ದಾವಣಗೆರೆ: ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಹಾನಗರ ಘಟಕದ ವತಿಯಿಂದ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ 125ನೇ ಜಯಂತಿ ಅಂಗವಾಗಿ ಪರಾಕ್ರಮ ದಿನವನ್ನು ನಗರದ ನೂತನ ಕಾಲೇಜ್ ಆವರಣದಲ್ಲಿ ನೂತನ್ ಪಿಯು ಕಾಲೇಜು, ಪುಷ್ಪ ಮಹಾಲಿಂಗಪ್ಪ ಪಿಯು ಕಾಲೇಜು ಮತ್ತು ಶ್ರೀ ಸಿದ್ದೇಶ್ವರ ಪಿಯು ಕಾಲೇಜುಗಳ ಸಹಯೋಗದೊಂದಿಗೆ ಆಚರಿಸಲಾಯಿತು.
ಓದಿ···ಬಸ್- ಬೈಕ್ ನಡುವೆ ರಸ್ತೆ ಅಪಘಾತ: ಆರ್ ಎಸ್ಎಸ್ ಮುಖಂಡ ಸಾವು
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಹಾಗೂ ಸರಸ್ವತಿ, ನೇತಾಜಿ ಸುಭಾಷ್ ಚಂದ್ರ ಭೋಸ್, ಸ್ವಾಮಿ ವಿವೇಕಾನಂದರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಎಬಿವಿಪಿ ಮಹಾನಗರ ಅಧ್ಯಕ್ಷ ಪವನ್ ರೇವಣರ್ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಭಾಷಣಕಾರ ನಿತಿನ್‌ಕುಮಾರ್,
ನೇತಾಜಿ ಸುಭಾಷ್‌ಚಂದ್ರ ಭೋಸ್ ಅವರ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳಿಗೆ
ತಿಳಿಸಿದರು.
ಮುಖ್ಯ ಅತಿಥಿಗಳಾದ ಸುಮಿತ್ರಾ ಕೆ.ಟಿ., ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನದ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಕಾರ್ಯಕಾರಿ ಸದಸ್ಯ ಶರತ್,ಹೋರಾಟ ಪ್ರಮುಖ ವಿಜಯ್,ನಗರ ಕಾರ್ಯಕಾರಿಣಿ ಸದಸ್ಯರಾದ ಕೋಟ್ರೇಶ್, ಅಭಿಷೇಕ್, ಚರಣ್ ಮತ್ತು ಸುಮನ್,ನರೇಂದ್ರ,ರಾಜು ಹಾಗೂ ನಗರ ಕಾರ್ಯಕರ್ತರು ಉಪಸ್ಥಿತರಿದ್ದರು.
ಓದಿ··33 ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟ