ಕುಷ್ಟಗಿ: ಕಬಡ್ಡಿ ವೈಭವ ಅಂತರ ರಾಜ್ಯ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿಯಲ್ಲಿ ದಾವಣಗೇರಾ ಜಿಲ್ಲಾ ಕಬಡ್ಡಿ ತಂಡ ಭರ್ಜರಿ ಜಯ ಸಾಧಿಸುವ ಮೂಲಕ ಡಾ. ಪುನೀತ್ ರಾಜಕುಮಾರ ಕಪ್ ಮುಡಿಗೇರಿಸಿಕೊಂಡಿದೆ.
ಕಳೆದ ನ.19ರ ಸಂಜೆ ಚಾಲನೆಗೊಂಡ ಕಬಡ್ಡಿ ಪಂದ್ಯಾವಳಿ ನವೆಂಬರ್ 20 ರ ರಾತ್ರಿ ಮುಂದುವರೆದು 21ರ ಬೆಳಗಿನ ಜಾವ ನಾಲ್ಕೂವರೆವರೆಗೂ ನಡೆದಿರುವುದು ಗಮನಾರ್ಹ ಎನಿಸಿತು. 32 ತಂಡಗಳು ಪ್ರತಿನಿಧಿಸಿದ್ದ ಈ ಎರಡು ದಿನಗಳ ರೋಮಾಂಚನಕಾರಿ ಕಬಡ್ಡಿ ಪಂದ್ಯಾವಳಿ ಇಲ್ಲಿನ ಹಸನಸಾಬ್ ದೋಟಿಹಾಳ ಅವರ ಜಾಗದಲ್ಲಿ ನಡೆದ ಕಬಡ್ಡಿ ಪಂದ್ಯ ಸಾಕ್ಷಿಯಾಯಿತು. ಶರಣು ತೆಗ್ಗಿಹಾಳ ನೇತೃತ್ವದಲ್ಲಿ ಕುಷ್ಟಗಿಯ ವಿವೇಕಾನಂದ ಸ್ಪೋಟ್ಸ್ ಕ್ಲಬ್, ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಅಂತರ್ ರಾಜ್ ಹೊನಲು ಬೆಳಕಿನ ಪಂದ್ಯಾವಳಿ ಸಂಧರ್ಭದಲ್ಲಿ ಪ್ರೇಕ್ಷಕರು ಮೈ ನುಡುಗಿಸುವ ಚಳಿ ಲೆಕ್ಕಿಸದೇ ಕ್ಷಣ ಕ್ಷಣದ ಕುತೂಹಲವನ್ನು ಮೈಚಳಿ ಬಿಟ್ಟು ನೋಡಿ ಸಂಭ್ರಮಿಸಿದರು.
ದಾವಣಗೇರಾ ಜಿಲ್ಲಾ ತಂಡ ಐನಾಪೂರ ನಡುವಿನ ಸೆಣಸಾಟದಲ್ಲಿ ದಾವಣಗೇರಾ ತಂಡದ ಅಮೋಘ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ಐನಾಪೂರ ತಂಡವನ್ನು ಸುಲಭವಾಗಿ 12-28 ಅಂತರದಿಂದ ದಾವಣಗೇರಾ ಜಿಲ್ಲಾ ತಂಡ ಮಣಿಸಿ ಡಾ. ಪುನೀತ್ ರಾಜಕುಮಾರ ತಂಡ ತನ್ನದಾಗಿಸಿಕೊಂಡಿತು.
ಐನಾಪೂರ ದ್ವೀತೀಯ ಬಹುಮಾನ, ತುಳಸಿಗೇರಿ ಪವನಪುತ್ರ ತಂಡ ತೃತೀಯ ಹಾಗೂ ಬಿಸಿಆರ್ ಚಳಗೇರಾ ತಂಡ ಚತುರ್ಥ ಬಹುಮಾನಗಳಿಸಿತು. ತಂಡದ ರೆಪ್ರೀಗಳಾಗಿ ಎನ್.ಎಸ್. ಗೋಡೆ, ಶರುಣು ಗಾಡಗೋಳಿ, ಹುಲ್ಲಪ್ಪ, ಶಿವು, ರಫಿ, ಸುನೀತಾ ಕಾರ್ಯ ನಿರ್ವಹಿಸಿದರು. ಆಯೋಜಿಕ ಶರಣು ತೆಗ್ಗಿಹಾಳ ವೀಕ್ಷಕ ವಿವರಣಾಕಾರರಾಗಿ ಗಮನ ಸೆಳೆದರು.