ದಾವಣಗೆರೆ: ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯುವ ಹಿನ್ನಲೆಯಲ್ಲಿ ಮೇಯರ್ ಸ್ಥಾನಕ್ಕೆ ಬಿ.ಜೆ.ಪಿ ಪಕ್ಷದಿಂದ ಬಿ.ಜೆ. ಅಜಯ್ ಕುಮಾರ್, ಕಾಂಗ್ರೆಸ್ ಪಕ್ಷದಿಂದ ದೇವರಮನಿ ಶಿವಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಅಜಯ್ ಕುಮಾರ್ ಅವರಿಗೆ ಸೂಚಕರಾಗಿ ಪ್ರಸನ್ನಕಮಾರ್, ಅನುಮೋದಕರಾಗಿ ರಾಕೇಶ್ ಜಾಧವ್ ಇದ್ದರೆ ದೇವರಮನಿ ಶಿವಕುಮಾರ್ ಅವರಿಗೆ ಸೂಚಕರಾಗಿ ಜಿ.ಎಸ್.ಮಂಜುನಾಥ್, ಚಮನ್ ಸಾಬ್ ಅನುಮೋದಕರಾಗಿದ್ದಾರೆ.
ಉಪಮೇಯರ್ ಸ್ಥಾನಕ್ಕೆ ಸೌಮ್ಯ ನರೇಂದ್ರ ಕುಮಾರ್, ಆಶಾ ಡಿ.ಎಸ್, ನೂರ್ ಜಹಾನ್. ಬಿ ನಾಮಪತ್ರ ಸಲ್ಲಿಸಿದ್ದಾರೆ.
ಸೌಮ್ಯ ನರೇಂದ್ರ ಕುಮಾರ್ ಅವರಿಗೆ ಸೂಚಕರಾಗಿ ಯಶೋಧ ಬಿ.ಎ ಅನುಮೋದಕರಾಗಿ ಗೌರಮ್ಮ, ಆಶಾ ಡಿ.ಎಸ್ ಇವರಿಗೆ ಸೂಚಕರಾಗಿ ಸೈಯದ್ ಚಾರ್ಲಿ,ಅನುಮೋದಕರಾಗಿ ಸುಧಾ, ಆಶಾ ಇವರ 2 ನೇ ನಾಮಪತ್ರಕ್ಕೆ, ಸೂಚಕರಾಗಿ ಎ.ಬಿ.ರಹೀಮ್, ಅನುಮೋದಕರಾಗಿ ನಾಗರಾಜ, ನೂರ್ ಜಹಾನ್ ಬಿ.ಇವರ ನಾಮಪತ್ರಕ್ಕೆ ಸೂಚಕರಾಗಿ ಶಿವಲೀಲ, ವಿನಾಯಕ ಬಿ.ಹೆಚ್. ಅನುಮೋದಕರಾಗಿದ್ದಾರೆ.
ಇನ್ನು ಪಾಲಿಕೆಯಲ್ಲಿ ಒಟ್ಟು 62 ಮತದಾರರು ಇದ್ದು, ಸದಸ್ಯರ ಸಂಖ್ಯೆ 45, ಒಬ್ಬರು ಸಂಸದರು. 2 ಶಾಸಕರು ಹಾಗೂ 14 ಎಂಎಲ್ ಸಿ ಗಳಿದ್ದಾರೆ.