Advertisement

ವಾಮದೇವಪ್ಪ ಜಿಲ್ಲಾ ಕಸಾಪ ಸಾರಥಿ

04:08 PM Nov 22, 2021 | Team Udayavani |

ದಾವಣಗೆರೆ: ಭಾರೀ ಜಿದ್ದಾಜಿದ್ದಿಏರ್ಪಟ್ಟಿರುವ ಕನ್ನಡ ಸಾಹಿತ್ಯ ಪರಿಷತ್‌ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಭಾನುವಾರ ಶಾಂತಿಯುತವಾಗಿ ನಡೆದಿದ್ದು,ಶೇ. 45.50ರಷ್ಟುಮತದಾನವಾಗಿದೆ.

Advertisement

ಒಟ್ಟು 10,850ಮತದಾರರಲ್ಲಿ 4937ಮತದಾರರು ಮತ ಚಲಾಯಿಸಿದರು .4006 ಪುರುಷಹಾಗೂ 931 ಮಹಿಳಾ ಮತದಾರರುಮತದಾನ ಮಾಡಿದರು. ನಿವೃತ್ತ ಶಿಕ್ಷಕಬಿ. ವಾಮದೇವಪ್ಪ ಕಸಾಪ ನೂತನಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಬಿ. ವಾಮದೇವಪ್ಪ ಅತ್ಯಧಿಕ ಮತಪಡೆದು ಗೆಲುವಿನ ನಗೆ ಬೀರಿದರೆ,ಪ್ರತಿಸ್ಪರ್ಧಿ ಶಿವಕುಮಾರಸ್ವಾಮಿ ಕುರ್ಕಿಪರಾಭವಗೊಂಡರು.

ಜಿಲ್ಲಾಧ್ಯಕ್ಷ ಸ್ಥಾನಕ್ಕೆಇವರಿಬ್ಬರ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿತ್ತು.ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಿವೃತ್ತಶಿಕ್ಷಕ ಬಿ. ವಾಮದೇವಪ್ಪ ಹಾಲಿ ಕಸಾಪತಾಲೂಕು ಅಧ್ಯಕ್ಷರಾಗಿದ್ದಾರೆ.ಪ್ರತಿಸ್ಪರ್ಧಿ ಶಿವಕುಮಾರಸ್ವಾಮಿ ಕುರ್ಕಿಸಹ ಶಿಕ್ಷಕರಾಗಿದ್ದು ಅವರು ಈ ಹಿಂದೆಯೂಎರಡು ಬಾರಿ ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆಸ್ಪರ್ಧಿಸಿ ಪರಾಭವಗೊಂಡಿದ್ದರು. ಈಗಅವರಿಗೆ ಹ್ಯಾಟ್ರಿಕ್‌ ಸೋಲಾದಂತಾಗಿದೆ.ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆಮತದಾನ ನಡೆಯಿತು. ಮತದಾರಸದಸ್ಯರು ಬೆಳಿಗ್ಗೆಯಿಂದಲೇ ಮತಗಟ್ಟೆಗಳಿಗೆಬಂದು ತಮ್ಮ ಹಕ್ಕು ಚಲಾಯಿಸಿದರು.

ಬೆಳಿಗ್ಗೆ 10 ಗಂಟೆವರೆಗೆ ನಿಧಾನವಾಗಿಸಾಗಿದ ಮತದಾನ, ಮಧ್ಯಾಹ್ನ 1 ಗಂಟೆಯನಂತರ ತುರುಸು ಪಡೆದುಕೊಂಡಿತು.ಮತಗಟ್ಟೆ ಸಂಖ್ಯೆ 8/2ಅ ದಲ್ಲಿ ಅತಿಹೆಚ್ಚು ಅಂದರೆ ಶೇ. 78.13 ರಷ್ಟುಮತದಾನವಾಗಿದೆ. ಮತಗಟ್ಟೆ ವ್ಯಾಪ್ತಿಯ320 ಮತದಾರರಲ್ಲಿ 250 ಮತದಾರರುಮತ ಚಲಾಯಿಸಿದ್ದಾರೆ. ಮತಗಟ್ಟೆ ಸಂಖ್ಯೆ8/3ರಲ್ಲಿ ಅತಿ ಕಡಿಮೆ ಅಂದರೆ ಶೇ.37.76ರಷ್ಟು ಮತದಾನವಾಗಿದ್ದು 1213ಮತದಾರರಲ್ಲಿ 458 ಮತದಾರರುಮತದಾನ ಮಾಡಿದ್ದಾರೆ.ಅಭ್ಯರ್ಥಿಗಳು, ಅಭ್ಯರ್ಥಿಗಳಬೆಂಬಲಿಗರು ಮತಗಟ್ಟೆ ಬಳಿ ನಿಂತುತಮಗೆ, ತಮ್ಮವರಿಗೆ ಮತ ನೀಡುವಂತೆವಿನಂತಿಸಿಕೊಂಡರು. ಕೆಲವರು ರಾಜ್ಯಾಧ್ಯಕ್ಷಸ್ಥಾನದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದರು.

ಮತಪತ್ರ ನೀಡಲುಅಭ್ಯರ್ಥಿಗಳು ಮತಗಟ್ಟೆಗಳ ಎದುರುಶಾಮಿಯಾನ ಹಾಕಿದ್ದರು. ಕೆಲ ಅಭ್ಯರ್ಥಿಗಳಪರವಾಗಿ ಕೆಲವು ಜನಪ್ರತಿನಿಧಿಗಳು ಸಹಮತಗಟ್ಟೆಗೆ ಆಗಮಿಸಿ ಅಭ್ಯರ್ಥಿ ಪರಪ್ರಚಾರ ಮಾಡಿದರು.ಬೆಳಿಗ್ಗೆ 10ಗಂಟೆಯವರೆಗೆ 350ಪುರುಷರು, 98 ಮಹಿಳೆಯರು ಸೇರಿ ಒಟ್ಟು648 ಜನರು ಮತ ಚಲಾಯಿಸಿದರು.ಶೇಕಡಾವಾರು ಮತದಾನ 5.97 ಆಗಿತ್ತು.10 ಗಂಟೆಯಿಂದ 12 ಗಂಟೆವರೆಗೆ 1273ಪುರುಷ, 273 ಮಹಿಳಾ ಮತದಾರರುಮತ ಚಲಾಯಿಸಿದ್ದು 14.25 ರಷ್ಟುಮತದಾನವಾಯಿತು.

Advertisement

ಸಂಜೆ 4 ಗಂಟೆವೇಳೆಗೆ ಮತದಾನ ಶೇ. 45.5 ರಷ್ಟಾಯಿತು.ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬಿ. ವಾಮದೇವಪ್ಪಹಾಗೂ ಶಿವಕುಮಾರಸ್ವಾಮಿ ಕುರ್ಕಿಇಬ್ಬರೇ ಕಣದಲ್ಲಿರುವುದರಿಂದ ನೇರಸ್ಪರ್ಧೆ ಏರ್ಪಟ್ಟಿತ್ತು.ದಾವಣಗೆರೆಯ ಪ್ರೌಢಶಾಲಾಮೈದಾನದಲ್ಲಿರುವ ಬಾಲಕರ ಪ್ರೌಢಶಾಲೆ(ಐದು ಮತಗಟೆ)r, ಲೋಕಿಕೆರೆಯಮಾರುತಿ ಸರ್ಕಾರಿ ಪ್ರೌಢಶಾಲೆ, ಹರಿಹರತಾಲೂಕಿನ ಮಲೆಬೆನ್ನೂರಿನ ಸರ್ಕಾರಿಪದವಿಪೂರ್ವ ಕಾಲೇಜು, ಹರಿಹರದಗಾಂಧಿ ಮೈದಾನದಲ್ಲಿರುವ ಸರ್ಕಾರಿಬಾಲಕಿಯರ ಪ್ರೌಢಶಾಲೆ, ಚನ್ನಗಿರಿಯತಾಲೂಕು ಕಚೇರಿ, ಸಂತೆಬೆನ್ನೂರಿನನಾಡ ಕಚೇರಿ ಮತ್ತು ಬಸವಪಟ್ಟಣದನಾಡ ಕಚೇರಿ, ಹೊನ್ನಾಳಿಯ ತಾಲೂಕುಕಚೇರಿ ಸಭಾಂಗಣ, ಸಾಸ್ವೆಹಳ್ಳಿಯನಾಡಕಚೇರಿ ಹಾಗೂ ಜಗಳೂರುತಾಲೂಕು ಕಚೇರಿ ಮತ್ತು ನ್ಯಾಮತಿತಾಲೂಕು ಕಚೇರಿ ಸೇರಿದಂತೆ ಜಿಲ್ಲೆಯಒಟ್ಟು 15 ಮತಗಟ್ಟೆಗಳಲ್ಲಿ ಮತದಾನನಡೆಯಿತು.

ಪ್ರತಿ ಮತಗಟ್ಟೆಗೆ ಅಧಿಕಾರಿ, ಸಹಾಯಕಅಧಿಕಾರಿ, ಸಹಾಯಕರು ಸೇರಿ ಐವರುಸಿಬ್ಬಂದಿಯನ್ನು ನೇಮಿಸಲಾಗಿತ್ತು.ಎಲ್ಲ ಮತಗಟ್ಟೆಗಳಲ್ಲಿ ಪೊಲೀಸ್‌ಬಂದೋಬಸ್ತ್ ಸಹ ಮಾಡಲಾಗಿತ್ತು.ಜಿಲ್ಲಾ ಚುನಾವಣಾಧಿಕಾರಿಯಾಗಿತಹಶೀಲ್ದಾರ್‌ ಗಿರೀಶ್‌ಕಾರ್ಯನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next