Advertisement

ಬೆಂಗಳೂರು ಬೌಲರ್ ಗಳನ್ನು ಬೆಂಡೆತ್ತಿದ ಬೆರಿಸ್ಟೊ, ವಾರ್ನರ್

09:15 AM Apr 01, 2019 | keerthan |

ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ ನ ಆರಂಭಿಕ ಬ್ಯಾಟ್ಸ್ ಮನ್ ಗಳಾದ ಡೇವಿಡ್ ವಾರ್ನರ್ ಮತ್ತು ಜಾನಿ ಬೆರಿಸ್ಟೊ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಬೆಂಗಳೂರು ಬೌಲರ್ ಗಳ ಬೆವರಿಳಿಸಿದರು. ಅಂತಿಮವಾಗಿ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ ವಿಕೆಟ್ ನಷ್ಟಕ್ಕೆ 231 ರನ್ ಗಳ ಬೃಹತ್ ಮೊತ್ತ ಪೇರಿಸಿತು.

Advertisement

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ವಿರಾಟ್ ಕೊಹ್ಲಿ ನಿರ್ಧಾರವನ್ನು ಸಮರ್ಥಿಸುವಲ್ಲಿ ಬೌಲರ್ ಗಳು ವಿಫಲರಾದರು. ಮೊದಲ ವಿಕೆಟ್ ಗೆ 185 ರನ್ ಗಳ ಬೃಹತ್ ಜೊತೆಯಾಟವಾಡಿದ ಜಾನಿ ಬೆರಿಸ್ಟೊ ಬೌಲರ್ ಗಳನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿದರು. ಇವರಿಬ್ಬರ ಆಕರ್ಷಕ ಶತಕದ ನೆರವಿನಿಂದ ಹೈದರಾಬಾದ್ ದೊಡ್ಡ ಸವಾಲನ್ನೇ ಬೆಂಗಳೂರು ತಂಡಕ್ಕೆ ನೀಡಿತು.

ಕೇವಲ ಮೂರನೇ ಐಪಿಎಲ್ ಪಂದ್ಯವಾಡುತ್ತಿರುವ ಜಾನಿ ಬೆರಿಸ್ಟೊ 56 ಎಸೆತಗಳಿಂದ 114 ಸಿಡಿಸಿ ಔಟಾದರು. ಇನ್ನಿಂಗ್ಸ್ ನಲ್ಲಿ 12 ಬೌಂಡರಿ ಏಳು ಸಿಕ್ಸರ್ ಸಿಡಿಸಿದರು. ಅದ್ಭುತ ಫಾರ್ಮ್ ಮುಂದುವರಿಸಿದ ವಾರ್ನರ್ ತನ್ನ ನಾಲ್ಕನೇ ಐಪಿಎಲ್ ಶತಕ ಬಾರಿಸಿದರು. 55 ಎಸತಗಳಿಂದ ಭರ್ತಿ 100 ರನ್ ಪೇರಿಸಿದರು.

ಆರ್ ಸಿಬಿ ಪರ ಮೊದಲ ಪಂದ್ಯವಾಡಿದ ಪ್ರಯಾಸ್ ಬರ್ಮನ್ 56 ರನ್ ನೀಡಿ ದುಬಾರಿಯಾದರು

Advertisement

Udayavani is now on Telegram. Click here to join our channel and stay updated with the latest news.

Next