ಮುಂಬೈ: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ಐಪಿಎಲ್ ಗೆ ಆಗಮಿಸಿದ್ದಾರೆ. ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿರುವ ವಾರ್ನರ್ ಅವರು ಗುರುವಾರದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಈ ನಡುವೆ ವಾರ್ನರ್ ಹೊಸ ರೀಲ್ ಪೋಸ್ಟ್ ಮಾಡಿದ್ದು, ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅವತಾರ ತಾಳಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸದಾ ಹೊಸ ಹೊಸ ರೀಲ್ಸ್ ಗಳಿಂದ ಪ್ರಚಾರದಲ್ಲಿರುತ್ತಾರೆ. ಇದೀಗ ನಟ ಸಲ್ಮಾನ್ ಖಾನ್ ರ ಚಿತ್ರದ ಹಾಡಿನಲ್ಲಿ ಸಲ್ಮಾನ್ ದೇಶಕ್ಕೆ ತಮ್ಮ ಮುಖವನ್ನು ಅಂಟಿಸಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
ಡೇವಿಡ್ ವಾರ್ನರ್ ಅವರು ಈ ಹಿಂದೆಯೂ ಹಲವು ಭಾರತೀಯ ಚಿತ್ರಗಳ ಹಾಡುಗಳಿಗೆ ರೀಲ್ಸ್ ವಿಡಿಯೋ ಮಾಡಿದ್ದರು. ವಾರ್ನರ್ ಮಗಳಿಗೆ ಭಾರತಕ್ಕೆ ಬರುವುದೆಂದರೆ ತುಂಬಾ ಇಷ್ಟ ಎಂದೂ ಹೇಳಿದ್ದರು.
ಇದನ್ನೂ ಓದಿ:ಐಪಿಎಲ್ 2022: ನಿಯಮ ಉಲ್ಲಂಘಿಸಿದ ಬುಮ್ರಾ, ರಾಣಾಗೆ ದಂಡ
Related Articles
ಕಳೆದ ಫೆಬ್ರವರಿಯಲ್ಲಿ ನಡೆದಿದ್ದ ಐಪಿಎಲ್ ಹರಾಜಿನಲ್ಲಿ ಡೇವಿಡ್ ವಾರ್ನರ್ ಅವರು 6.25 ಕೋಟಿ ರೂ ಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದರು. 2009ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಐಪಿಎಲ್ ಆರಂಭಿಸಿದ್ದ ವಾರ್ನರ್, ನಂತರ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕಾಗಿದ್ದರು. ಹೈದರಾಬಾದ್ ತಂಡದ ನಾಯಕನಾಗಿ 2016ರಲ್ಲಿ ಐಪಿಎಲ್ ಟ್ರೋಫಿ ಜಯಿಸಿದ್ದರು.