Advertisement

ನಿನ್ನೆ ಹತ್ತು ಜನ ಡಿಸ್ಚಾರ್ಜ್‌

11:30 AM Jun 15, 2020 | Naveen |

ದಾವಣಗೆರೆ: ಭಾನುವಾರ ದಾವಣಗೆರೆಯಲ್ಲಿ ಯಾವುದೇ ಕೋವಿಡ್ ಹೊಸ ಪ್ರಕರಣ ಪತ್ತೆಯಾಗಿಲ್ಲ. ಕೋವಿಡ್ ಸಂಬಂಧಿತ ಪರೀಕ್ಷೆಗೆ ಕಳಿಸಲಾಗಿದ್ದ 24 ಮಾದರಿಗಳ ವರದಿ ನೆಗೆಟಿವ್‌ ಎಂದು ಬಂದಿದೆ.

Advertisement

ಕೋವಿಡ್ ನಿಂದ ಗುಣಮುಖರಾದ ರೋಗಿ ನಂಬರ್‌ 5313, 5306, 5308, 5310, 5312, 5299, 5315, 5311, 5309, 5300 ಒಟ್ಟು ಹತ್ತು ಜನ ಸೋಂಕಿತರು ಭಾನುವಾರ ಜಿಲ್ಲಾ ಕೋವಿಡ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಭಾನುವಾರ ಐವರು ಒಳಗೊಂಡಂತೆ 971 ಜನರು ಅವಲೋಕನದಲ್ಲಿದ್ದಾರೆ. 671 ಜನರು ಹೋಂ, 87 ಜನರು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ. ಐವರು ಒಳಗೊಂಡಂತೆ 678 ಜನರು ಆಸ್ಪತ್ರೆಯಲ್ಲಿದ್ದಾರೆ.

ಭಾನುವಾರ 82 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. ಈವರೆಗೆ ಕೋವಿಡ್ ಪರೀಕ್ಷೆಗೆ ಸಂಬಂಧಿಸಿದಂತೆ ಕಳಿಸಲಾಗಿರುವ ಒಟ್ಟು 11,930 ಗಂಟಲು ದ್ರವ ಮಾದರಿಯಲ್ಲಿ 11,226 ಮಾದರಿಗಳ ವರದಿ ನೆಗೆಟಿವ್‌ ಆಗಿದೆ. ಇನ್ನೂ 478 ಮಾದರಿಗಳ ವರದಿ ಬರಬೇಕಾಗಿದೆ. ಜಿಲ್ಲೆಯಲ್ಲಿ ಒಟ್ಟು 226 ಪ್ರಕರಣಗಳಲ್ಲಿ ಈವರೆಗೆ 194 ಸೋಂಕಿತರು ಡಿಸ್ಚಾರ್ಜ್‌ ಆಗಿದ್ದಾರೆ. ಆರು ಜನರು ಮೃತಪಟ್ಟಿದ್ದಾರೆ. 26 ಸಕ್ರಿಯ ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next