Advertisement

17ರಂದು ರಾಷ್ಟ್ರೀಯ ನಿರುದ್ಯೋಗ ದಿನ ಆಚರಣೆ

01:56 PM Sep 13, 2021 | Team Udayavani |

ದಾವಣಗೆರೆ : ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದ್ದು ರಾಷ್ಟ್ರೀಯ ಯುವ ಕಾಂಗ್ರೆಸ್‌ ವತಿಯಿಂದ ಸೆ.17 ರಂದು ರಾಷ್ಟ್ರೀಯ ನಿರುದ್ಯೋಗ ‌ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್‌ ವ‌ಕ್ತಾರ ಎಚ್‌. ಜೆ. ಮೈನುದ್ದೀನ್‌ ತಿಳಿಸಿದರು.

Advertisement

ಭಾನುವಾರ ‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಟ್ಟ ಮಾತಿನಂತೆ ಪ್ರಧಾನಿ ಮೋದಿ ಕಳೆದ‌ ಏಳು ವರ್ಷಗಳಲ್ಲಿ 14 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಆದರೆ ಪದವಿ ಪಡೆದ ಕೋಟ್ಯಂತರ ವಿದ್ಯಾರ್ಥಿಗಳು ಇಂದು ಸರ್ಟಿಫಿಕೆಟ್‌ ಹಿಡಿದುಕೊಂಡು ಬೀದಿ ಸುತ್ತುವಂತಾಗಿದೆ ಎಂದರು.

ಇದನ್ನೂ ಓದಿ : ಅತಿವೃಷ್ಟಿಯಿಂದ ಹಾನಿ : ಸಮೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿಗೆ ಎಂ ಪಿ ಕುಮಾರಸ್ವಾಮಿ ಸಲಹೆ

ರಾಷ್ಟ್ರೀಯ ಭಾಷಣ ಸ್ಪರ್ಧೆ: ರಾಷ್ಟ್ರೀಯ ಯುವ ಕಾಂಗ್ರೆಸ್‌ ನೇತೃತ್ವದಲ್ಲಿ ಯುವಕರಗೆ ಹೆಚ್ಚಿನ ಪ್ರೋತ್ಸಾಹ ‌ ನೀಡುವ ‌ ನಿಟ್ಟಿನಲ್ಲಿ ರಾಷ್ಟ್ರೀಯ ಭಾಷಣ  ‌ ಸ್ಪರ್ಧೆ (ಯಂಗ್‌ ಇಂಡಿಯಾ ಕೇಬಲ್‌) “ಯುವ ಭಾರತದ ಧ್ವನಿ’ ಎಂಬ ವಿನೂತನ ಸ್ಪರ್ಧೆ ಆಯೋಜಿಸ‌ಲಾಗಿದೆ. ವಯಸ್ಸಿನ ಮಿತಿ 18 ವ‌ರ್ಷದಿಂದ ‌ 35 ವರ್ಷದೊಳಗೆ ಸೀಮಿತವಾಗಿದೆ. ಮೊದಲ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ‌ ಸ್ಪರ್ಧೆ ಆಯೋಜಿಲಾಗುವುದು ಎಂದು ಮೈನುದ್ದೀನ್‌ ತಿಳಿಸಿದರು. ಐದು ವಿಜೇತರನ್ನು ಜಿಲ್ಲಾ ಮಟ್ಟದ ವಕ್ತಾರರನ್ನಾಗಿ ನೇಮಕ ಮಾಡಲಾಗುವುದು. ಮುಂದಿನ ರಾಜ್ಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆಯುತ್ತಾರೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದ ‌ ಐದು ವಿಜೇತರನ್ನು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ರಾಜ್ಯ ಮಟ್ಟದಲ್ಲಿ 10 ವಿಜೇತರನ್ನು ರಾಜ್ಯ ವಕ್ತಾರನ್ನಾಗಿ ನೇಮಿಸಲಾಗುವುದು. ರಾಷ್ಟ್ರ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಅವ‌ಕಾಶ ಕಲ್ಪಿಸಲಾಗುವುದು.  ಸೆ.14ರಂದು ರಾಷ್ಟ್ರ ‌ಮಟ್ಟದ ಸ್ಪರ್ಧೆಯನ್ನು ದೆಹಲಿಯಲ್ಲಿ ಆಯೋಜಿಸಲಾಗುವುದು. ಐದು ವಿಜೇತರರನ್ನು ರಾಷ್ಟ್ರೀಯ ವ‌ಕ್ತರರನ್ನಾಗಿ ರಾಷ್ಟ್ರೀಯ ಯುವ‌ ಕಾಂಗ್ರೆಸ್‌ ಅಧ್ಯಕ್ಷ ‌ ಬಿ.ವಿ. ಶ್ರೀನಿವಾಸ್‌ ನೇಮಕ ‌ ಮಾಡಿ ಪ್ರಕಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ : ಅತಿವೃಷ್ಟಿಯಿಂದ ಹಾನಿ : ಸಮೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿಗೆ ಎಂ ಪಿ ಕುಮಾರಸ್ವಾಮಿ ಸಲಹೆ

Advertisement
Advertisement

Udayavani is now on Telegram. Click here to join our channel and stay updated with the latest news.

Next