Advertisement

ಸ್ಪಚ್ಛತೆಯಿಂದ ರೋಗ ಮುಕ್ತ ಸಮಾಜ ನಿರ್ಮಾಣ

01:22 PM Oct 26, 2021 | Team Udayavani |

ದಾವಣಗೆರೆ: ಸ್ವತ್ಛತೆಗೆ ಆದ್ಯತೆ ನೀಡುವುದರಿಂದ ರೋಗಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂಬುದನ್ನುಮನಗಂಡಿರುವ ಸರ್ಕಾರಗಳು ಇಂದು ದೇಶದಲ್ಲಿ ಸ್ವತ್ಛತೆಗೆ ಆದ್ಯತೆ ನೀಡಲಾಗುತ್ತಿದ್ದು, ನಾಗರಿಕರುಸರ್ಕಾರದ ಕಾರ್ಯಕ್ಕೆ ಬೆಂಬಲವಾಗಿರಬೇಕು ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕಡಾ| ಶಾಮನೂರು ಶಿವಶಂ ಕರಪ್ಪ ಹೇಳಿದರು.

Advertisement

ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮಪಂಚಾಯಿತಿ ವತಿಯಿಂದ ಗ್ರಾಮದ ರವೀಂದ್ರನಾಥಬಡಾವಣೆಯಲ್ಲಿ ಸ್ವತ್ಛ ಸಂಕೀರ್ಣವನ್ನು ಉದ್ಘಾಟಿಸಿಅವರು ಮಾತನಾಡಿದರು. ಭಾರತ ಶೇ. 90 ರಷ್ಟುಹಳ್ಳಿಗಳನ್ನು ಹೊಂದಿರುವ ದೇಶ. ಹಳ್ಳಿಗಳಲ್ಲಿ ಸ್ವತ್ಛತೆಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇರುವುದರಿಂದಹಳ್ಳಿಗಳಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಸರ್ಕಾರ ಆದ್ಯತೆನೀಡಲಾಗುತ್ತಿದ್ದು, ಗ್ರಾಮೀಣ ಭಾಗದ ಜನರುಸಹ ಸ್ವತ್ಛತೆಗೆ ಆದ್ಯತೆ ನೀಡಿ ರೋಗಮುಕ್ತ ಸಮಾಜನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.

ಶಾಸಕ ಎಸ್‌.ಎ. ರವೀಂದ್ರನಾಥ್‌ ಮಾತನಾಡಿ, ಈಹಿಂದೆ ಗ್ರಾಮೀಣ ಭಾಗದಲ್ಲಿ ಎಲ್ಲೆಂದರಲ್ಲಿ ತಿಪ್ಪೆ ಹಾಕಿಸಾಂಕ್ರಾಮಿಕ ರೋಗಗಳು ಹರಡುತ್ತಿದ್ದವು. ಇದಕ್ಕೆಸರ್ಕಾರ ಪರಿಹಾರವಾಗಿ ಇಂತಹ ಸಂಕೀರ್ಣಗಳನ್ನುನಿರ್ಮಿಸಿ ರೋಗಮುಕ್ತ ಸಮಾಜಕ್ಕೆ ಮುಂದಾಗಿದೆ.ಕೇವಲ ದೊಡ್ಡ ನಗರಗಳಿಗೆ ಸೀಮಿತವಾಗಿದ್ದ ಇಂತಹಸಂಕೀರ್ಣಗಳು ಇಂದು ಗ್ರಾಮಾಂತರ ಪ್ರದೇಶದಲ್ಲೂ ಆರಂಭಗೊಂಡಿವೆ.

ಗ್ರಾಮೀಣ ಭಾಗದ ಜನರುಗ್ರಾಮ ಪಂಚಾಯಿತಿಯೊಂದಿಗೆ ಸಹಕರಿಸಿದರೆಸಾವಯವ ಗೊಬ್ಬರ ತಯಾರಾಗಲಿದೆ. ಇದರಿಂದರೈತರ ಬೆಳೆಗಳಿಗೂ ಅನುಕೂಲವಾಗಲಿದೆ ಎಂದುಸಲಹೆ ನೀಡಿದರು.ಜಿಪಂ ಮಾಜಿ ಸದಸ್ಯ ಜಿ.ಸಿ. ನಿಂಗಪ್ಪಮಾತನಾಡಿ, ಗ್ರಾಮ ಪಂಚಾಯಿತಿಗಳಿಗೆ ಇತ್ತೀಚಿನದಿನಗಳಲ್ಲಿ ಹೆಚ್ಚಿನ ಅನುದಾನ ಲಭ್ಯವಾಗುತ್ತಿದೆ.

ಈಅನುದಾನ ಬಳಸಿಕೊಂಡು ಉತ್ತಮ ಕೆಲಸಗಳನ್ನುಶಿರಮಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಮಾಡಲಿಎಂದು ಆಶಿಸಿದರು.ತಾಪಂ ಮಾಜಿ ಸದಸ್ಯ ಎಂ. ಮಂಜಪ್ಪ ಮಾತನಾಡಿ,ಗ್ರಾಮಸ್ಥರ ಒಳಿತಿಗಾಗಿಯೇ ಸರ್ಕಾರ ಇಂಥಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಗ್ರಾಮಸ್ಥರುಸಹಕಾರ ನೀಡುವ ಮೂಲಕ ಪಂಚಾಯಿತಿಕಾರ್ಯಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಕರೆ ನೀಡಿದರು.

Advertisement

ತಾಪಂ ಮಾಜಿ ಸದಸ್ಯ ಎ.ಬಿ. ಹನುಮಂತಪ್ಪಮಾತನಾಡಿ, ಸರ್ಕಾರದ ಮಾರ್ಗಸೂಚಿಗಳನ್ನುಅನುಸರಿಸಿ ಗ್ರಾಮವನ್ನು ಪ್ಲಾಸ್ಟಿಕ್‌ ಮುಕ್ತಗ್ರಾಮವನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನುತಾಎ.ಎಂ. ಸುರೇಶ್‌ಬಾಬು ಮಾತನಾಡಿ, ಇದೊಂದುಉತ್ತಮ ಕಾರ್ಯಕ್ರಮವಾಗಿದೆ. ಸರ್ಕಾರಕೋವಿಡ್‌ ನೆಪವೊಡ್ಡಿ ಅನುದಾನ ನೀಡದ ಕಾರಣಅನೇಕ ಗ್ರಾಮಾಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ.ಶಾಸಕರು ಅನುದಾನ ಒದಗಿಸಬೇಕು ಎಂದುಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಲಿತಮ್ಮದೇವೇಂದ್ರಪ್ಪ, ಅಭಿವೃದ್ಧಿ ಅಧಿಕಾರಿ ಕಾತ್ಯಾಯಿನಿ,ಎಸ್‌.ಎಂ. ರುದ್ರೇಶ್‌, ಎಸ್‌.ಬಿ. ಚಂದ್ರಪ್ಪ, ಎಸ್‌.ಕೆ. ಮಾಲತೇಶ್‌, ವೀರೇಂದ್ರ ಪಾಟೀಲ್‌, ಶಶಿ,ಎ.ಕೆ. ನೀಲಪ್ಪ, ಗುಡ್ಡಪ್ಪ, ಮಲ್ಲಿಕಾರ್ಜುನ್‌,ಕೆ.ಎಸ್‌. ರೇವಣಸಿದ್ದಪ್ಪ, ಆರ್‌. ದಿನೇಶ್‌, ಗ್ರಾಮಪಂಚಾಯಿತಿ ಹಾಲಿ ಮತ್ತು ಮಾಜಿ ಸದಸ್ಯರು,ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next