Advertisement

ನಾಲ್ಕು ಕಥೆಗಳ ಸುತ್ತ ಡೇವಿಡ್‌

04:10 PM Jul 13, 2022 | Team Udayavani |

ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಡೇವಿಡ್‌’ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್‌ ಮತ್ತು ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

Advertisement

ಶ್ರೇಯಸ್‌ ಚಿಂಗಾ ನಾಯಕನಾಗಿ ನಟಿಸಿ, ನಿರ್ದೇಶನವನ್ನು ಮಾಡಿರುವ “ಡೇವಿಡ್‌’ ಚಿತ್ರದಲ್ಲಿ ಸಾರಾ ಹರೀಶ್‌ ನಾಯಕಿಯಾಗಿದ್ದು, ಉಳಿದಂತೆ ಅವಿನಾಶ್‌, ಪ್ರತಾಪ್‌ ನಾರಾಯಣ್‌, ರಾಕೇಶ್‌ ಅಡಿಗ, ಕಾವ್ಯಾ ಶಾ, ಬುಲೆಟ್‌ ಪ್ರಕಾಶ್‌ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಟ್ರೇಲರ್‌ ಮತ್ತು ಹಾಡಿನ ಬಿಡುಗಡೆಯ ಬಳಿಕ “ಡೇವಿಡ್‌’ ಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟ ಕಂ ನಿರ್ದೇಶಕ ಶ್ರೇಯಸ್‌ ಚಿಂಗಾ, “ನಾಲ್ಕು ಕಥೆಗಳ ಸುತ್ತ ಈ ಸಿನಿಮಾ ನಡೆಯುತ್ತದೆ. ನಾಯಕ ತನ್ನ ಸಾಮರ್ಥ್ಯಕ್ಕೆ ಮೀರಿದ ಶಕ್ತಿಗಳ ವಿರುದ್ಧ ಹೇಗೆ ಬಲವಂತವಾಗಿ ಹೋರಾಡುತ್ತಾನೆ ಅನ್ನೋದು ಕಥೆಯ ಒಂದು ಎಳೆ.

ಇಡೀ ಸಿನಿಮಾದ ಚಿತ್ರೀಕರಣವನ್ನು ಬೆಂಗಳೂರು ಸುತ್ತಮುತ್ತ ನಡೆಸಲಾಗಿದೆ. “ಕೇನ್ಸ್‌’ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ “ಡೇವಿಡ್‌’ ಸಿನಿಮಾ ಪ್ರದರ್ಶನಗೊಂಡಿದ್ದು, “ಕೇನ್ಸ್‌’ನಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಸಿನಿಮಾ ಇದಾಗಿದೆ.

ಈಗಾಗಲೇ ಈ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಆಗಸ್ಟ್‌ ವೇಳೆಗೆ ಸಿನಿಮಾ ಬಿಡುಗಡೆ ಮಾಡುವ ಯೋಚನೆ ಇದೆ’ ಎಂದರು.

Advertisement

“ಡೇವಿಡ್‌’ ಚಿತ್ರದ ಟ್ರೇಲರ್‌ಗೆ ಇಸ್ರೇಲ್‌ನ ಖ್ಯಾತ ಸಂಗೀತ ನಿರ್ದೇಶಕರೊಬ್ಬರು ಸಂಗೀತ ನೀಡಿದ್ದು, ಚೆನ್ನೈ ನಲ್ಲಿ ಸೌಂಡಿಂಗ್‌ ಮಾಡಲಾಗಿದೆ ಎಂದು ಟ್ರೇಲರ್‌ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದರು ಅರ್ಜುನ್‌ ನಿಟ್ಟೂರ್‌.

“ಡೇವಿಡ್‌’ ಚಿತ್ರದ ಗೀತೆಗೆ ರ್ಯಾಪರ್‌ ಅಲೋಕ್‌ ಸಂಗೀತ ಸಂಯೋಜಿಸಿದ್ದು, ಸಂಚಿತ್‌ ಹೆಗಡೆ ಹಾಡಿಗೆ ಧ್ವನಿಯಾಗಿದ್ದು, ರೋಹನ್‌ ಗೀತೆಗೆ ಸಾಹಿತ್ಯ ಒದಗಿಸಿದ್ದಾರೆ. ಶ್ರೇಯಸ್‌ ಚಿಂಗಾ ಮತ್ತು ಭಾರ್ಗವ್‌ ಯೋಗಾಂಬರ್‌ ಜಂಟಿಯಾಗಿ ನಿರ್ದೇಶಿಸಿರುವ ಈ ಚಿತ್ರವನ್ನು ಧನರಾಜ್‌ ಬಾಬು ಅರ್ಪಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next