Advertisement

ನಗರದಲ್ಲಿ ಯಶಸ್ವಿ ಐಸಿಡಿ ಚಿಕಿತ್ಸೆ

01:16 PM Apr 12, 2019 | Naveen |

ದಾವಣಗೆರೆ: ತೀವ್ರತರ ವೆಂಟಿಕ್ಯುಲರ್‌ ಟೆಕಿಕಾರ್ಡಿಯಾ(ವಿಟಿ) ಸಮಸ್ಯೆ ಹೊಂದಿದ್ದ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರಿಗೆ ನಗರದ ಎಸ್‌.ಎಸ್‌. ನಾರಾಯಣ ಹಾರ್ಟ್‌ ಸೆಂಟರ್‌ನಲ್ಲಿ ಯಶಸ್ವಿಯಾಗಿ ಇಂಪ್ಲಾಂಟಿಬಲ್‌ ಕಾರ್ಡಿಯೋವರ್ಟರ್‌ ಡಿಫಿಭ್ರಿಲೇಟರ್‌(ಐಸಿಡಿ) ಚಿಕಿತ್ಸೆ ನೀಡಲಾಗಿದೆ ಎಂದು
ಹೃದ್ರೋಗ ತಜ್ಞ ಡಾ| ಪಿ. ಮಲ್ಲೇಶ್‌ ತಿಳಿಸಿದ್ದಾರೆ.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮೂಲತಃ ಹೂವಿನಹಡಗಲಿಯ 55 ವರ್ಷ ವಯಸ್ಸಿನ ಮೌನೇಶ ರೆಡ್ಡಿ ಎಂಬುವರು ಮೊದಲಿಗೆ ಹೃದಯ ಬಡಿತ ತಲ್ಲಣದ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಪಡೆದಿದ್ದರು.
ಆನಂತರವೂ ಅವರಲ್ಲಿ ತೀವ್ರತರ ವೆಂಟಿಕ್ಯುಲರ್‌ ಟೆಕಿಕಾರ್ಡಿಯಾ(ವಿಟಿ) ಸಮಸ್ಯೆ ಕಾಣಿಸಿಕೊಂಡಿತ್ತು. ಅಂದರೆ ಹೃದಯದ ಬಡಿತ ಸಾಮಾನ್ಯಕ್ಕಿಂತ ವೇಗವಾಗಿತ್ತು. ಸಾಕಷ್ಟು ಪರೀಕ್ಷೆ ನಡೆಸಿ, ಅಂತಿಮವಾಗಿ ಬೆಂಗಳೂರಿನ
ನಾರಾಯಣ ಹೃದಯಾಲಯದ ಹೃದಯರೋಗ ತಜ್ಞ ಡಾ| ವಿ.ಎಸ್‌. ಪ್ರಕಾಶ್‌ ಮಾರ್ಗದರ್ಶನದಲ್ಲಿ ಇಂಪ್ಲಾಂಟಿಬಲ್‌ ಕಾರ್ಡಿಯೋವರ್ಟರ್‌ ಡಿಫಿಭ್ರಿಲೇಟರ್‌(ಐಸಿಡಿ) ಚಿಕಿತ್ಸೆ ನೀಡಲಾಯಿತು. ಮಧ್ಯ ಕರ್ನಾಟಕದಲ್ಲೇ ಮೊಟ್ಟ ಮೊದಲ ಬಾರಿಗೆ ಇಂಪ್ಲಾಂಟಿಬಲ್‌ ಕಾರ್ಡಿಯೋವರ್ಟರ್‌ ಡಿಫಿಭ್ರಿಲೇಟರ್‌(ಐಸಿಡಿ) ಚಿಕಿತ್ಸೆ ನೀಡಿದ ಕೀರ್ತಿ ಎಸ್‌.ಎಸ್‌. ನಾರಾಯಣ ಹಾರ್ಟ್‌ ಸೆಂಟರ್‌ಗೆ ಸಲ್ಲುತ್ತದೆ ಎಂದರು.

ಇಂಪ್ಲಾಂಟಿಬಲ್‌ ಕಾರ್ಡಿಯೋವರ್ಟರ್‌ ಡಿಫಿಭ್ರಿಲೇಟರ್‌ (ಐಸಿಡಿ) ಎಂದರೆ ಚಿಕ್ಕ ಎಲೆಕ್ಟ್ರಾನಿಕ್‌ ಸಾಧನ. ಅದನ್ನು ಹೃದಯಕ್ಕೆ ಅಳವಡಿಸಿದಾಗ ಹೃದಯಕ್ಕೆ ಸಂಬಂಧಿಸಿದ ತ್ವರಿತ ಹಾಗೂ ಜೀವಕ್ಕೆ ಅಪಾಯ ಇರುವಂತಹ ಸಮಸ್ಯೆ
ಗಳ ಮೇಲೆ ನಿರಂತರವಾಗಿ ನಿಗಾವಿರಿಸಿ ನಿಯಂತ್ರಿಸುವ ಕೆಲಸ ಮಾಡುತ್ತದೆ. ಹೃದಯ ಬಡಿತದಲ್ಲಿ ಏರುಪೇರು ಆದ ತಕ್ಷಣವೇ ಇಂಪ್ಲಾಂಟಿಬಲ್‌ ಕಾರ್ಡಿಯೋವರ್ಟರ್‌ ಡಿಫಿಭ್ರಿಲೇಟರ್‌(ಐಸಿಡಿ) ಶಾಕ್‌ ನೀಡುವ ಮೂಲಕ ಹೃದಯ ಬಡಿತವನ್ನು ನಿಯಂತ್ರಿಸುತ್ತದೆ ಎಂದು ತಿಳಿಸಿದರು.

ಸಾಮಾನ್ಯವಾಗಿ ಹೃದಯ ಸಮಸ್ಯೆ ಎಂದಾಕ್ಷಣ ಹೃದಯಾಘಾತ, ರಕ್ತನಾಳ ಬ್ಲಾಕ್‌, ಬೈಪಾಸ್‌ ಶಸ್ತ್ರಚಿಕಿತ್ಸೆ ಅಂದುಕೊಳ್ಳಲಾಗುತ್ತದೆ. ಹೃದಯ ಬಡಿತದಲ್ಲಿನ ಕಂಪನ, ಲಯದ ಸಮಸ್ಯೆಯೂ ಇವೆ. ಪ್ರತಿ ನಿಮಿಷಕ್ಕೆ ಹೃದಯದ
ಬಡಿತ 70 ರಿಂದ 100 ರಷ್ಟು ಇರಬೇಕು. ತೀವ್ರತರ ಸಮಸ್ಯೆ ಇದ್ದವರಲ್ಲಿ ಹೃದಯದ ಬಡಿತ ಪ್ರತಿ ನಿಮಿಷಕ್ಕೆ 150 ರಿಂದ 200 ರಷ್ಟು ಇರುತ್ತದೆ. ಇದು ತೀರಾ ಅಪಾಯ. ಕ್ಷಣ ಮಾತ್ರದಲ್ಲೇ ಸಾವು ಸಂಭವಿಸಬಹುದು. ವೆಂಟಿಕ್ಯುಲರ್‌
ಟೆಕಿಕಾರ್ಡಿಯಾ(ವಿಟಿ) ಸಮಸ್ಯೆಗೆ ಇಂಪ್ಲಾಂಟಿಬಲ್‌ ಕಾರ್ಡಿಯೋವರ್ಟರ್‌ ಡಿಫಿಭ್ರಿಲೇಟರ್‌(ಐಸಿಡಿ) ಅಳವಡಿಕೆ ಸೂಕ್ತ ಚಿಕಿತ್ಸೆ ಎಂದು ತಿಳಿಸಿದರು.

ಹೃದ್ರೋಗ ತಜ್ಞರಾದ ಡಾ| ಶ್ರೀನಿವಾಸ್‌, ಡಾ| ಸುಜಿತ್‌, ಎಸ್‌.ಎಸ್‌. ನಾರಾಯಣ ಹಾರ್ಟ್‌ ಸೆಂಟರ್‌ನ ಸುನೀಲ್‌, ಜಿ.ಎನ್‌. ಪ್ರಶಾಂತ್‌, ಶಾಲಾ ಶಿಕ್ಷಕ ಮೌನೇಶರೆಡ್ಡಿ ಸುದ್ದಿಗೋಷ್ಠಿಯಲ್ಲಿದ್ದರು.

Advertisement

ಮೂಲತಃ ಹೂವಿನಹಡಗಲಿಯ ಮೌನೇಶ ರೆಡ್ಡಿ ಎಂಬುವರಲ್ಲಿ ತೀವ್ರತರ
ವೆಂಟಿಕ್ಯುಲರ್‌ ಟೆಕಿಕಾರ್ಡಿಯಾ(ವಿಟಿ) ಸಮಸ್ಯೆ ಕಾಣಿಸಿಕೊಂಡಿತ್ತು. ಬೆಂಗಳೂರಿನ ನಾರಾಯಣ ಹೃದಯಾಲಯದ ಹೃದಯರೋಗ ತಜ್ಞ
ಡಾ| ವಿ.ಎಸ್‌. ಪ್ರಕಾಶ್‌ ಮಾರ್ಗದರ್ಶನದಲ್ಲಿ ಇಂಪ್ಲಾಂಟಿಬಲ್‌ ಕಾರ್ಡಿಯೋವರ್ಟರ್‌ ಡಿಫಿಭ್ರಿಲೇಟರ್‌(ಐಸಿಡಿ) ಚಿಕಿತ್ಸೆ ನೀಡಲಾಯಿತು.
ಮಧ್ಯ ಕರ್ನಾಟಕದಲ್ಲೇ ಮೊಟ್ಟ ಮೊದಲ ಬಾರಿಗೆ ಇಂಪ್ಲಾಂಟಿಬಲ್‌ ಕಾರ್ಡಿಯೋವರ್ಟರ್‌ ಡಿಫಿಭ್ರಿಲೇಟರ್‌ (ಐಸಿಡಿ) ಚಿಕಿತ್ಸೆ ನೀಡಿದ ಕೀರ್ತಿ
ಎಸ್‌.ಎಸ್‌. ನಾರಾಯಣ ಹಾರ್ಟ್‌ ಸೆಂಟರ್‌ಗೆ ಸಲ್ಲುತ್ತದೆ.
.ಡಾ| ಪಿ. ಮಲ್ಲೇಶ್‌,
ಎಸ್‌.ಎಸ್‌. ನಾರಾಯಣ ಹಾರ್ಟ್‌ ಸೆಂಟರ್‌

Advertisement

Udayavani is now on Telegram. Click here to join our channel and stay updated with the latest news.

Next