Advertisement

ಮೊದಲ ಡೋಸ್‌ನಲ್ಲಿ ಸಾಧನೆ -2ನೇ ಡೋಸ್‌ಗೆ ವೇದನೆ

01:18 PM Dec 06, 2021 | Team Udayavani |

ದಾವಣಗೆರೆ: ಇಡೀ ಜಗತ್ತನ್ನು ಕಂಗೆಡಿಸಿದ ಕೊರೊನಾವೈರಸ್‌ಗೆ ಸೆಡ್ಡು ಹೊಡೆಯಲು ಸಂಜೀವಿನಿಯಾಗಿರುವಕೋವಿಡ್‌ ಲಸಿಕೆಯ ಎರಡೂ ಡೋಸ್‌ ಪಡೆಯಲುಲಕ್ಷಾಂತರ ಜನ ಹಿಂದೇಟು ಹಾಕುತ್ತಿದ್ದಾರೆ.

Advertisement

ಇದು ಆಡಳಿತನಡೆಸುವ ಸರ್ಕಾರಗಳಿಗೆ ಸಮಸ್ಯೆ ತಂದೊಡ್ಡಿದೆ. ಆರೋಗ್ಯಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ ಮೊದಲ ಡೋಸ್‌ಲಸಿಕಾಕರಣದ ಸರಾಸರಿ ಪ್ರಗತಿ ಶೇ.92.9 ಆಗಿದೆ.ರಾಜ್ಯದ 16 ಜಿಲ್ಲೆಗಳು ಮೊದಲ ಡೋಸ್‌ಲಸಿಕಾರಣದಲ್ಲಿ ಸರಾಸರಿ ಶೇ.92.9 ಮೀರಿ ಸಾಧನೆಮಾಡಿ ಹಸಿರು ವಲಯದಲ್ಲಿ ಸೇರಿಕೊಂಡಿವೆ.

ಇನ್ನುಳಿದ15 ಜಿಲ್ಲೆಗಳು ಸರಾಸರಿ ಪ್ರಮಾಣದ ಮಿತಿ ತಲುಪದೆಕೆಂಪು ವಲಯದಲ್ಲಿವೆ. ರಾಜ್ಯದಲ್ಲಿ 2ನೇ ಡೋಸ್‌ಹಂಚಿಕೆಯಲ್ಲಿ ಕೇವಲ ಶೇ.64ರಷ್ಟು ಸಾಧನೆಯಾಗಿದೆ.ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ಅಂದಾಜು4,89,16000 ಜನರಲ್ಲಿ 4,54,22,223 ಜನ ಲಸಿಕೆಯಮೊದಲ ಡೋಸ್‌ ಪಡೆದಿದ್ದರೆ, 3,10,87186 ಜನರು2ನೇ ಡೋಸ್‌ ಪಡೆದಿದ್ದಾರೆ. 34,93,777 ಜನ ಒಂದೂಬಾರಿಯೂ ಲಸಿಕೆ ಹಾಕಿಸಿಕೊಂಡಿಲ್ಲ. 1,43,35,037 ಜನ2ನೇ ಡೋಸ್‌ ಪಡೆಯಬೇಕಾಗಿದೆ.

ಸಾಧನೆ ಮಾಡಿದ ಜಿಲ್ಲೆಗಳು: ಲಸಿಕಾಕರಣದ ಮೊದಲಡೋಸ್‌ ಹಂಚಿಕೆಯಲ್ಲಿ ಸರಾಸರಿ ಶೇ.92.9ಕ್ಕಿಂತ ಹೆಚ್ಚುಸಾಧನೆ ಮಾಡಿದ ರಾಜ್ಯದ 16 ಜಿಲ್ಲೆಗಳಲ್ಲಿ ಬೆಂಗಳೂರುನಗರ (ಶೇ.124) ಪ್ರಥಮ ಸ್ಥಾನದಲ್ಲಿದ್ದರೆ, ಗದಗ ಜಿಲ್ಲೆ(ಶೇ.101) 2ನೇ ಸ್ಥಾನದಲ್ಲಿದೆ. ವಿಜಯಪುರ ಹಾಗೂಕೊಡಗು ಜಿಲ್ಲೆ (ಶೇ.99) ಮೂರನೇ ಸ್ಥಾನದಲ್ಲಿವೆ. ಇನ್ನು2ನೇ ಡೋಸ್‌ ಹಂಚಿಕೆಯಲ್ಲಿಯೂ ಬೆಂಗಳೂರು ನಗರ(ಶೇ.88) ಪ್ರಥಮ ಸ್ಥಾನದಲ್ಲಿದೆ.

ಕೊಡಗು (ಶೇ.79)ದ್ವಿತೀಯ ಹಾಗೂ ರಾಮನಗರ ಜಿಲ್ಲೆ (ಶೇ.72) ತೃತೀಯಸ್ಥಾನದಲ್ಲಿದೆ.

Advertisement

ಕೆಂಪು ವಲಯದ ಜಿಲ್ಲೆಗಳು: ಲಸಿಕಾಕರಣದ ಸರಾಸರಿಪ್ರಮಾಣಕ್ಕಿಂತ ಕಡಿಮೆ ಸಾಧನೆ ಮಾಡಿದ 15 ಜಿಲ್ಲೆಗಳುಕೆಂಪು ವಲಯದಲ್ಲಿವೆ. ರಾಜ್ಯದಲ್ಲಿ ಮೊದಲ ಡೋಸ್‌ಲಸಿಕಾಕರಣದಲ್ಲಿ ಬೀದರ್‌ ಹಾಗೂ ಚಾಮರಾಜನಗರಜಿಲ್ಲೆಗಳಲ್ಲಿ ಅತಿ ಹಿಂದುಳಿದಿವೆ. ಬೀದರ್‌ ಜಿಲ್ಲೆಯಲ್ಲಿಈವರೆಗೆ ಮೊದಲ ಲಸಿಕೆ ಶೇ.87ರಷ್ಟಾಗಿದ್ದರೆ, 2ನೇ ಡೋಸ್‌ಶೇ.59ರಷ್ಟಾಗಿದೆ.

ಅದೇ ರೀತಿ ಚಾಮರಾಜನಗರದಲ್ಲಿಮೊದಲ ಲಸಿಕೆ ಶೇ.87ರಷ್ಟಾಗಿದ್ದರೆ, 2ನೇ ಡೋಸ್‌ಶೇ.64ರಷ್ಟಾಗಿದೆ.ಇನ್ನುಳಿದಂತೆ ಕಲಬುರಗಿ (ಮೊದಲ ಡೋಸ್‌-ಶೇ.88,2ನೇ ಡೋಸ್‌- ಶೇ.51), ಬಿಬಿಎಂಪಿ (ಮೊದಲ ಡೋಸ್‌-ಶೇ.89, 2ನೇ ಡೋಸ್‌-ಶೇ.66), ಬೆಂಗಳೂರುಗ್ರಾಮಾಂತರ (ಮೊದಲ ಡೋಸ್‌-ಶೇ.89, 2ನೇಡೋಸ್‌-ಶೇ.66), ರಾಯಚೂರು (ಮೊದಲ ಡೋಸ್‌-ಶೇ.89, 2ನೇ ಡೋಸ್‌-ಶೇ.53), ಯಾದಗಿರಿ (ಮೊದಲಡೋಸ್‌-ಶೇ.90, 2ನೇ ಡೋಸ್‌-ಶೇ.53), ಕೊಪ್ಪಳ(ಮೊದಲ ಡೋಸ್‌-ಶೇ.90, 2ನೇ ಡೋಸ್‌-ಶೇ.53),ಹಾವೇರಿ (ಮೊದಲ ಡೋಸ್‌-ಶೇ.90, 2ನೇ ಡೋಸ್‌-ಶೇ.55), ದಕ್ಷಿಣ ಕನ್ನಡ (ಮೊದಲ ಡೋಸ್‌-ಶೇ.92,2ನೇ ಡೋಸ್‌-ಶೇ.67), ಚಿಕ್ಕಮಗಳೂರು (ಮೊದಲಡೋಸ್‌-ಶೇ.92, 2ನೇ ಡೋಸ್‌-ಶೇ.59), ಧಾರವಾಡ(ಮೊದಲ ಡೋಸ್‌-ಶೇ.92, 2ನೇ ಡೋಸ್‌- ಶೇ.60),ಶಿವಮೊಗ್ಗ (ಮೊದಲ ಡೋಸ್‌-ಶೇ.92, 2ನೇ ಡೋಸ್‌-ಶೇ.59), ಮಂಡ್ಯ (ಮೊದಲ ಡೋಸ್‌-ಶೇ.92, 2ನೇಡೋಸ್‌-ಶೇ.72), ತುಮಕೂರು (ಮೊದಲ ಡೋಸ್‌-ಶೇ.92, 2ನೇ ಡೋಸ್‌- ಶೇ.66) ಜಿಲ್ಲೆಗಳು ಮೊದಲಡೋಸ್‌ ಹಂಚಿಕೆಯಲ್ಲಿ ನಿರೀಕ್ಷಿತ ಗುರಿ ತಲುಪದೆ ಕೆಂಪುವಲಯದಲ್ಲಿವೆ.

ಕೊರೊನಾರಂಭ ಕಾಲದಲ್ಲಿ ಲಸಿಕೆ ಸಮರ್ಪಕಪ್ರಮಾಣದಲ್ಲಿ ಸಿಗದೆ ಇದ್ದಾಗ ರಾತ್ರಿ-ಹಗಲೆನ್ನದೇಮುಗಿಬಿದ್ದು ಲಸಿಕೆ ಹಾಕಿಸಿಕೊಂಡ ಜನ, ಈಗಲಸಿಕೆ ಸಾಕಷ್ಟಿದ್ದರೂ ಹಾಕಿಸಿಕೊಳ್ಳಲು ಮುಂದೆಬಾರದೆ ಇರುವುದು ಸರ್ಕಾರಕ್ಕೂ ತಲೆನೋವಾಗಿದೆ.ಜಿಲ್ಲಾಡಳಿತಗಳು, ತಾಲೂಕಾಡಳಿತದ ಅಧಿಕಾರಿಗಳುಕಡ್ಡಾಯವಾಗಿ ಎಲ್ಲರಿಗೂ ಲಸಿಕೆ ಹಾಕಿಸಲು ಹರಸಾಹಸಪಡುತ್ತಿದ್ದಾರೆ. ರಾಜ್ಯ ಸರ್ಕಾರ ಈಗ ಕೋವಿಡ್‌ಎರಡೂ ಲಸಿಕೆ ಪಡೆಯುವುದು ಎಲ್ಲದಕ್ಕೂ ಕಡ್ಡಾಯಮಾಡುವ ಮಾರ್ಗಸೂಚಿ ಪ್ರಕಟಿಸಿರುವುದರಿಂದಒಂದೆರಡು ದಿನಗಳಿಂದ ಲಸಿಕಾರಣದ ಪ್ರಮಾಣದಲ್ಲಿತುಸು ಚೇತರಿಕೆ ಕಂಡು ಬಂದಿರುವುದು ಸಮಾಧಾನಕರ ಸಂಗತಿ.

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next