ದಾವಣಗೆರೆ: ಹೊಲದಲ್ಲಿ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದ ಇಬ್ಬರು ಸಿಡಿಲಿಗೆ ಬಲಿಯಾದ ಘಟನೆ ಶುಕ್ರವಾರ ಸಂಜೆ ಜಗಳೂರು ತಾಲೂಕಿನ ಅಣಬೂರು ಗ್ರಾಮದಲ್ಲಿ ನಡೆದಿದೆ.
Advertisement
ಅಣಬೂರು ಗ್ರಾಮದ ಕಾಟಲಿಂಗಪ್ಪ(42), ರಾಜು (32) ಸಿಡಿಲಿಗೆ ಬಲಿಯಾದವರು. ಬಿತ್ತನೆ ಕಾರ್ಯ ಆರಂಭವಾದ ಹಿನ್ನಲೆ ಜಮೀನನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಳೆ ಪ್ರಾರಂಭವಾಗಿದೆ. ಆಸರೆಗೆ ಮರದ ಕೆಳಗೆ ನಿಂತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದು ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ತಾಲೂಕು ಅಧಿಕಾರಿಗಳು ಶಾಸಕ ಬಿ ದೇವೇಂದ್ರಪ್ಪ ಭೇಟಿ ಪರಿಶೀಲನೆ ನಡೆಸಿ, ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.