Advertisement

ಉಳುಮೆ ಮಾಡಿ ಗಮನ ಸೆಳೆದ ವಚನಾನಂದ ಶ್ರೀ

07:03 PM Jul 29, 2022 | Team Udayavani |

ದಾವಣಗೆರೆ: ಹರಿಹರದ ವೀರಶೈವಪಂಚಮಸಾಲಿ ಜಗದ್ಗುರು ಪೀಠದ ಪೀಠಾಧಿಪತಿ, ಶ್ವಾಸಗುರು ಶ್ರೀ ವಚನಾನಂದಸ್ವಾಮೀಜಿ ಉಳುಮೆ ಮಾಡುವ ಮೂಲಕಗಮನ ಸೆಳೆದರು.ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ ಎಸ್ಸೆಸ್ಸೆಲ್ಸಿಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚುಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿಪಾಲ್ಗೊಂಡು ಹರಿಹರದ ಪೀಠಕ್ಕೆ ವಾಪಸ್‌ಆಗುತ್ತಿರುವ ಸಂದರ್ಭದಲ್ಲಿ ಚಳಗೇರಿಸಮೀಪ ಮೆಕ್ಕೆಜೋಳದ ಹೊಲದಲ್ಲಿರೈತರು ಬಳಗುಂಟೆ (ಬಳಸಾಲು)ಮಾಡುತ್ತಿರುವುದನ್ನು ಕಂಡೊಡನೆ ಕಾರಿನಿಂದಇಳಿದ ಶ್ರೀಗಳು, ಹೊಲಕ್ಕೆ ಹೋಗಿ ರೈತರ ಬಳಿಸಮಾಲೋಚನೆ ನಡೆಸಿದರು.

Advertisement

ನಂತರ ಕೆಲ ಕಾಲಬಳಗುಂಟೆ ಹೊಡೆಯುವ ಮೂಲಕ ಅಚ್ಚರಿಮೂಡಿಸಿದರು. ಈ ಮೂಲಕ ಪ್ರಮುಖವಾಗಿಕೃಷಿಯನ್ನೇ ಅವಲಂಬಿಸಿರುವ ವೀರಶೈವಪಂಚಮಸಾಲಿ ಸಮಾಜದ ಗುರುಗಳುಕೃಷಿ ಚಟುವಟಿಕೆಯನ್ನೂ ಮಾಡಬಲ್ಲರುಎಂಬುದಕ್ಕೆ ಸಾಕ್ಷಿಯಾದರು.ಯಾರಾದರೂ ನಿಮಗೆ ನೆಮ್ಮದಿ ಎಲ್ಲಿಸಿಗುತ್ತೆ ಅಂತೇನಾದರೂ ಕೇಳಿದರೆ ಅದಕ್ಕೆಉತ್ತರವಾಗಿ ನಾವು ಕೃಷಿ ಚಟುವಟಿಕೆಯಲ್ಲಿ,ಭೂಮಿ ಉಳುಮೆ ಮಾಡುವುದರಲ್ಲಿಎನ್ನುತ್ತೇವೆ.

ಏಕೆಂದರೆ ಅದು ಪ್ರತಿಯೊಬ್ಬನೇಗಿಲಯೋಗಿಯ ಹುಟ್ಟು ಗುಣ. ಕೃಷಿಎಂಬುದು ನಮ್ಮ ಡಿಎನ್‌ಎಯಲ್ಲಿ ಬೆರೆತುಹೋಗಿದೆ. ಮಣ್ಣು ನಮ್ಮ ಕರ್ಮಭೂಮಿ.ಭೂತಾಯಿಯೇ ನಮ್ಮ ದೇವರು ಎಂದುವಚನಾನಂದ ಸ್ವಾಮೀಜಿ ಹೇಳಿದರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next