Advertisement

ಪ್ರಾಥಮಿಕ ಶಿಕ್ಷಾ ವರ್ಗ ಆಯೋಜನೆ ಸ್ವಾಗತಾರ್ಹ

03:03 PM Aug 19, 2022 | Team Udayavani |

ದಾವಣಗೆರೆ: ಬಂಜಾರ (ಲಂಬಾಣಿ) ಸಮಾಜದಕುಲಗುರು ಸಂತ ಸೇವಾಲಾಲ್‌ ಅವರ ಜನ್ಮಸ್ಥಳಸೂರಗೊಂಡನಕೊಪ್ಪದ ಮಹಾಮಠದಲ್ಲಿಆರ್‌ಎಸ್ಸೆಸ್‌ ಐಟಿಸಿ (ಉದ್ಯೋಗಿನಿ ಪ್ರಾಥಮಿಕಶಿಕ್ಷಾ ವರ್ಗ) ಶಿಬಿರ ಹಮ್ಮಿಕೊಂಡಿರುವುದುಸ್ವಾಗತಾರ್ಹ ಎಂದು ಜಿಲ್ಲಾ ಬಂಜಾರ(ಲಂಬಾಣಿ) ಸೇವಾ ಸಂಘದ ಗೌರವಾಧ್ಯಕ್ಷಜಿ. ಮಂಜಾ ನಾಯ್ಕ ತಿಳಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಆರೆಸ್ಸೆಸ್‌, ಸಂಘಪರಿವಾರದೊಂದಿಗೆ ಗೋರ್‌ ಬಂಜಾರಸಮುದಾಯ ಅವಿನಾಭಾವ ಸಂಬಂಧಹೊಂದಿದೆ. ನಮ್ಮ ಸಮುದಾಯದವರುಕಾರ್ಯಕ್ರಮಕ್ಕೆ ಪ್ರಾರಂಭ ಹಂತದಿಂದಮುಕ್ತಾಯದವರೆಗೂ ರಕ್ಷಣೆಗೆ ನಿಂತುಯಾವುದೇ ಅಡ್ಡಿ ಅಡೆತಡೆ ಇಲ್ಲದಂತೆ ಸುಗಮವಾಗಿ ನಡೆಸಿಕೊಡುತ್ತೇವೆ ಎಂದರು. ಆರ್‌ಎಸ್‌ಎಸ್‌ ಸ್ಥಾಪನೆಯ ಕ್ಷಣದಿಂದಕರ್ನಾಟಕ ರಾಜ್ಯವೂ ಸೇರಿದಂತೆ ಇಡೀಭಾರತಾದ್ಯಂತ ಗೋರ್‌ ಬಂಜಾರ ಸಮುದಾಯನಿರಂತರವಾಗಿ ವಿವಿಧ ಕ್ಷೇತ್ರಗಳಲ್ಲಿ ಕೈಜೋಡಿಸಿಸೇವೆ ಸಲ್ಲಿಸುತ್ತಿದೆ.

ಗೋರ್‌ ಸಮುದಾಯದಅನೇಕರು ಸಂಘ ಮತ್ತು ಪರಿವಾರದವಿವಿಧ ಸಂಘಟನೆಗಳಲ್ಲಿ ಉನ್ನತ ಜವಾಬ್ದಾರಿನಿರ್ವಹಿಸುತ್ತಿದ್ದಾರೆ. ಅಂತಹ ದೇಶಭಕ್ತ ಧರ್ಮಸಂಘಟನೆಯೊಂದಿಗೆ ದೇಶಸೇವೆಯ ಕೆಲಸದಲ್ಲಿಭಾಗಿಯಾಗಿರುವುದು ನಮ್ಮ ಹೆಮ್ಮೆ. ಯಾವುದೇಜಾತಿ ಭೇದವಿಲ್ಲದೆ ಗೋರ್‌ ಬಂಜಾರಸಮುದಾಯದ ಸಹಸ್ರಾರು ಯುವಕರಿಗೆ ಪ್ರಶಿಕ್ಷಣವನ್ನು ನೀಡಿ ಅವರಲ್ಲಿ ಮಾನಸಿಕ ,ತಾರ್ಕಿಕ ಬೌದ್ಧಿಕ ಮತ್ತು ದೈಹಿಕ ಸಾಮರ್ಥಯವನ್ನುವೃದ್ಧಿಸಿ ಅವರ ಅಭಿರುಚಿ ಮತ್ತು ಸಾಮರ್ಥ್ಯಕ್ಕೆಅನುಗುಣವಾಗಿ ರಾಜ್ಯ ಮತ್ತು ರಾಷ್ಟ್ರೀಯಪ್ರಮುಖ ಜವಾಬ್ದಾರಿಗಳನ್ನು ನೀಡಿದೆ ಮತ್ತುಬೆಳವಣಿಗೆಯಲ್ಲಿ ಸಹಕಾರ ನೀಡುತ್ತಿದೆ.

ಎಲ್ಲಸಮುದಾಯಗಳನ್ನು ಸಮನವಾಗಿ ಗೌರವಿಸುವಎಲ್ಲ ಸಂಪ್ರದಾಯಗಳನ್ನು ಪರಂಪರೆಗಳನ್ನುಎಲ್ಲ ಪೂಜಾ ಪದ್ಧತಿಗಳನ್ನು ಶ್ರದ್ಧೆಯಿಂದ ಗೌರವಿಸುವ ರಾಷ್ಟ್ರೀಯ ಸ್ವಯಂಸೇವಕಸಂಘದ ಬಗ್ಗೆ ಇಲ್ಲ ಸಲ್ಲದ ಆರೋಪಗಳುಖಂಡನೀಯ. ಶಿಬಿರದ ರಕ್ಷಣೆಗೆ ನಾವು ಬದ್ಧಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next