Advertisement

ಒಂದೆಡೆ ಹೋಮ, ಮತ್ತೊಂದೆಡೆ ವಿಜ್ಞಾನ 

11:24 AM Dec 27, 2019 | Naveen |

ದಾವಣಗೆರೆ: ಕಂಕಣ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಗುರುವಾರ ನಗರದಲ್ಲಿ ವಿವಿಧ ದೇವಸ್ಥಾನಗಳಲ್ಲಿ ಗ್ರಹಣ ಶಾಂತಿ ಹೋಮ, ಮಂತ್ರ ಪಠಣ, ವಿಶೇಷ ಪೂಜಾ ವಿಧಿ ವಿಧಾನಗಳು ಜರುಗಿದರೆ, ಮೊತ್ತೂಂದೆಡೆ ಮೌಡ್ಯ ಹೋಗಲಾಡಿಸಿ, ವಿಜ್ಞಾನದ ಅರಿವು ಮೂಡಿಸುವ ಕಾರ್ಯಕ್ರಮ ನಡೆದಿದೆ.

Advertisement

ಹೋಮ, ದೇವರ ಮೊರೆ: ದಾವಣಗೆರೆಯಲ್ಲಿ ಸೂರ್ಯಗ್ರಹಣವು ಬೆಳಗ್ಗೆ 8.06 ನಿಮಿಷಕ್ಕೆ ಆರಂಭವಾಯಿತು. 8.15 ರಿಂದ ಗ್ರಹಣ ಮೋಕ್ಷ ಕಾಲದವರೆಗೂ ನಿರಂತರ ಜಪ ಹಾಗೂ ಹೋಮ ಜರುಗಿತು. ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶೃಂಗೇರಿ ಮಠ, ಕೆಬಿ ಬಡಾವಣೆಯಲ್ಲಿರುವ ಶ್ರೀಗುರು ರಾಘವೇಂದ್ರ ಸ್ವಾಮಿ ಮಠ, ದೇವಸ್ಥಾನ, ಇತರೆಡೆಗಳಲ್ಲಿ ವಿಶೇಷವಾಗಿ ಗ್ರಹಣ ಶಾಂತಿ ಹೋಮ ನಡೆಯಿತು. ಗ್ರಹಣ ದೋಷ ನಿವಾರಣೆಗೆ ಸಾರ್ವಜನಿಕರು ಹೋಮದಲ್ಲಿ ಭಾಗವಹಿಸಿದ್ದರು.

ಹೋಮ, ಮಂತ್ರ ಜಪ ಸೇರಿ ವಿವಿಧ ಪೂಜಾ ವಿಧಿ ವಿಧಾನಗಳನ್ನು ಪುರೋಹಿತರು ನೆರವೇರಿಸಿದರು. ಹರಿಹರದ ಐತಿಹಾಸಿಕ ಹರಿಹರೇಶ್ವರ ದೇವಸ್ಥಾನದಲ್ಲಿ ಗ್ರಹಣ ಕಾಲದಲ್ಲಿ ನಿರಂತರ ಅಭಿಷೇಕ ನಡೆದಿದೆ. ಗ್ರಹಣ ಸ್ಪರ್ಷ ಕಾಲದಿಂದ ಮೋಕ್ಷ ಕಾಲದವರೆಗೆ ಜಲಾಭಿಷೇಕ, ಕ್ಷೀರಾಭಿಷೇಕ, ನಾರಿಕೇಳ ಅಭಿಷೇಕ ನೆರವೇರಿದೆ. ಭಕ್ತರಿಗೆ ಪೂಜಾ ವಿಧಿ ವಿಧಾನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.

ಎಂದಿನಂತೆ ಸೂರ್ಯೋದಯದ ಮುನ್ನ ಧನುರ್ಮಾಸದ ಪೂಜೆ ನಡೆದಿದೆ.ಆದರೆ, ಗ್ರಹಣದ ಹಿನ್ನೆಲೆ ಪ್ರಸಾದದ ವಿತರಣೆ ರದ್ದು ಮಾಡಲಾಗಿತ್ತು. ನಗರದ ಕೆಲವು ದೇವಸ್ಥಾನಗಳ ಬಾಗಿಲು ಮುಚ್ಚಲಾಗಿತ್ತು. ಗ್ರಹಣ ಮುಗಿದ ನಂತರ ದೇವಸ್ಥಾನಗಳಲ್ಲಿ ವಿಶೇಷ ಅಭಿಷೇಕ, ಅಲಂಕಾರ, ಪೂಜೆ ನೆರವೇರಿತು. ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಜನರು ಮನೆಯಿಂದ ಹೊರ ಬರುವುದಕ್ಕೂ ಸಹ ಹಿಂದೇಟು ಹಾಕಿದರು. ಹತ್ತು ಗಂಟೆಯಾದರೆ ಸಾಕು ಕೆಲಸ ಕಾರ್ಯಗಳಿಗೆ ಹಾಗೂ ಶಾಲಾ ಕಾಲೇಜುಗಳಿಗೆ ತೆರಳುತ್ತಿದ್ದ ಜನರು ಗ್ರಹಣದ ಪರಿಣಾಮ ಹೆಚ್ಚಾಗಿ ಕಂಡುಬರಲಿಲ್ಲ. ಸದಾ ಜನರಿಂದ ಗಿಜಿಗುಡುತ್ತಿದ್ದ ಜಯದೇವ ಸರ್ಕಲ್‌, ವಿದ್ಯಾರ್ಥಿ ಭವನ, ಗಾಂಧಿ ಸರ್ಕಲ್‌ ಸೇರಿದಂತೆ ವಿವಿಧೆಡೆ ಕೇವಲ ಜನ ಸಂಚಾರ ವಿರಳವಾಗಿತ್ತು.

ಬೆಳಿಗ್ಗೆಯಿಂದಲೇ ವಾಹನಗಳ ಸಂಚಾರ ಕೂಡ ಎಂದಿನಂತೆ ಇರಲಿಲ್ಲ. ಸೂರ್ಯ ಗ್ರಹಣ ಮೋಕ್ಷದ ನಂತರ ನಗರದ ಬಹುತೇಕ ದೇವಾಲಯಗಳಲ್ಲಿ ಅರ್ಚಕರು ಶುದ್ಧಿ ಕಾರ್ಯಕೈಗೊಂಡರು. ನಂತರ ನಗರದ ಶ್ರೀದುರ್ಗಾಂಬಿಕ ದೇವಿ, ಶ್ರೀ ವೆಂಕಟೇಶ್ವರ, ಇತರೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next