ಹೊನ್ನಾಳಿ: ಇಡೀ ಜಗತ್ತು ಕೊರೊನಾ ಮಹಾಮಾರಿಯಿಂದ ತತ್ತರಿಸಿದಾಗ ಭಾರತದಲ್ಲಿಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಅಂದಿನಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಹಾಗೂ ಈಗಿನ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಸಮರ್ಥವಾಗಿ ಎದುರಿಸಿದ್ದಾರೆ.ಅಲ್ಲದೆ ಕೊರೊನಾ ಸೋಂಕಿತರಿಗೆ ಬೇಕಾದಬೆಡ್, ಔಷಧೋಪಾಚಾರ, ಲಸಿಕೆಹಾಕುವುದರಿಂದ ಹಿಡಿದು ಎಲ್ಲಾ ವ್ಯವಸ್ಥೆಗಳನ್ನುಮಾಡಿದ ಪರಿಣಾಮ ಈಗ ಪ್ರಕರಣಗಳ ಸಂಖ್ಯೆಗಣನೀಯವಾಗಿ ಕಡಿಮೆಯಾಗಿದೆ ಎಂದುಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನ್ಯಾಮತಿ ಪಟ್ಟಣದ ಬಾಲಕಿಯರಸರ್ಕಾರಿ ಪದವಿಪೂರ್ವ ಕಾಲೇಜುಆವರಣದಲ್ಲಿ ನಡೆಯಲಿರುವ ಸೂಪರ್‌ಕೊರೊನಾ ವಾರಿಯರ್ ಪ್ರಶಸ್ತಿ ಪ್ರದಾನಹಾಗೂ ಕೊರೊನಾ ವಾರಿಯರ್ಸ್‌ಗೆ ಸನ್ಮಾನಸಮಾರಂಭದ ಪೂರ್ವಸಿದ್ಧತೆ ವೀಕ್ಷಿಸಿ ಅವರು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಎರಡು ಬಾರಿಕೊರೊನಾ ಸೋಂಕು ದೃಢಪಟ್ಟರೂ ಆತಂಕಪಡದೆ ಚಿಕಿತ್ಸೆ ಪಡೆದು ಆರೋಗ್ಯ ತಜ್ಞರಭೇಟಿ ಹಾಗೂ ಸಲಹೆ ಸೇರಿದಂತೆ ಹಲವಾರುಕ್ರಮಗಳನ್ನು ಕೈಗೊಂಡಿದ್ದರು. ಕೊರೊನಾಸೋಂಕು ನಿಯಂತ್ರಿಸುವಲ್ಲಿ ಶ್ರಮಿಸಿದ್ದಾರೆ.
ಇಳಿವಯಸ್ಸಿನಲ್ಲೂ ಕೋವಿಡ್ ನಿಯಂತ್ರಿಸುವಲ್ಲಿಯಶಸ್ವಿಯಾಗಿರುವ ಮಾಜಿ ಮುಖ್ಯಮಂತ್ರಿಬಿ.ಎಸ್. ಯಡಿಯೂರಪ್ಪ ಅವರಿಗೆ ಹೊನ್ನಾಳಿಹಾಗೂ ನ್ಯಾಮತಿ ತಾಲೂಕಿನ ಜನತೆಯಪರವಾಗಿ “ಸೂಪರ್ ಕೊರೊನಾ ವಾರಿಯರ್’ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.ಮೊದಲ ಹಾಗೂ ಎರಡನೇ ಅಲೆಯಲ್ಲಿಕೊರೊನಾ ವಿರುದ್ಧ ಹೋರಾಡಿ ಲಸಿಕಾಅಭಿಯಾನ ನಡೆಸಿದ ಅವಳಿ ತಾಲೂಕಿನಒಟ್ಟು 5200 ಕೊರೊನಾ ವಾರಿಯರ್ಸ್‌ಗಳಿಗೆಪುಷ್ಪವೃಷ್ಟಿ ಸನ್ಮಾನ ಮಾಡಲಾಗುದು.
ಸಂಸದಡಾ| ಜಿ.ಎಂ. ಸಿದ್ದೇಶ್ವರ್, ಆರೋಗ್ಯ ಸಚಿವಡಾ| ಕೆ. ಸುಧಾಕರ್ ಸೇರಿದಂತೆ ಗಣ್ಯರುಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದುತಿಳಿಸಿದರು.ನ್ಯಾಮತಿ ತಹಶೀಲ್ದಾರ್ ತನುಜಾ ಸೌದತ್ತಿ,ಸಿಪಿಐ ದೇವರಾಜ್, ಉಪ ತಹಶೀಲ್ದಾರ್‌ನಾಗರಾಜ್, ಆರ್‌ಎಫ್‌ಒ ದೇವರಾಜ್‌ಇದ್ದರು.