Advertisement

ಸಿಸಿ ರಸ್ತೆ ಕಾಮಗಾರಿ ಪರಿಶೀಲನೆ

11:37 AM Jun 15, 2020 | Naveen |

ದಾವಣಗೆರೆ: ನಿಜಲಿಂಗಪ್ಪ ಬಡಾವಣೆಯ ರಿಂಗ್‌ ರಸ್ತೆಯಲ್ಲಿ ಸ್ಮಾರ್ಟ್‌ ಸಿಟಿ ಅನುದಾನದ 46 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 5.8 ಕಿಮೀ ಸಿಸಿ ರಸ್ತೆ ಕಾಮಗಾರಿಯನ್ನು ಭಾನುವಾರ ಮಹಾನಗರ ಪಾಲಿಕೆ ವಿಪಕ್ಷ ಸದಸ್ಯರು ಪರಿಶೀಲಿಸಿದರು.

Advertisement

ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಮುಖ್ಯಇಂಜಿನಿಯರ್‌ ಸತೀಶ್‌, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ರವಿ, ಗುರುಪಾದಯ್ಯ, ಸಿಎಂಸಿ ಇಂಜಿನಿಯರ್‌ ನಟರಾಜ್‌, ಗುತ್ತಿಗೆದಾರ ಉದಯ ಶಿವಕುಮಾರ್‌ ಅವರನ್ನ ಸ್ಥಳಕ್ಕೆ ಕರೆಸಿ ಮಾಹಿತಿ ಪಡೆದ ಸದಸ್ಯರು ಅವೈಜ್ಞಾನಿಕ ಕಾಮಗಾರಿ ಬಗ್ಗೆ ಕಿಡಿಕಾರಿದರು.

7.5 ಮೀಟರ್‌ ಸಿಸಿ ರಸ್ತೆ, 3.5 ಮೀಟರ್‌ ಪೇವರ್ಸ್‌ ಹಾಕುವ ಬದಲಾಗಿ 9 ಮೀಟರ್‌ ಸಿಸಿ ರಸ್ತೆ ಮಾಡಿ 2 ಮೀಟರ್‌ ಪೇವರ್ಸ್‌ ಹಾಕಬೇಕು. ಮುಂದಿನ ದಿನದಲ್ಲಿ ವಾಹನ ದಟ್ಟಣೆ ಜಾಸ್ತಿ ಯಾಗಲಿದೆ. ಲೋಡ್‌ ವಾಹನಗಳು ಸಂಚರಿಸುವುದರಿಂದ ಪೇವರ್ಸ್‌ ಕುಸಿ ಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಿಸಿ ರಸ್ತೆಯನ್ನು 9 ಮೀಟರಿಗೆ ಹೆಚ್ಚಿಸಬೇಕು, 2 ಮೀಟರ್‌ ಪೇವರ್ಸ್‌ ಮಾಡುವುದರಿಂದ ನಿರ್ವಹಣಾ ವೆಚ್ಚವು ಕಡಿಮೆಯಾಗಲಿದೆ ಎಂದು ವಿಪಕ್ಷ ನಾಯಕ ಎ.ನಾಗರಾಜ್ ತಾಕೀತು ಮಾಡಿದರು.

ಸ್ಮಾರ್ಟ್‌ ಸಿಟಿ ಎಂ.ಡಿ ರವೀಂದ್ರ ಮಲ್ಲಾಪುರ, ಇಂಜಿನಿಯರ್‌ ಗಳ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಭರವಸೆ ನೀಡಿದರು. ಮಹಾನಗರ ಪಾಲಿಕೆ ಸದಸ್ಯರಾದ ದೇವರಮನಿ ಶಿವಕುಮಾರ್‌ ಗಡಿಗುಡಾಳ್‌ ಮಂಜುನಾಥ್‌, ಮುಖಂಡರಾದ ಹುಲ್ಮನಿ ಗಣೇಶ್‌, ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ.ಎಲ್‌. ಹರೀಶ್‌ ಬಸಾಪುರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next