Advertisement

ದಾವಣಗೆರೆ: ವೀರಶೈವ ಲಿಂಗಾಯತ ಮಹಾಸಭಾದ 23 ನೇ ಅಧಿವೇಶನ ಮುಂದೂಡಿಕೆ

05:04 PM Dec 18, 2022 | Team Udayavani |

ದಾವಣಗೆರೆ: ದಾವಣಗೆರೆಯ ಎಂಬಿಎ ಕಾಲೇಜು ಮೈದಾನದಲ್ಲಿ ಡಿ. 24 ರಿಂದ 26 ರ ವರೆಗೆ ನಿಗದಿಯಾಗಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 23 ನೇ ಅಧಿವೇಶನವನ್ನು 2023ರ ಫೆ. 11 ರಿಂದ 13 ಕ್ಕೆ ಮುಂದೂಡಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಿಳಿಸಿದರು.

Advertisement

ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಡಿ. 19 ರಿಂದ ನಡೆಯುವ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಮಹಾಸಭಾದ ಅಧಿವೇಶನದಲ್ಲಿನ ಅನೇಕ ವಿಚಾರಧಾರೆಗಳು ಸಮಾಜಕ್ಕೆ ದಿಕ್ಸೂಚಿ ಮತ್ತು ಅಮೂಲ್ಯವಾಗಿರುವುದರಿಂದ ತಾವು ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮಹಾಸಭಾದ ಅಧಿವೇಶನವನ್ನು ಮುಂದೂಡಬೇಕು ಎಂಬುದಾಗಿ ಸಮಾಜದ ಅನೇಕ ಜನಪ್ರತಿನಿಧಿಗಳು ಅಭಿಪ್ರಾಯ ವ್ಯಕ್ತ ಪಡಿಸಿರುವುದರಿಂದ ಮುಂದೂಡಲಾಗಿದೆ ಎಂದರು.

ಉತ್ತರ ಕರ್ನಾಟಕದ ಕೆಲ ಜಿಲ್ಲಾ ಅಧ್ಯಕ್ಷರು ಅಧಿವೇಶನದ ಸಂಘಟನೆಗೆ ಲಭ್ಯವಿರುವ ಸಮಯ ಕಡಿಮೆ ಎಂದು ತಿಳಿಸಿದ್ದರು. ಸಾರ್ವಜನಿಕ ವಲಯದಿಂದಲೂ ಮುಂದೂಡಿವಿಕೆಯ ಬಗ್ಗೆ ಹೆಚ್ಚು ಒಲವು ಕಂಡ ಬಂದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ನಡೆಯಬೇಕಿದ್ದ ಮಹಾಸಭಾದ ೨೩ನೇ ಅಽವೇಶನವನ್ನ ಮುಂದೂಡಲಾಗಿದೆ. ಅಧಿವೇಶನವನ್ನು ರದ್ಧುಪಡಿಸಿಲ್ಲ ಮುಂದೂಡಲಾಗಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಮುಂದಿನ ೨೦೨೩ರ ಫೆ. 11 ರಿಂದ 13 ರ ವರೆಗೆ ಅದೇ ಎಂಬಿಎ ಕಾಲೇಜು ಮೈದಾನದಲ್ಲಿ ಇನ್ನೂ ಹೆಚ್ಚಿನ ಹುರುಪು, ವೈಭವದಿಂದ 23ನೇ ಅಧಿವೇಶನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗುವುದು ಎಂದು ತಿಳಿಸಿದರು.

ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಎಸ್.ಎಸ್. ಗಣೇಶ್, ಅಥಣಿ ಎಸ್. ವೀರಣ್ಣ, ಅಣಬೇರು ರಾಜಣ್ಣ, ಕಾರ್ಯದರ್ಶಿ ರೇಣುಕ ಪ್ರಸನ್ನ, ಜಿಲ್ಲಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಶುಭ ಐನಳ್ಳಿ, ನಿರ್ಮಲಾ ಸುಭಾಷ್, ಬಿ.ಜಿ. ರಮೇಶ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next