Advertisement

Davanagere; ಹೆಬ್ಬಾಳ ಟೋಲ್ ಬಳಿ ದಾಖಲೆ ಇಲ್ಲದ 39 ಲಕ್ಷ‌ ಮೌಲ್ಯದ 66 ಕೆಜಿ ಬೆಳ್ಳಿ ವಶ

09:42 AM Apr 08, 2023 | Team Udayavani |

ದಾವಣಗೆರೆ: ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 39 ಲಕ್ಷ ಮೌಲ್ಯದ 66 ಕೆಜಿಯ ಬೆಳ್ಳಿ ಆಭರಣಗಳನ್ನು ಅಧಿಕಾರಿ ಗಳು ವಶಪಡಿಸಿಕೊಂಡಿದ್ದಾರೆ.

Advertisement

ದಾವಣಗೆರೆ ತಾಲೂಕಿನ ಹೆಬ್ಬಾಳು ಟೋಲ್ ಬಳಿ ದಾವಣಗೆರೆ ತಹಶೀಲ್ದಾರ್ ಡಾ. ಎಂ.ಬಿ. ಅಶ್ವತ್ ಅವರ ನೇತೃತ್ವದ ತಂಡ ತಪಾಸಣೆ ನಡೆಸುತ್ತಿದ್ದಾಗ ಬಿಎಂಡಬ್ಲ್ಯೂ ಕಾರಿನಲ್ಲಿ ಯಾವುದೇ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ ಬೆಳ್ಳಿ ಆಭರಣಗಳು ಪತ್ತೆಯಾಗಿವೆ.

ತಮಗೆ ಸೇರಿದ ಆಭರಣಗಳನ್ನು ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಕಾರಿನಲ್ಲಿದ್ದವರು
ಸಮಜಾಯಿಷಿ ನೀಡಿದರು.

ಇದನ್ನೂ ಓದಿ:Pushpa 2: ಈ ʼಪುಷ್ಪʼನನ್ನು ನೋಡಿದರೆ ಹುಲಿಯೂ ಹೆದರುತ್ತದೆ! ಫಸ್ಟ್‌ ಲುಕ್‌, ಟೀಸರ್‌ ವೈರಲ್

ಅಧಿಕಾರಿಗಳು ಆಭರಣಗಳ ಜೊತೆಗೆ ಕಾರು ಸಹ ವಶಪಡಿಸಿಕೊಂಡರು. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next