್‌,  “ತಪ್ಪಿಗೆ ನಾನು ಕ್ಷಮೆಯಾಚಿಸುತ್ತೇನೆ. ಅದರ ಹೊಣೆ ಹೊತ್ತುಕೊಳ್ಳುತ್ತೇನೆ. ಕ್ರೀಡೆಗೆ, ಅಭಿಮಾನಿಗಳಿಗೆ ಆಗಿರುವ ಆಘಾತವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ನಾವೆಲ್ಲ ಪ್ರೀತಿಸುವ ಕ್ರೀಡೆಗೆ ಇದು ಕಳಂಕ’ ಎಂದು ಹೇಳಿದ್ದಾರೆ.

“ನಾನು ನನ್ನ ಕುಟುಂಬ, ಸ್ನೇಹಿತರು, ಸಲಹೆಗಾರರೊಂದಿಗೆ ಕುಳಿತು ಗಂಭೀರವಾಗಿ ಯೋಚಿಸುತ್ತೇನೆ. ಕೆಲವೇ ದಿನಗಳಲ್ಲಿ ನನ್ನ ಮುಂದಿನ ನಿರ್ಧಾರ ತಿಳಿಸುತ್ತೇನೆ’ ಎಂದೂ ವಾರ್ನರ್‌ ಹೇಳಿದ್ದಾರೆ. ಇದು ಅವರು ನಿವೃತ್ತಿಯ ಕುರಿತು ನೀಡಿರುವ ಸುಳಿವು ಎಂದು ತೀರ್ಮಾನಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next