Advertisement
ಭಾನುವಾರ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ 2ನೇ ಮಹಿರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಕಳೆದ ಸೆ. 16ಕ್ಕೆ ಅಧಿಕಾರಕ್ಕೆ ಬಂದಿರುವ ಯಡಿಯೂರಪ್ಪ ಅವರು ಎಸ್ಸಿ, ಎಸ್ಟಿಗೆ 30,445 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಭೂ ಒಡೆತನ ಯೋಜನೆಯಡಿ 647 ಜನರಿಗೆ 874 ಎಕರೆ ಜಮೀನು ಖರೀದಿ, ಗಂಗಾ ಕಲ್ಯಾಣ ಯೋಜನೆಯಡಿ 10 ಸಾವಿರ ಕೊಳವೆಬಾವಿ ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು.
Related Articles
Advertisement
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ರಾಮಾಯಣದಂತಹ ಜಗತ್ತಿನ ಶ್ರೇಷ್ಠ ಗ್ರಂಥ ಬರೆದಿರುವ ವಾಲ್ಮೀಕಿಯವರು ಪರಿವರ್ತನೆಯ ಹರಿಕಾರರು. ವಾಲ್ಮೀಕಿಯವರು ವಚನಬದ್ಧತೆ, ಸ್ವಾಮಿ ನಿಷ್ಠೆ, ಅಧರ್ಮದ ವಿರುದ್ಧದ ಹೋರಾಟದ ಬಗ್ಗೆ ರಾಮಾಯಣದಲ್ಲಿ ಬರೆದಿದ್ದಾರೆ. ಈಗಲೂ ಎಲ್ಲರೂ ಪರಿವರ್ತನೆ ಆಗಬೇಕಿದೆ ಎಂದು ತಿಳಿಸಿದರು.
ಪರಿಶಿಷ್ಟ ವರ್ಗದ ಪಟ್ಟಿಯಲ್ಲಿ ತಳವಾರ, ಪರಿವಾರ ಪರ್ಯಾಯ ಪದಗಳ ಸೇರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಲೋಕಸಭೆಯಲ್ಲಿ ಅನುಮೋದನೆ ದೊರೆಯಲಿದೆ. ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸುವ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಯಡಿಯೂರಪ್ಪ ಅವರು ಯಾವತ್ತಿಗೂ ವಾಲ್ಮೀಕಿ ಸಮಾಜದೊಂದಿಗೆ ಇರುತ್ತಾರೆ. ಸರ್ಕಾರ ಸಹ ನಿಮ್ಮೊಂದಿಗೆ ಇರುತ್ತದೆ ಎಂದು ತಿಳಿಸಿದರು.
ಮಾಜಿ ಸಚಿವ ಸತೀಶ್ ಜಾರಕಿಹೊಳಿ ಪ್ರಾಸ್ತಾವಿಕ ಮಾತುಗಳಾಡಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಸಚಿವ ಬಿ.ಸಿ. ಪಾಟೀಲ್, ಸಂಸದರಾದ ಜಿ.ಎಂ. ಸಿದ್ದೇಶ್ವರ್, ವೈ. ದೇವೇಂದ್ರಪ್ಪ, ಶಾಸಕರಾದ ಎಸ್.ವಿ. ರಾಮಚಂದ್ರ, ಪ್ರೊ. ಎನ್. ಲಿಂಗಣ್ಣ, ನೆಹರೂ ಚ. ಓಲೇಕಾರ, ಎನ್.ವೈ. ಗೋಪಾಲಕೃಷ್ಣ, ರಾಜಾ ವೆಂಕಟಪ್ಪ ನಾಯಕ್, ಬಸವರಾಜ್ ದದ್ದಲ್, ಅರವಿಂದ್ ಬೆಲ್ಲದ್, ಅಮೃತ್ ದೇಸಾಯಿ, ಕುಸುಮಾ ಶಿವಳ್ಳಿ, ಮಾಜಿ ಶಾಸಕ ಬಿ.ಪಿ. ಹರೀಶ್ ಇತರರು ಇದ್ದರು.