Advertisement

ಅನುಮಾನಾಸ್ಪದ ಸಾವು ಪ್ರಕರಣ ಸಿಬಿಐಗೆ ವಹಿಸಿ

12:31 PM Dec 08, 2021 | Team Udayavani |

ದಾವಣಗೆರೆ: ವಂಚನೆ ಪ್ರಕರಣಕ್ಕೆಸಂಬಂಧಿಸಿದಂತೆ ಪೊಲೀಸರ ವಶದಲ್ಲಿದ್ದವ್ಯಕ್ತಿಯ ಅನುಮಾನಸ್ಪದ ಸಾವಿನಪ್ರಕರಣದ ತನಿಖೆಯನ್ನ ಸಿಬಿಐ ಅಥವಾಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಗೆವಹಿಸಬೇಕು ಎಂದು ಕರ್ನಾಟಕ ರಾಷ್ಟ್ರಸಮಿತಿ ಒತ್ತಾಯಿಸಿದೆ.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಸಮಿತಿ ಜಿಲ್ಲಾಧ್ಯಕ್ಷ ಮಂಜುನಾಥ್‌ ವಿ. ಹಳ್ಳಿಕೇರಿ, ವಂಚನೆಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರವಶದಲ್ಲಿದ್ದ ಚಿತ್ರದುರ್ಗ ತಾಲೂಕಿನಬಹದ್ದೂರುಘಟ್ಟದ ಕುಮಾರ್‌ ಸಾವಿನಪ್ರಕರಣದ ತನಿಖೆಯನ್ನ ಸಿಐಡಿಗೆಒಪ್ಪಿಸಲಾಗಿದೆ. ನ್ಯಾಯ ದೊರಕುವುದುಎಂಬ ನಂಬಿಕೆ ಇಲ್ಲ. ಹಾಗಾಗಿ ಪ್ರಕರಣದತನಿಖೆಯನ್ನು ಸಿಬಿಐ ಅಥವಾ ಹೈಕೋಟ್‌ìನ ಹಾಲಿ ನ್ಯಾಯಾಧೀಶರಿಗೆ ವಹಿಸಬೇಕುಎಂದು ಒತ್ತಾಯಿಸಿದರು.

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆಪೊಲೀಸರ ವಶದಲ್ಲಿದ್ದ ಚಿತ್ರದುರ್ಗತಾಲೂಕಿನ ಬಹದ್ದೂರ್‌ಘಟ್ಟದ ಕುಮಾರ್‌ಸಾವಿನ ಬಗ್ಗೆ ಅನುಮಾನಗಳಿವೆ. ಕುಮಾರ್‌ನನ್ನು ಬಂಧಿಸಲು ವಾರೆಂಟ್‌ ಇತ್ತೇ,ಬಂಧಿಸಿದ್ದರೆ ನ್ಯಾಯಾಧೀಶರ ಮುಂದೆತನಿಖೆಗೆ ಹಾಜರುಪಡಿಸಲಾಗಿತ್ತಾ,ಯಾವ ಕಾರಣಕ್ಕಾಗಿ ವಸತಿಗೃಹದಲ್ಲಿಇರಿಸಲಾಗಿತ್ತು ಎಂಬ ಸಂಶಯಗಳಿವೆ.

ಸಿಬಿಐ ಅಥವಾ ಹೈಕೋರ್ಟ್‌ನ ಹಾಲಿನ್ಯಾಯಾಧೀಶರ ತನಿಖೆಯಿಂದಲೇಸತ್ಯಾಂಶ ಹೊರ ಬರಲಿದೆ. ಕೂಡಲೇಪ್ರಕರಣದ ತನಿಖೆಯನ್ನು ಸಿಬಿಐ ಅಥವಾಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಗೆವಹಿಸಬೇಕು. ತಪ್ಪಿತಸ್ಥರನ್ನ ಬಂಧಿಸಿ, ಸೂಕ್ತಕ್ರಮ ತೆಗೆದುಕೊಳ್ಳಬೇಕು ಎಂದರು.ಯುವ ಘಟಕದ ಜಿಲ್ಲಾಧ್ಯಕ್ಷ ಡಿ.ಜಿ.ಮಾಲತೇಶ್‌ ಮಾತನಾಡಿ, ಮೃತಕುಮಾರ್‌ನ ಕುಟುಂಬಕ್ಕೆ ಸಾಮಾಜಿಕನ್ಯಾಯ ದೊರೆಯಬೇಕು.

ಹಾಗಾಗಿಪ್ರಕರಣದ ತನಿಖೆಯನ್ನ ಸಿಬಿಐ ಅಥವಾಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಗೆವಹಿಸಬೇಕು. ನಮಗೆ ಸಿಐಡಿ ತನಿಖೆ ಬಗ್ಗೆನಂಬಿಕೆ ಇಲ್ಲ. ದೇಶದಲ್ಲಿ ನಡೆದಿರುವಂತಹ1888 ಲಾಕಪ್‌ಡೆತ್‌ ಪ್ರಕರಣಗಳಲ್ಲಿ ಕೇವಲ26 ಪ್ರಕರಣಗಳಲ್ಲಿ ಮಾತ್ರ ಪೊಲೀಸರಿಗೆಶಿಕ್ಷೆಯಾಗಿದೆ. ಕುಮಾರ್‌ನ ಕುಟುಂಬಕ್ಕೆಸರ್ಕಾರಿ ಹುದ್ದೆ ಒಳಗೊಂಡಂತೆ ಅಗತ್ಯಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

Advertisement

ಕುಮಾರ್‌ ಸಾವಿನಪ್ರಕರಣದ ಬಗ್ಗೆ ಮಾನವ ಹಕ್ಕುಗಳಆಯೋಗ, ಎಸ್‌ಸಿ-ಎಸ್‌ಟಿ ಆಯೋಗಕ್ಕೆದೂರು ಸಲ್ಲಿಸಲಾ ಗುವುದು. ಸಾಮಾಜಿಕನ್ಯಾಯ ದೊರೆಯುವಂತಾಗಬೇಕು.ಇಲ್ಲವಾದಲ್ಲಿ ರಾಜ್ಯದ್ಯಾಂತ ತೀವ್ರಸ್ವರೂಪದ ಹೋರಾಟ ನಡೆಸಲಾಗುವುದುಎಂದು ಎಚ್ಚರಿಸಿದರು. ಕರ್ನಾಟಕ ರಾಷ್ಟ್ರ ಸಮಿತಿಯಸಂಘಟನಾ ಕಾರ್ಯದರ್ಶಿ ಎಂ.ಎಚ್‌.ರಾಜು, ಎಸ್‌. ಅಭಿಷೇಕ್‌, ನಟರಾಜ್‌ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next