Advertisement

ದಾವಣಗೆರೆ: ಹಾಡಹಗಲೇ ಬರ್ಬರವಾಗಿ ಇರಿದು ಯುವತಿಯ ಹತ್ಯೆ; ದುಷ್ಕರ್ಮಿ ಪರಾರಿ

02:23 PM Dec 22, 2022 | Team Udayavani |

ದಾವಣಗೆರೆ: ಮದುವೆ ವಿಚಾರವಾಗಿ ಯುವತಿಯನ್ನ ಹಾಡು ಹಗಲೇ ಅತ್ಯಂತ ಭೀಕರವಾಗಿ ಕೊಲೆ ಮಾಡಿ ಪರಾರಿಯಾದ ಘಟನೆ  ನಗರದ ಚರ್ಚ್ ರಸ್ತೆಯಲ್ಲಿ ನಡೆದಿದೆ.ದಾವಣಗೆರೆ ವಿನೋಬ ನಗರದ ಚಾಂದ್ ಸುಲ್ತಾನ್ (24) ಕೊಲೆಯಾದ ಯುವತಿ ಎಂದು ಗುರುತಿಸಲಾಗಿದೆ.

Advertisement

ಪಿಜೆ ಬಡಾವಣೆಯ ಚರ್ಚ್ ರಸ್ತೆಯಲ್ಲಿ ಬಳಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಯುವತಿಯನ್ನು ಬೆಳಗ್ಗೆ 11.30ಕ್ಕೆ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.ಚಾಂದ್ ಸುಲ್ತಾನಾಳಿಗೆ 8 ತಿಂಗಳ ಹಿಂದೆ ಹರಿಹರ ಮೂಲದ ಯುವಕನೊಂದಿಗೆ ನಿಶ್ಚಿತಾರ್ಥವಾಗಿತ್ತು. ವಿವಾಹಕ್ಕೆ ವಿರೋಧಿಸಿ ಸುಲ್ತಾನಳನ್ನು ಹತ್ಯೆ ಮಾಡಲಾಗಿದೆ ಎಂದು ಶಂಕೆ ವ್ಯಕ್ತವಾಗಿದೆ. ಯುವತಿಯ ಕೊಲೆ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.

ಯುವತಿ ಸ್ಕೂಟರ್ ನಲ್ಲಿ ಬಂದು ವಾಹನ ನಿಲ್ಲಿಸಿ ಕೊಲೆ ಮಾಡಿದ ವ್ಯಕ್ತಿಯ ಜೊತೆಗೆ ಮಾತನಾಡುತ್ತಿದ್ದಂತೆ ಏಕಾಎಕಿ ಚಾಕುವಿನಿಂದ ಯುವತಿಯ ಕುತ್ತಿಗೆಗೆ ಹಲವಾರು ಬಾರಿ ಇರಿದ ಯುವಕ ನಾಪತ್ತೆ ಯಾಗಿದ್ದಾನೆ. ಕೆಲವರು ಹಲ್ಲೆ ನಡೆಸುತ್ತಿದ್ದನ್ನ ನೋಡುತ್ತಿದ್ದರೂ ಯುವಕ ಬೈಕ್ ನಲ್ಲಿ ಪರಾರಿಯಾಗಿದ್ದಾನೆ.

ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next