Advertisement

ಮತ್ತೆ ಎಂಟು ಜನರಿಗೆ ಕೋವಿಡ್

11:20 AM Jun 22, 2020 | Team Udayavani |

ದಾವಣಗೆರೆ: ದಾವಣಗೆರೆಯಲ್ಲಿ ಭಾನುವಾರ ಮತ್ತೆ ಎಂಟು ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಕಳೆದ ಜೂ.17 ರಂದು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಕೋವಿಡ್  ನಿಂದ ಮೃತಪಟ್ಟಿರುವ 56 ವರ್ಷದ ವಯೋವೃದ್ಧೆ (ರೋಗಿ ನಂಬರ್‌ 7573) ಸಂಪರ್ಕದಿಂದ ಏಳು ಜನರಿಗೆ ಕೋವಿಡ್ ಮಹಾಮಾರಿ ವಕ್ಕರಿಸಿದೆ.

Advertisement

ಮೃತ ವಯೋವೃದ್ಧೆಯ ಸಂಪರ್ಕದಿಂದ 31 ವರ್ಷದ ವ್ಯಕ್ತಿ (ರೋಗಿ ನಂಬರ್‌ 8779), 58 ವರ್ಷದ ಮಹಿಳೆ (ರೋಗಿ ನಂಬರ್‌ 8801), 14 ವರ್ಷದ ಬಾಲಕ (ರೋಗಿ ನಂಬರ್‌ 8802), 56 ವರ್ಷದ ಮಹಿಳೆ (ರೋಗಿ ನಂಬರ್‌ 8803), 60 ವರ್ಷದ ವೃದ್ಧೆ (ರೋಗಿ ನಂಬರ್‌ 8804), 59 ವರ್ಷದ ವೃದ್ಧ (ರೋಗಿ ನಂಬರ್‌ 8805), 47 ವರ್ಷದ ವ್ಯಕ್ತಿ (ರೋಗಿ ನಂಬರ್‌ 8806)ಯಲ್ಲಿ ಸೋಂಕು ಕಾಣಿಸಿಕೊಂಡಿದೆ. ದಾವಣಗೆರೆಯ ಆನೆಕೊಂಡದ ಕಂಟೈನ್‌ ಮೆಂಟ್‌ ಝೋನ್‌ ಸಂಪರ್ಕದಿಂದ 39 ವರ್ಷದ ವ್ಯಕ್ತಿ (ರೋಗಿ ನಂಬರ್‌ 8800) ಸೋಂಕಿಗೆ ತುತ್ತಾಗಿದ್ದಾರೆ.

ದಾವಣಗೆರೆಯಲ್ಲಿ ಭಾನುವಾರ 14 ಜನರು ಸೇರಿ ಒಟ್ಟು 1,038 ಜನರು ಅವಲೋಕನದಲ್ಲಿದ್ದಾರೆ. 5 ಜನರು ಒಳಗೊಂಡಂತೆ 749 ಜನರು ಹೋಂ, 43 ಜನರು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ. 15 ಜನರು ಆಸ್ಪತ್ರೆಗೆ ದಾಖಲಾ ಗಿದ್ದಾರೆ. ಈವರೆಗೆ 735 ಜನರು ಆಸ್ಪತ್ರೆಯಲ್ಲಿದ್ದಾರೆ. ನಿನ್ನೆ 170 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ.

438 ಜನರ ಗಂಟಲು ದ್ರವ ಮಾದರಿ ವರದಿ ನೆಗೆಟಿವ್‌ ಬಂದಿದೆ. ಇದುವರೆಗೆ ಕೋವಿಡ್ ಸಂಬಂಧಿತ ಪರೀಕ್ಷೆಗೆ ಕಳಿಸಲಾಗಿರುವ 14,310 ಗಂಟಲು ದ್ರವ ಮಾದರಿಯಲ್ಲಿ 13,188 ಮಾದರಿಗಳ ವರದಿ ನೆಗೆಟಿವ್‌ ಆಗಿದೆ. ಇನ್ನೂ 686 ಮಾದರಿಗಳ ವರದಿ ಬರಬೇಕಾಗಿದೆ. ಜಿಲ್ಲೆಯಲ್ಲಿ ಒಟ್ಟು 256 ಪ್ರಕರಣಗಳಲ್ಲಿ ಇಲ್ಲಿಯವರೆಗೆ 220 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಏಳು ಜನರು ಮೃತಪಟ್ಟಿದ್ದು, 29 ಸಕ್ರಿಯ ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next