Advertisement
ದಾವಣಗೆರೆ: ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಹಾಗೂ ನಾನಾ ವಿಧದ ಜಾಡ್ಯಗಳಿಂದ ಜನ ಹೈರಾಣಾಗಿದ್ದು,ಆರೋಗ್ಯ ಸೇವೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಇಲಾಖೆ, ತುರ್ತು ಕರೆ ಸಂಖ್ಯೆ-112 “ಸ್ಪಂದನ ‘ ಸಹಾಯ ವ್ಯವಸ್ಥೆಯನ್ನು ಆರೋಗ್ಯ ಸೇವೆ ಸಹಾಯಕ್ಕೂ ಬಳಸಿಕೊಳ್ಳಲು ನಿರ್ಧರಿಸಿದೆ.
Related Articles
Advertisement
ಹೀಗಿದೆ ಕಾರ್ಯ ವೈಖರಿ: ತುರ್ತು ಸ್ಪಂದನ ಸಹಾಯ ವ್ಯವಸ್ಥೆಯಲ್ಲಿ ಸಾರ್ವಜನಿಕರು 112ಗೆ ಮಾಡುವ ಕರೆಗಳನ್ನು ಬೆಂಗಳೂರಿನಲ್ಲಿರುವ ರಾಜ್ಯ ತುರ್ತು ಪ್ರತಿಕ್ರಿಯೆ ಕೇಂದ್ರದ ಸೇವಾ ಸಮನ್ವಯ ಘಟಕ ಸ್ವೀಕರಿಸಲಿದೆ. ಹೀಗೆ ಕರೆ ಸ್ವೀಕರಿಸುವಾಗಲೇ ಕರೆ ಎಲ್ಲಿಂದ ಬಂತು, ಎಷ್ಟು ಸಮಯಕ್ಕೆ ಬಂತು ಎಂಬ ಮಾಹಿತಿ ಕರೆ ಬಂದ ಸ್ಥಳದ ಉಪಗ್ರಹ ಆಧಾರಿತ ಅಕ್ಷಾಂಶ-ರೇಖಾಂಶ ಸಹಿತ ದಾಖಲಾಗುತ್ತದೆ.
ಅಂದರೆ ಸ್ವಯಂಚಾಲಿತ ಸ್ಥಳ ಗುರುತಿಸುವಿಕೆ ಕಾರ್ಯ ಇಲ್ಲಿ ನಡೆಯುತ್ತದೆ. ಬಳಿಕ ಸಂಬಂಧಪಟ್ಟ ಪ್ರದೇಶಕ್ಕೆ ಹತ್ತಿರದಲ್ಲಿ ನಿಂತಿರುವ ವಾಹನಗಳಿಗೆ ದೂರು ಕೊಟ್ಟವರ ಪ್ರದೇಶದ ಅಕ್ಷಾಂಶ-ರೇಖಾಂಶ ಸಹಿತ ಕರೆ ಬರುತ್ತದೆ. ವಾಹನದಲ್ಲಿ ಅಳವಡಿಸಿರುವ ಸ್ಟಾರ್ಟ್ ಗುಂಡಿ ಒತ್ತಿದರೆ ವಾಹನ ಎಲ್ಲಿ ಹೋಗಬೇಕು ಎಂದು ಡಿಜಿಟಲ್ ಮಾರ್ಗಸೂಚಿ ತೋರಿಸುತ್ತದೆ. ಆ ಪ್ರಕಾರವೇ ಚಾಲಕ ನಿಗದಿತ ಸ್ಥಳ ತಲುಪಬೇಕಾಗುತ್ತದೆ.
ಇದರಿಂದ ಆರೋಗ್ಯ ಸೇವೆಯ ಸಹಾಯದ ನಿರೀಕ್ಷೆಯಲ್ಲಿದ್ದವರಿಗೆ, ಆರೋಗ್ಯ ಸೇವೆಗೆ ಸಂಬಂಧಿಸಿ ಅವ್ಯವಹಾರ ನಡೆಯುತ್ತಿರುವ ಸ್ಥಳಗಳಿಗೆ ಕೂಡಲೇ ಪೊಲೀಸರು ಧಾವಿಸಿ ಸಹಾಯದ ಸ್ಪಂದನೆ ಸಿಗಲಿದೆ. ಜಿಪಿಎಸ್ ತಂತ್ರಜ್ಞಾನ ಆಧಾರಿತ ವಾಹನಗಳನ್ನು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ನಿಲ್ಲಿಸಲಾಗಿದ್ದು ಪ್ರತಿ ದಿನ ಸ್ಥಳ ಬದಲಾವಣೆಯಾಗುತ್ತಿರುತ್ತದೆ.
ಈ ವಿಶೇಷ ವಾಹನಗಳಲ್ಲಿ ಒಬ್ಬ ಸಹಾಯಕ ಉಪನಿರೀಕ್ಷಕರು, ಒಬ್ಬ ಪೊಲೀಸ್ ಹಾಗೂ ಚಾಲಕ ಇರುತ್ತಾರೆ. ವಾಹನಗಳಿಗೆ ಕರೆ ಬರುತ್ತಿದ್ದಂತೆ ವಾಹನವು ಡಿಜಿಟಲ್ ನಕ್ಷೆ ಆಧರಿಸಿ ನಿಗದಿತ ಸ್ಥಳದಲ್ಲಿ ಶರವೇಗದಲ್ಲಿ ತಲುಪುತ್ತದೆ. ಈ ವ್ಯವಸ್ಥೆಯಿಂದ ಆರೋಗ್ಯ ಸೇವೆಯ ತುರ್ತು ಸಹಾಯಕ್ಕೂ ಹೆಚ್ಚು ಅನುಕೂಲವಾಗಲಿದೆ.