Advertisement

ವಿದ್ಯಾರ್ಥಿಗಳು ನೇತ್ರದಾನಕ್ಕೆ ಮುಂದಾಗಲಿ

12:37 PM Dec 08, 2021 | Team Udayavani |

ಹೊನ್ನಾಳಿ: ಮನುಷ್ಯ ಗತಿಸಿದ ಮೇಲೂ ಆತನ ಹೆಸರುಸ್ಥಿರವಾಗಿ ಉಳಿಯಬೇಕಾದರೆ ನೇತ್ರದಾನ ಮಾಡಬೇಕೆಂದುಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯವಿದ್ಯಾರ್ಥಿಗಳಿಗೆ ಕರೆ ನೀಡಿದರು.

Advertisement

ಪಟ್ಟಣದ ಶ್ರೀ ಚನ್ನೇಶ್ವರ ಗ್ರಾಮಾಂತರ ಪದವಿಪೂರ್ವಕಾಲೇಜಿಗೆ ಮಂಗಳವಾರ ಭೇಟಿ ನೀಡಿ ವಿದ್ಯಾರ್ಥಿಗಳಿಗೆನೇತ್ರದಾನದ ಬಗ್ಗೆ ಮಾಹಿತಿ ನೀಡಿ ಅವರು ಮಾತನಾಡಿದರು.ದಾನಗಳಲ್ಲಿ ನೇತ್ರದಾನ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದದಾನವಾಗಿದ್ದು, ಪ್ರತಿಯೊಬ್ಬರೂ ನೇತ್ರದಾನ ಮಾಡುವಮೂಲಕ ಅಂಧರ ಬಾಳಿಗೆ ಬೆಳಕಾಗಬೇಕು.

ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ನೇತ್ರದಾನ ಮಾಡಲು ಮುಂದೆಬರಬೇಕೆಂದು ನಾವು ಮಾಡುವ ಕೆಲಸ ಬೇರೆಯವರಿಗೆಪ್ರೇರಣೆಯಾಗಬೇಕು ಎಂದರು.

ಪುನೀತ್‌ ರಾಜ್‌ಕುಮಾರ್‌ ಅವರು ನೇತ್ರದಾನಕ್ಕೆ ನಮಗೆಲ್ಲಾಪ್ರೇರಣೆಯಾಗಿದ್ದಾರೆ. ಪ್ರತಿಯೊಬ್ಬರೂ ನೇತ್ರದಾನ ಮಾಡಲುಮುಂದೆ ಬರುವ ಮೂಲಕ ಅಂಧತ್ವವನ್ನು ನಿವಾರಣೆಮಾಡಬೇಕು. ವಿದ್ಯಾದಾನ, ರಕ್ತದಾನ, ಅನ್ನದಾನ, ನೇತ್ರದಾನಅತ್ಯಂತ ಮಹತ್ವವಾದ ದಾನಗಳಾಗಿದ್ದು ಪ್ರತಿಯೊಬ್ಬರೂಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.

ಕೊರೊನಾ ಎರಡನೇ ಅಲೆಯಲ್ಲಿ ಜನಸೇವೆಗೆ ನನ್ನನ್ನುನಾನು ಸಮರ್ಪಿಸಿಕೊಂಡಿದ್ದೆ. ಶಾಸಕನಾಗಿ ಕೇವಲ ಪ್ರಚಾರಕ್ಕಾಗಿಕೆಲಸ ಮಾಡಿಲ್ಲ. ನಾವು ಮಾಡಿದ ಕೆಲಸ ಪ್ರಚಾರವಾಗಬೇಕು.ಇದರಿಂದ ಮತ್ತೂಬ್ಬರಿಗೆ ಸ್ಫೂರ್ತಿ ಬರುತ್ತದೆ ಎಂದರು.ಕಾಲೇಜಿನ ಪ್ರಾಂಶುಪಾಲ ಬಸವರಾಜ್‌ ಉಪ್ಪಿನ್‌,ಎಸ್‌ಎಂಎಸ್‌ಎಫ್‌ ಕಾಲೇಜು ಪ್ರಾಂಶುಪಾಲಡಾ| ಪಿ.ಬಿ. ಚಾಮರಾಜ್‌, ಉಪನ್ಯಾಸಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next