ದಾವಣಗೆರೆ: ಬಹಳ ದಿನಗಳ ನಂತರ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಮಹಾಮಾರಿ ಕೋವಿಡ್ ಸ್ಫೋಟಗೊಂಡಿದೆ. ಭಾನುವಾರ ಒಂದೇ ದಿನ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ನರ್ಸ್, ಇಬ್ಬರು ಅಟೆಂಡರ್ ಮತ್ತು 9 ವರ್ಷದ ಬಾಲಕ ಒಳಗೊಂಡಂತೆ 17 ಜನರಲ್ಲಿ ಸೋಂಕು ಪ್ರಕರಣ ಮತ್ತೆ ದಾವಣಗೆರೆ ಜನರನ್ನು ಧೃತಿಗೆಡುವಂತೆ ಮಾಡಿದೆ. ಮೇ 3ರಂದು ಒಂದೇ ದಿನ 21ಪಾಸಿಟಿವ್ ಪ್ರಕರಣ ಪತ್ತೆಯಾದ ನಂತರ ನಿನ್ನೆ 17 ಜನರಲ್ಲಿ ಸೋಂಕು ವಕ್ಕರಿಸಿದೆ.
ನಾಲ್ವರು ನರ್ಸ್ ಒಳಗೊಂಡಂತೆ ಒಟ್ಟಾರೆ ಆರು ಪ್ರಕರಣಗಳಿಗೆ ಸಂಬಂಧಿಸಿದಂತೆ ಸೋಂಕಿನ ಸಂಪರ್ಕ ಮೂಲವೇ ಗೊತ್ತಾಗಿಲ್ಲ. ಅವರಲ್ಲಿ ಕೋವಿಡ್ ವಾರಿಯರ್ಸ್‌ಗಳಾಗಿ ಕೆಲಸ ಮಾಡುತ್ತಿರುವವರೇ ಕೋವಿಡ್ ಸೋಂಕು ತಗುಲಿರುವುದು ಎಂಬುದು ಜಿಲ್ಲಾಡಳಿತವನ್ನ ಚಿಂತೆಗೀಡು ಮಾಡಿದೆ. ನಾಲ್ವರು ನರ್ಸ್‌ಗಳು 31 ವರ್ಷ (ರೋಗಿ ನಂ. 5310), 36 ವರ್ಷ (ರೋಗಿ ನಂ. 5311), 42 ವರ್ಷದ (ರೋಗಿ ನಂ. 5312), 48 ವರ್ಷದ (ರೋಗಿ ನಂ. 5313) ಕೊರೊನಾ ಸೋಂಕಿತರ ಚಿಕಿತ್ಸಾ ವಿಭಾಗದಲ್ಲಿ ಕೆಲಸ ಮಾಡುತ್ತಿರಲಿಲ್ಲ. ಬೇರೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಸೋಂಕು ಹೇಗೆ ಕಾಣಿಸಿಕೊಂಡಿದೆ ಎಂಬುದನ್ನ ಪತ್ತೆ ಹಚ್ಚಲಾಗುತ್ತಿದೆ ಎಂದು ಜಿಲ್ಲಾ ಆಸ್ಪತ್ರೆ ಮೂಲಗಳು ತಿಳಿಸಿವೆ.
ದಾವಣಗೆರೆಯಲ್ಲಿ ಕಂಟೈನ್ ಮೆಂಟ್ ಝೋನ್ ಸಂಪರ್ಕದಿಂದಲೂ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. ಲಾಕ್‌ಡೌನ್, ಸೀಲ್‌ಡೌನ್, ಜಾಗೃತಿ, ಕಟ್ಟೆಚ್ಚೆರದ ನಡುವೆಯೂ ಜನರು ಮುಕ್ತ ಓಡಾಟ ಸೋಂಕಿನ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಕಂಟೈನ್ ಮೆಂಟ್ ಝೋನ್ ಜಾಲಿನಗರದಲ್ಲಿ ಕೊರೊನಾ ಹರಡುವಿಕೆಯ ಜಾಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜಾಲಿನಗರ ಒಂದರಲ್ಲಿಯೇ ಒಂದು ನೂರು ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಇತ್ತೀಚಿನ ದಿನಗಳಲ್ಲಿ ಬಸವರಾಜ ಪೇಟೆ, ಆನೆಕೊಂಡ ಕಂಟೈನ್ ಮೆಂಟ್ ಝೋನ್‌ನಲ್ಲಿ ಸೋಂಕಿಗೆ ಒಳಗಾಗುತ್ತಿರುವರ ಸಂಖ್ಯೆ ಹೆಚ್ಚಾಗುತ್ತಿದೆ.
50 ವರ್ಷದ ವೃದ್ಧೆ (ರೋಗಿ ನಂ. 5300), 42 ವರ್ಷದ ವ್ಯಕ್ತಿ (ರೋಗಿ ನಂ. 5309), ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. 71 ವರ್ಷದ (ರೋಗಿ ನಂ. 5299) ಕಂಟೈನ್ ಮೆಂಟ್ ಝೋನ್ ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. ರೋಗಿ ನಂ. 4093 ರ ಸಂಪರ್ಕದಿಂದ 50 ವರ್ಷದ ವೃದ್ಧೆ(ರೋಗಿ ನಂ. 5300), 23 ವರ್ಷದ ಯುವತಿ (ರೋಗಿ ನಂ. 5301), 20 ವರ್ಷದ ಯುವತಿ (ರೋಗಿ ನಂ. 5302), 46 ವರ್ಷದ ಹೆಣ್ಣು ಮಗಳು (ರೋಗಿ ನಂ. 5303), 45 ವರ್ಷದ ಪುರುಷ (ರೋಗಿ ನಂ. 5304), 42 ವರ್ಷದ ಹೆಣ್ಣು ಮಗಳು (ರೋಗಿ ನಂ. 5305) ಸೋಂಕು ಕಾಣಿಸಿಕೊಂಡಿದೆ. ರೋಗಿ ನಂ. 1247ರ ಸಂಪರ್ಕದಿಂದ 46 ವರ್ಷದ ಮಹಿಳೆ (ರೋಗಿ ನಂ. 5306), 24 ವರ್ಷದ ಯುವತಿ (ರೋಗಿ ನಂ. 5307) ಸೋಂಕು ಬಂದಿದೆ. ರೋಗಿ ನಂ. 3637 ರ ಸಂಪರ್ಕದಿಂದ 9 ವರ್ಷದ ಬಾಲಕನಿಗೆ (ರೋಗಿ ನಂ. 5308)ಸೋಂಕು ವಕ್ಕರಿಸಿದೆ.
53 ವರ್ಷದ ವೃದ್ಧೆ(ರೋಗಿ ನಂ. 5314) ರೋಗಿ ನಂ. 4813ರ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ. 44 ವರ್ಷದ ಪುರುಷನಿಗೆ ರೋಗಿ ನಂ. 1247 ರ ಸಂಪರ್ಕದಿಂದ ಸೋಂಕು ಕಾಣಿಸಿಕೊಂಡಿದೆ. ದಾವಣಗೆರೆ ಜಿಲ್ಲೆಯಲ್ಲಿ ಈವರೆಗಿನ ಒಟ್ಟಾರೆ 203 ಪ್ರಕರಣಗಳಲ್ಲಿ 150 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸಾcರ್ಜ್ ಆಗಿದ್ದಾರೆ. ಆರು ಜನರು ಮೃತಪಟ್ಟಿದ್ದಾರೆ. 47 ಸಕ್ರಿಯ ಪ್ರಕರಣಗಳಿವೆ.