ವರ್ಷಗಳಷ್ಟು ಹಿಂದುಳಿದಿವೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ| ಎಸ್. ಇಂದುಮತಿ ಕಳವಳ ವ್ಯಕ್ತಪಡಿಸಿದರು.
Advertisement
ನಗರದ ಎಸ್.ಎಸ್.ಬಡಾವಣೆಯ ಬಾಪೂಜಿ ಬಿ ಸ್ಕೂಲ್‌ನ ಸಭಾಂಗಣದಲ್ಲಿ ಶನಿವಾರ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ಟೆಕ್ನಾಲಜಿ ಮತ್ತು ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ರಿಸರ್ಚ್ ವಿಭಾಗ ಹಮ್ಮಿಕೊಂಡಿದ್ದ ಪದವಿ ದಿನ ಕಾರ್ಯಕ್ರಮ ಉದ್ಘಾಟಿಸಿ
ಮಾತನಾಡಿದರು. ನಾವು ವಿಶ್ವವಿದ್ಯಾನಿಲಯದ ಕಾರ್ಯನಿರ್ವಹಣೆಯಲ್ಲಿ 70 ವರ್ಷಗಳಷ್ಟು ಹಿಂದೆ ಇದ್ದೇವೆ. ಪಠ್ಯ ಸಿದ್ಧತೆ, ಸೌಲಭ್ಯಗಳ ವಿಷಯಗಳಲ್ಲಿ
ಹಿಂದೆ ಇದ್ದೇವೆ. ಬೋಧಕರಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸುವುದು ಹಾಗೂ ಅವರಿಂದ ಉತ್ತಮ ಸಾಮರ್ಥ್ಯ ಹೊರ ತರುವಲ್ಲಿ ನಾವು ಹಿಂದೆ
ಬಿದ್ದಿದ್ದೇವೆ ಎಂದರು.
ಪ್ರತಿ ವರ್ಷ ಹೊಸ ಪೀಳಿಗೆಯಷ್ಟು ಬದಲಾವಣೆ ಆಗುತ್ತಿದೆ. ಹಾಗಾಗಿ ನಮ್ಮ ಗುರಿಯ ಜೊತೆಗೆ ದಾರಿಯೂ ಉತ್ತಮವಾಗಿರಬೇಕು. ಜೀವನ ಶೈಲಿ
ಸುಯೋಜನೆಯಿಂದ ಕೂಡಿದ್ದರೆ ನಮ್ಮ ಗುರಿ ತಲುಪುವುದು ಸುಲಭವಾಗುತ್ತದೆ ಎಂದು ಹೇಳಿದರು. ವಿದ್ಯಾರ್ಥಿಯೋರ್ವ ಪ್ರತಿಭಾವಂತನಾಗಿದ್ದರಷ್ಟೇ ಸಾಲದು, ಒಳ್ಳೆಯವನಾಗಿಯೂ ಇರಬೇಕು. ವಿದ್ಯಾರ್ಥಿ ಒಳ್ಳೆಯವನಾಗಿದ್ದರೆ ಉಳಿದ ಎಲ್ಲ ಗುಣಗಳನ್ನು ಪಡೆಯಬಹುದು. ಪ್ರತಿಯೊಬ್ಬರು ಉನ್ನತ ಹುದ್ದೆ ತಲುಪಲು ಸಾಧ್ಯವಾಗದೇ ಇರಬಹುದು. ಆದರೆ, ಸಮಾಜಕ್ಕೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬಹುದು ಎಂದರು.
Related Articles
ಹೇಗಿರುತ್ತದೋ ದೇಶ ಹಾಗಿರುತ್ತೆ ಎಂದು ಹೇಳಿರುವ ಮಾತನ್ನು ಪ್ರತಿಯೊಬ್ಬರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
Advertisement
ದಾನಿಗಳಿಂದ ಪಡೆದ ಜಮೀನಿನಲ್ಲಿ ರೂಪುಗೊಂಡ ಏಕೈಕ ವಿವಿ ದಾವಣಗೆರೆ ವಿಶ್ವವಿದ್ಯಾನಿಲಯ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ದಾವಣಗೆರೆಇದ್ದಾಗ, ಬಾಪೂಜಿ ವಿದ್ಯಾಸಂಸ್ಥೆ ಪಿ.ಜಿ. ಕೇಂದ್ರ ಸ್ಥಾಪಿಸಲು ನೆರವಾಗಿದ್ದು, ಇಲ್ಲಿಗೆ ವಿಶ್ವವಿದ್ಯಾನಿಲಯ ಬರಲು ನೆರವಾಯಿತು ಎಂದು ಸ್ಮರಿಸಿಕೊಂಡರು. ತಿರುಚನಾಪಲ್ಲಿಯ ಐಐಎಂ ನಿರ್ದೇಶಕ ಡಾ| ಭೀಮರಾಯ್ ಮೇತ್ರಿ ಮಾತನಾಡಿ, ನೀವು ಅಂತರ್ಜಾಲದ ಯುಗದಲ್ಲಿ ಜನಿಸಿದ್ದೀರಿ. ಭಾರತ
ಈಗ ಜಾಗತಿಕವಾಗಿ ಮುಂಚೂಣಿಯಲ್ಲಿರುವ ದೇಶವಾಗಿದೆ. ಹಾಗಾಗಿ ನಿಮ್ಮಲ್ಲಿರುವ ಅತ್ಯುತ್ತಮ ಪ್ರತಿಭೆ ಹೊರ ತರಬೇಕು ಎಂದು ತಿಳಿಸಿದರು.
ಕಾಲೇಜು ಪ್ರಾಂಶುಪಾಲ ಡಾ| ನವೀನ್ ನಾಗರಾಜ್, ಕಾಲೇಜಿನ ನಿರ್ದೇಶಕ ಡಾ| ಹೆಚ್ .ವಿ. ಸ್ವಾಮಿ ತ್ರಿಭುವಾನಂದ ಉಪಸ್ಥಿತರಿದ್ದರು. ಸುಷ್ಮಾ ಪ್ರಾರ್ಥಿಸಿದರು. ಬಿಐಇಟಿ -ಎಂಬಿಎ ಪ್ರೋಗ್ರಾಮ್ ಎಚ್.ಒ.ಡಿ. ಡಾ| ಎಸ್.ಎಚ್. ಸುಜಿತ್
ಕುಮಾರ್ ಸ್ವಾಗತಿಸಿದರು. ಶ್ರೇಯ ಮತ್ತು ಸಹನಾ ನಿರೂಪಿಸಿದರು. ಅಮೆರಿಕದಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ, ಎಲ್ಲಿ ವಿಶ್ವವಿದ್ಯಾನಿಲಯಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚಾಗಿರುತ್ತಾರೋ ಆ ಪ್ರಾಂತ್ಯ ಅತಿ ಹೆಚ್ಚಿನ ಮನ್ನಣೆ ಪಡೆಯುತ್ತದೆ ಎಂಬುದಿದೆ. ಈ ಹಿನ್ನೆಲೆಯಲ್ಲಿ ಪಂಡಿತ್ ಜವಾಹರಲಾಲ್ ನೆಹರು ಅವರು ವಿಶ್ವವಿದ್ಯಾನಿಲಯ
ಹೇಗಿರುತ್ತದೋ ದೇಶ ಹಾಗಿರುತ್ತೆ ಎಂದು ಹೇಳಿರುವ ಮಾತನ್ನು ಪ್ರತಿಯೊಬ್ಬರು ನೆನಪಿನಲ್ಲಿಟ್ಟುಕೊಳ್ಳಬೇಕು.
.ಡಾ| ಎಸ್. ಇಂದುಮತಿ
ವಿಶ್ರಾಂತ ಕುಲಪತಿ, ದಾವಿವಿ